Advertisement

“ಐಪಿಎಲ್‌ ಅನಿರ್ದಿಷ್ಟಾವಧಿ ಮುಂದೂಡಿಕೆ’

07:04 AM Apr 15, 2020 | mahesh |

ಈ ಬಾರಿ ಐಪಿಎಲ್‌ ಇಲ್ಲ ಎನ್ನುವುದು ಖಚಿತ: ಮೂಲಗಳು
ನಮಗೂ ಗೊತ್ತಾಗುತ್ತಿಲ್ಲ: ಬಿಸಿಸಿಐ ಖಜಾಂಚಿ ಧುಮಾಲ್‌

Advertisement

ಮುಂಬಯಿ: ಕೇಂದ್ರ ಸರಕಾರ ದಿಗ್ಬಂಧನವನ್ನು ಮೇ 3ರ ವರೆಗೆ ವಿಸ್ತರಿಸಿದೆ. ಅದರ ಜತೆಗೆ ಬಿಸಿಸಿಐ ಕೂಡ ಐಪಿಎಲ್‌ ಅನ್ನು ಅನಿರ್ದಿಷ್ಟಾವಧಿ ಮುಂದೂಡಿರುವುದಾಗಿ ಘೋಷಿಸಿದೆ. ಅಲ್ಲಿಗೆ ಈ ವರ್ಷ ಐಪಿಎಲ್‌ ನಡೆಯುವುದಿಲ್ಲವೆನ್ನುವುದೂ ಖಾತ್ರಿಯಾಗಿದೆ. ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ, ಅಂತಾರಾಷ್ಟ್ರೀಯ ಕ್ರಿಕೆಟಿಗರ ಲಭ್ಯತೆ ಇವೆಲ್ಲವನ್ನು ಗಮನಿಸಿದರೆ, ಬಿಸಿಸಿಐಗೆ ಐಪಿಎಲ್‌ ಕೂಟ ನಡೆಸಲು ಸಾಧ್ಯವೇ ಇಲ್ಲ. ಕೆಲವರು ಸಪ್ಟೆಂಬರ್‌ನಲ್ಲಿ ಏಷ್ಯಾಕಪ್‌ ರದ್ದಾದರೆ ನಡೆಸಬಹುದು, ಇನ್ನು ಕೆಲವರು ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್‌ ರದ್ದಾದರೆ ನಡೆಸಬಹುದು ಎಂದು ಸಲಹೆ ನೀಡಿದ್ದಾರೆ. ಅವನ್ನು ನಂಬಿಕೊಂಡು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಬಿಸಿಸಿಐ ಇಲ್ಲ.

ಈ ಅನಿರ್ದಿಷ್ಟಾವಧಿ ಮುಂದೂಡಿಕೆಯ ಅರ್ಥವೆಂದರೆ ಐಪಿಎಲ್‌ ನಡೆಸಲು ಸಾಧ್ಯವಿಲ್ಲವೆನ್ನುವುದು. ಆದರೆ ಬಿಸಿಸಿಐನೊಳಗೆ ಇನ್ನೂ ಸಣ್ಣ ಆಶಾವಾದವಿದ್ದಿರಬಹುದು. ಆದ್ದರಿಂದಲೇ ಖಚಿತವಾಗಿ ಹೇಳಿಲ್ಲ ಎಂಬ ವಾದವೂ ಇದೆ. ಈ ಬಗ್ಗೆ ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಪ್ರತಿಕ್ರಿಯಿಸಿ, ಸದ್ಯಕ್ಕೆ ಎಲ್ಲವೂ ಗೊಂದಲಮಯವಾಗಿದೆ. ಯಾವಾಗ ದಿಗ್ಬಂಧನ ಮುಗಿಯುತ್ತದೆ?, ಯಾವಾಗ ಮಾತನಾಡಬಹುದು? ಗೊತ್ತಿಲ್ಲ. ಸರಕಾರದಿಂದ ಸ್ಪಷ್ಟತೆ ಬಂದ ಮೇಲೆ ನಾವೊಂದು ನಿರ್ಧಾರ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next