Advertisement
ಹೌದು, ಮುಂಬೈ ಈ ಹಿಂದೆ 5 ಸಲ ಫೈನಲ್ ತಲುಪಿದಾಗಲೂ ಎದುರಾಳಿ ತಂಡದಲ್ಲಿ ಧೋನಿ ಇದ್ದರು. ಇವು 2010, 2013, 2015, 2017 ಮತ್ತು 2019ರ ಪ್ರಶಸ್ತಿ ಸುತ್ತಿನ ಪಂದ್ಯಗಳಾಗಿದ್ದವು. ಇದರಲ್ಲಿ 4 ಸಲ ಮುಂಬೈಗೆ ಚೆನ್ನೈ ತಂಡವೇ ಎದುರಾಗಿತ್ತು. ಹೀಗಾಗಿ ಅಲ್ಲಿ ಧೋನಿ ಉಪಸ್ಥಿತಿ ಇರಲೇಬೇಕಿತ್ತು. 2017ರಲ್ಲಿ ಮುಂಬೈ ತಂಡದ ಫೈನಲ್ ಎದುರಾಳಿಯಾಗಿ ಕಾಣಿಸಿಕೊಂಡ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್. ಅಂದು ಚೆನ್ನೈ ತಂಡಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಧೋನಿ ಪುಣೆ ತಂಡದ ಪರ ಆಡಲಿಳಿದಿದ್ದರು.
ಇಲ್ಲಿ ಇನ್ನೊಂದು ಸ್ವಾರಸ್ಯವಿದೆ. 2013ರಿಂದ ವರ್ಷ ಬಿಟ್ಟು ವರ್ಷ ಕಪ್ ಗೆಲ್ಲತೊಡಗಿದ ಮುಂಬೈ ಇಂಡಿಯನ್ಸ್‌ಗೆ ಈ ವರೆಗೆ ಸತತ ಎರಡು ಸಲ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಹಾಗೆಯೇ ಅದು “ಸಮ ವರ್ಷ’ದಂದು ಚಾಂಪಿಯನ್ ಆದದ್ದಿಲ್ಲ. ಅರ್ಥಾತ್, ಮುಂಬೈ ಕಪ್ ಎತ್ತಿದ್ದೆಲ್ಲ “ಬೆಸ ವರ್ಷ’ಗಳಂದೇ. 2010ರ “ಸಮ ವರ್ಷ’ದ ಫೈನಲ್‌ನಲ್ಲಿ ಅದು ಚೆನ್ನೈಗೆ ಸೋತಿತ್ತು. ಹಾಗಾದರೆ 2020ರಲ್ಲಿ ಏನು ಕಾದಿದೆ? ಕುತೂಹಲ ಸಹಜ!
Related Articles
ಐಪಿಎಲ್ ಫೈನಲ್‌ನಲ್ಲಿ ರೋಹಿತ್ ಶರ್ಮ ಅವರದು ಅಜೇಯ ದಾಖಲೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೂ ಮುನ್ನ ಅವರು 5 ಸಲ ಫೈನಲ್ ಆಡಿದ್ದಾರೆ. ಎಲ್ಲದರಲ್ಲೂ ಅವರ ತಂಡವೇ ಚಾಂಪಿಯನ್ ಆಗಿರುವುದು ವಿಶೇಷ. ರೋಹಿತ್ ಮೊದಲ ಸಲ ಚಾಂಪಿಯನ್ ತಂಡದ ಸದಸ್ಯನಾದದ್ದು 2009ರಲ್ಲಿ. ಆಗ ಅವರು ಡೆಕ್ಕನ್ ಚಾರ್ಜರ್ ತಂಡದಲ್ಲಿದ್ದರು. ಫೈನಲ್‌ನಲ್ಲಿ ಅದು ಆರ್‌ಸಿಬಿಯನ್ನು ಮಣಿಸಿ ಕಪ್ ಎತ್ತಿತ್ತು. ಅನಂತರ ಮುಂಬೈ 4 ಸಲ ಚಾಂಪಿಯನ್ ಆದಾಗಲೂ ರೋಹಿತ್ ಶರ್ಮ ಅವರೇ ಕ್ಯಾಪ್ಟನ್ ಆಗಿದ್ದರು.
Advertisement