ದುಬಾೖ: ರವಿವಾರದ ಎರಡೂ ಪಂದ್ಯಗಳು ಸೂಪರ್ ಟೈಯಲ್ಲಿ ಅಂತ್ಯಗೊಂಡಿರುವುದು ವಿಶೇಷವಾಗಿದೆ. ದಿನದ ಎರಡನೇ ಪಂದ್ಯ ಎರಡು ಬಾರಿ ಟೈಗೊಂಡಿದ್ದು ಮೂರನೇ ಪ್ರಯತ್ನದಲ್ಲಿ ಪಂಜಾಬ್ ತಂಡವು ಗೇಲ್ ಮತ್ತು ಅಗರ್ವಾಲ್ ಅವರ ಉತ್ತಮ ಆಟದಿಂದಾಗಿ ಮುಂಬೈ ತಂಡವನ್ನು ಸೋಲಿಸಲು ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಆರಂಭಿಕ ಕ್ವಿಂಟನ್ ಡಿ ಕಾಕ್ ಅವರ ಹ್ಯಾಟ್ರಿಕ್ ಅರ್ಧ ಶತಕ ಸಾಹಸದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 176 ರನ್ ಗಳಿಸಿ ಸವಲೊಡ್ಡಿತು. ಗುರಿ ಬೆನ್ನತ್ತಿದ ಪಂಜಾಬ್ 20 ಓವರ್‌ಗಳಲ್ಲಿ 6 ವಿಕೆಟಿಗೆ 176ರನ್ ಗಳಿಸಿದ್ದರಿಂದ ಪಂದ್ಯ ಟೈಗೊಂಡಿತು.
ಟೈ ಬಳಿಕ ನಡೆದ ಸೂಪರ್ ಓವರ್ ಕೂಡ ಟೈಗೊಂಡಿರುವುದು ಐಪಿಎಲ್‌ನಲ್ಲಿ ಇದೇ ಮೊದಲ ಸಲವಾಗಿದೆ. ಎರಡನೇ ಸೂಪರ್ ಓವರ್‌ನಲ್ಲಿ ಮುಂಬೈ 11 ರನ್ ಗಳಿಸಿದ್ದರೆ ಗೇಲ್ ಮತ್ತು ಅಗರ್ವಾಲ್ ಭರ್ಜರಿ ಬ್ಯಾಟಿಂಗ್‌ನಿಂದ ಪಂಜಾಬ್ ಜಯಭೇರಿ ಬಾರಿಸಿತು.
ಕಳೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದ ಕ್ರಿಸ್ ಗೇಲ್ ಈ ಪಂದ್ಯದಲ್ಲಿ 24 ರನ್ನಿಗೆ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಆರ್‌ಸಿಬಿ ವಿರುದ್ಧ ಸಿಕ್ಸರ್ ಮೂಲಕ ತಂಡಕ್ಕೆ ಜಯ ತಂದಿತ್ತ ಪೂರನ್ (24)ಆರಂಭದಲ್ಲಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ಬುಮ್ರಾ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ಲಾಂಗ್ ಆಫ್ನಲ್ಲಿದ್ದ ಕೋಲ್ಟರ್ ನೈಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
Related Articles
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಬಿ ಆರ್ಷದೀಪ್ 9
ಡಿ ಕಾಕ್ ಸಿ ಅಗರ್ವಾಲ್ ಬಿ ಜೋರ್ಡನ್ 53
ಸೂರ್ಯಕುಮಾರ್ ಸಿ ಅಶ್ವಿನ್ ಬಿ ಶಮಿ 0
ಇಶಾನ್ ಕಿಶನ್ ಸಿ ಅಶ್ವಿನ್ ಬಿ ಆರ್ಷದೀಪ್ 7
ಕೃಣಾಲ್ ಪಾಂಡ್ಯ ಸಿ ಹೂಡ ಬಿ ಬಿಶ್ನೋಯಿ 34
ಹಾರ್ದಿಕ್ ಪಾಂಡ್ಯ ಸಿ ಪೂರನ್ ಬಿ ಶಮಿ 8
ಕೈರನ್ ಪೊಲರ್ಡ್ ಔಟಾಗದೆ 34
ನಥನ್ ಕೋಲ್ಟರ್ ನೈಲ್ ಔಟಾಗದೆ 24
ಇತರ 7
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 176
ವಿಕೆಟ್‌ತನ: 1-23, 2-24, 3-38, 4-96, 5-116, 6-119.
ಬೌಲಿಂಗ್
ಗ್ಲೆನ್ ಮ್ಯಾಕ್ಸ್‌ವೆಲ್ 4-0-24-0
ಮೊಹಮ್ಮದ್ ಶಮಿ 4-0-30-2
ಆರ್ಷದೀಪ್ ಸಿಂಗ್ 3-0-35-2
ಕ್ರಿಸ್ ಜೋರ್ಡನ್ 3-0-32-1
ಮುರುಗನ್ ಅಶ್ವಿನ್ 3-0-28-0
ದೀಪಕ್ ಹೂಡ 1-0-9-0
ರವಿ ಬಿಶ್ನೋಯಿ 2-0-12-1
ಪಂಜಾಬ್
ಕೆ. ಎಲ್. ರಾಹುಲ್ ಬಿ ಬುಮ್ರಾ 77
ಅಗರ್ವಾಲ್ ಬಿ ಬುಮ್ರಾ 11
ಕ್ರಿಸ್ ಗೇಲ್ ಸಿ ಬೌಲ್ಟ್ ಬಿ ಚಹರ್ 24
ಪೂರನ್ ಸಿ ಕೋಲ್ಟರ್ ನೈಲ್ ಬಿ 24
ಮೆಕ್ಸ್‌ವೆಲ್ ಸಿ ರೋಹಿತ್ ಬಿ ಚಹರ್ 0
ದೀಪಕ್ ಹೂಡ ಔಟಾಗದೆ 23
ಕ್ರಿಸ್ ಜೋರ್ಡನ್ ಔಟಾಗದೆ 13
ಇತರ 4
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 176
ವಿಕೆಟ್ ಪತನ: 1-33, 2-75, 3- 108, 4-115, 5-153, 6-176.
ಬೌಲಿಂಗ್
ಟ್ರೆಂಟ್ ಬೌಲ್ಟ್ 4-0-48-0
ಕೃಣಾಲ್ ಪಾಂಡ್ಯ 2-0-12-0
ಜಸ್‌ಪ್ರೀತ್ ಬುಮ್ರಾ 4-0-24-3
ನಥನ್ ಕೋಲ್ಟರ್ ನೈಲ್ 4-0-33-0
ಕೈರನ್ ಪೊಲಾರ್ಡ್ 2-0-26-0
ರಾಹುಲ್ ಚಹರ್ 4-0-33-2