Advertisement

ಪಂಜಾಬ್‌ಗ ಸೋಲಿನ ಪಂಚ್‌ ನೀಡಿದ ರಾಜಸ್ಥಾನ್‌

11:36 PM Oct 30, 2020 | mahesh |

ದುಬಾೖ: ಪ್ಲೇ ಆಫ್‌ ಯೋಜನೆಯಲ್ಲಿದ್ದ ಪಂಜಾಬ್‌ಗ ರಾಜಸ್ಥಾನ್‌ ಬಲವಾದ ಸೋಲಿನ ಪಂಚ್‌ ಒಂದನ್ನು ಕೊಟ್ಟಿದೆ. ಶುಕ್ರವಾರದ ನಿರ್ಣಾಯಕ ಮೇಲಾಟವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದ ಸ್ಮಿತ್‌ ಪಡೆ ತಾನೂ ರೇಸ್‌ನಲ್ಲಿ ಉಳಿದಿದ್ದೇನೆ ಎಂಬುದಾಗಿ ಸಾರಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌, ಕ್ರಿಸ್‌ ಗೇಲ್‌ ಅವರ ಸ್ಫೋಟಕ 99 ರನ್‌ ಪರಾಕ್ರಮ ಹಾಗೂ ಅವರು ನಾಯಕ ಕೆ.ಎಲ್‌. ರಾಹುಲ್‌ ಜತೆ ದ್ವಿತೀಯ ವಿಕೆಟಿಗೆ ಪೇರಿಸಿದ 120 ರನ್‌ ಸಾಹಸದಿಂದ 4 ವಿಕೆಟ್‌ನಷ್ಟಕ್ಕೆ 185 ರನ್‌ ಪೇರಿಸಿತು. ಜವಾಬಿತ್ತ ರಾಜಸ್ಥಾನ್‌ ಕೇವಲ 17.3 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 186 ರನ್‌ ಬಾರಿಸಿ 6ನೇ ಗೆಲುವನ್ನು ದಾಖಲಿಸಿತು.

ಬೆನ್‌ ಸ್ಟೋಕ್ಸ್‌ ಮತ್ತು ರಾಬಿನ್‌ ಉತ್ತಪ್ಪ 5.3 ಓವರ್‌ಗಳಿಂದ 60 ರನ್‌ ಪೇರಿಸಿ ರಾಜಸ್ಥಾನಕ್ಕೆ ಪ್ರಚಂಡ ಆರಂಭ ಒದಗಿಸಿದರು. ಸ್ಟೋಕ್ಸ್‌ 26 ಎಸೆತಗಳಿಂದ 50 ರನ್‌ (6 ಬೌಂಡರಿ, 3 ಸಿಕ್ಸರ್‌) ಸಿಡಿಸಿದರು. ಸ್ಯಾಮ್ಸನ್‌ ಕೂಡ ಬಿರುಸಿನ ಆಟಕ್ಕಿಳಿದು 25 ಎಸೆತಗಳಿಂದ 48 ರನ್‌ ಬಾರಿಸಿದರು (4 ಬೌಂಡರಿ, 3 ಸಿಕ್ಸರ್‌). ನಾಯಕ ಸ್ಮಿತ್‌ (ಔಟಾಗದೆ 31) ಮತ್ತು ಬಟ್ಲರ್‌ (ಔಟಾಗದೆ 22) ಸೇರಿಕೊಂಡು 15 ಎಸೆತ ಬಾಕಿ ಇರುವಾಗಲೇ ತಂಡವನ್ನು ದಡ ಸೇರಿಸಿದರು.

ಅಬ್ಬರಿಸಿದ ಕ್ರಿಸ್‌ ಗೇಲ್‌
ಇದಕ್ಕೂ ಮುನ್ನ 10 ರನ್‌ ಆಗಿದ್ದಾಗ ಜೀವದಾನ ಪಡೆದ ಗೇಲ್‌ ತಮ್ಮ ಆಟವನ್ನು 99ರ ತನಕ ವಿಸ್ತರಿಸಿದರು. ಆದರೆ ಅವರಿಗೆ ಶತಕ ಸಂಭ್ರಮ ಆಚರಿಸಲು ಮಾತ್ರ ಸಾಧ್ಯವಾಗಲಿಲ್ಲ. ಆರ್ಚರ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ 99 ರನ್ನಿನ ಗಡಿಗೆ ಬಂದ ಗೇಲ್‌, ಮುಂದಿನ ಅದ್ಭುತ ಯಾರ್ಕರ್‌ ಒಂದಕ್ಕೆ ಬೌಲ್ಡ್‌ ಆಗಿ ವಿಕೆಟ್‌ ಕೈಚೆಲ್ಲಿದರು. ಈ ಅಮೋಘ ಬ್ಯಾಟಿಂಗ್‌ ವೇಳೆ ಗೇಲ್‌ 6 ಫೋರ್‌, 8 ಸಿಕ್ಸರ್‌ ಸಿಡಿಸಿದರು. ಗೇಲ್‌ ಕಳೆದ ವರ್ಷ ಆರ್‌ಸಿಬಿ ವಿರುದ್ಧವೂ 99ಕ್ಕೆ ಔಟಾಗಿ ಶತಕ ತಪ್ಪಿಸಿಕೊಂಡಿದ್ದರು. ಆದರೆ ಇದೇ ವೇಳೆ ಟಿ20 ಕ್ರಿಕೆಟ್‌ನಲ್ಲಿ ಸಾವಿರ ಸಿಕ್ಸರ್‌ ಸಿಡಿಸಿದ ಅಪೂರ್ವ ಸಾಧನೆ ಗೇಲ್‌ ಅವರದಾಯಿತು.

ಪ್ಲೇ ಆಫ್ ಪ್ರವೇಶಕ್ಕಾಗಿ ಗೆಲ್ಲಲೇಬೇಕಾದ ಇರಾದೆಯೊಂದಿಗೆ ಬ್ಯಾಟಿಂಗ್‌ ನಡೆಸಿದ ಪಂಜಾಬ್‌ಗ ಉತ್ತಮ ಆರಂಭ ಸಿಗಲಿಲ್ಲ. ಕೆಕೆಆರ್‌ ವಿರುದ್ಧ ಮಿಂಚಿದ್ದ ಮನ್‌ದೀಪ್‌ ಸಿಂಗ್‌ ಈ ಪಂದ್ಯದ ಮೊದಲ ಓವರಿನಲ್ಲೇ ಶೂನ್ಯಕ್ಕೆ ಔಟಾಗುವ ಮೂಲಕ ತಂಡಕ್ಕೆ ಆಘಾತವಿಕ್ಕಿದರು. ಜೋಫ್ರ ಆಚರ್‌ì ಈ ವಿಕೆಟ್‌ ಬೇಟೆಯಾಡಿದರು.

Advertisement

ಆರಂಭಿಕ ಸಂಕಟಕ್ಕೆ ಒಳಗಾದ ಪಂಜಾಬ್‌ಗ ವಿಂಡೀಸ್‌ ದೈತ್ಯ ಕ್ರಿಸ್‌ ಗೇಲ್‌ ಮತ್ತು ನಾಯಕ ರಾಹುಲ್‌ ಆಸರೆಯಾದರು. ಈ ಜೋಡಿ ಪವರ್‌ ಪ್ಲೇಯಲ್ಲಿ 53 ರನ್‌ ಒಟ್ಟುಗೂಡಿಸಿತು. ವರುಣ್‌ ಆರನ್‌ ಎಸೆದ ದ್ವಿತೀಯ ಓವರ್‌ನಲ್ಲಿ ಲಾಂಗ್‌ಆಫ್ನಲ್ಲಿದ್ದ ಪರಾಗ್‌ ಕ್ಯಾಚ್‌ ಕೈಚೆಲ್ಲಿ ಗೇಲ್‌ಗೆ ಜೀವದಾನ ನಿಡಿದರು. ಈ ಅವಕಾಶವನ್ನು ಎರಡೂ ಕೈಯಿಂದ ಬಾಚಿದ ಗೇಲ್‌ ಬಿರುಸಿನ ಬ್ಯಾಟಿಂಗ್‌ ಮೂಲಕ ರಾಜಸ್ಥಾನ್‌ ಬೌಲರ್‌ಗಳ ಮೇಲೆ ಸವಾರಿ ಮಾಡತೊಡಗಿದರು. 33 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದರು. ಅರ್ಧ ದಾರಿ ಕ್ರಮಿಸುವಾಗ ಪಂಜಾಬ್‌ 83 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.ನಾಯಕ ರಾಹುಲ್‌ ಬ್ಯಾಟಿಂಗ್‌ ಕೂಡ ಉತ್ತಮ ಲಯದಲ್ಲಿ ಸಾಗಿತು.

ಸ್ಕೋರ್‌ ಪಟ್ಟಿ
ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಕೆ.ಎಲ್‌. ರಾಹುಲ್‌ ಸಿ ತೆವಾತಿಯಾ ಬಿ ಸ್ಟೋಕ್ಸ್‌ 46
ಮನ್‌ದೀಪ್‌ ಸಿಂಗ್‌ ಸಿ ಸ್ಟೋಕ್ಸ್‌ ಬಿ ಆರ್ಚರ್‌ 0
ಕ್ರಿಸ್‌ ಗೇಲ್‌ ಬಿ ಆರ್ಚರ್‌ 99
ನಿಕೋಲಸ್‌ ಪೂರಣ್‌ ಸಿ ತೆವಾತಿಯಾ ಬಿ ಸ್ಟೋಕ್ಸ್‌ 22
ಮ್ಯಾಕ್ಸ್‌ವೆಲ್‌ ಔಟಾಗದೆ 6
ದೀಪಕ್‌ ಹೂಡ ಔಟಾಗದೆ 1

ಇತರ 11
ಒಟ್ಟು (20 ಓವರ್‌ಗಳಲ್ಲಿ 4 ವಿಕೆಟಿಗೆ) 185
ವಿಕೆಟ್‌ ಪತನ: 1-1, 2-121, 3-162, 4-184.

ಬೌಲಿಂಗ್‌:
ಜೋಫ್ರ ಆರ್ಚರ್‌ 4-0-26-2
ವರುಣ್‌ ಆರನ್‌ 4-0-47-0
ಕಾರ್ತಿಕ್‌ ತ್ಯಾಗಿ 4-0-47-0
ಶ್ರೇಯಸ್‌ ಗೋಪಾಲ್‌ 1-0-10-0
ಬೆನ್‌ ಸ್ಟೋಕ್ಸ್‌ 4-0-32-2
ರಾಹುಲ್‌ ತೆವಾತಿಯಾ 3-0-22-0

ರಾಜಸ್ಥಾನ್‌ ರಾಯಲ್ಸ್‌
ರಾಬಿನ್‌ ಉತ್ತಪ್ಪ ಸಿ ಪೂರಣ್‌ ಬಿ ಎಂ. ಅಶ್ವಿ‌ನ್‌ 30
ಬೆನ್‌ ಸ್ಟೋಕ್ಸ್‌ ಸಿ ಹೂಡ ಬಿ ಜೋರ್ಡನ್‌ 50
ಸಂಜು ಸ್ಯಾಮ್ಸನ್‌ ರನೌಟ್‌ 48
ಸ್ಟೀವನ್‌ ಸ್ಮಿತ್‌ ಔಟಾಗದೆ 31
ಜಾಸ್‌ ಬಟ್ಲರ್‌ ಔಟಾಗದೆ 22

ಇತರ 5
ಒಟ್ಟು(17.3 ಓವರ್‌ಗಳಲ್ಲಿ 3 ವಿಕೆಟಿಗೆ) 186
ವಿಕೆಟ್‌ ಪತನ: 1-60, 2-112, 3-145.

ಬೌಲಿಂಗ್‌
ಆರ್ಷದೀಪ್‌ ಸಿಂಗ್‌ 3 -0-34-0
ಮೊಹಮ್ಮದ್‌ ಶಮಿ 3-0-36-0
ಮುರುಗನ್‌ ಅಶ್ವಿ‌ನ್‌ 4-0-43-1
ಕ್ರಿಸ್‌ ಜೋರ್ಡನ್‌ 3.3-0-44-1
ರವಿ ಬಿಶ್ನೋಯಿ 4-0-27-0

Advertisement

Udayavani is now on Telegram. Click here to join our channel and stay updated with the latest news.

Next