Advertisement

ಭಾರತದಾಚೆ ಐಪಿಎಲ್‌; ಯುಎಇಯಲ್ಲಿ ಸಿದ್ಧತೆ: ಬಿಸಿಸಿಐ ಸಭೆಯಲ್ಲಿ ಯಾವುದೇ ಖಚಿತ ತೀರ್ಮಾನವಿಲ್ಲ

02:51 AM Jul 19, 2020 | Hari Prasad |

ಹೊಸದಿಲ್ಲಿ:  ಬಿಸಿಸಿಐ ಸಭೆಯಲ್ಲಿ ಯಾವುದೇ ಖಚಿತ ತೀರ್ಮಾನಕ್ಕೆ ಬರಲಾಗದ ಕಾರಣ 2020ರ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯದ ಕುರಿತ‌ ಊಹಾಪೋಹ ಇನ್ನೂ ಮುಂದುವರಿದಿದೆ.

Advertisement

ಆದರೆ ಬಿಸಿಸಿಐ ಮೂಲದ ಪ್ರಕಾರ ಈ ಸಲದ ಟೂರ್ನಿ ಭಾರತದಲ್ಲಿ ನಡೆಯುವ ಸಂಭವ ಇಲ್ಲ.

2014ರ ಬಳಿಕ ಮೊದಲ ಬಾರಿಗೆ ಯುಎಇಯಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ.

ಮಂಡಳಿ ಸಭೆಯಲ್ಲಿ 2020ರ ಐಪಿಎಲ್‌, ದೇಶಿ ಕ್ರಿಕೆಟ್‌ ಟೂರ್ನಿಗಳ ಆಯೋಜನೆ, ಭಾರತದ ಕ್ರಿಕೆಟ್‌ ಸರಣಿ ಗಳ ವೇಳಾಪಟ್ಟಿಯ ಪುನಾರಚನೆ ಮೊದಲಾದ 11 ವಿಷಯಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಯುವುದೆಂದು ನಿರೀಕ್ಷಿಸಲಾಗಿತ್ತು.

ಆದರೆ ಇದಕ್ಕೆ ಸಂಬಂಧಿಸಿದಂತೆ ಏನೆಲ್ಲ ಬೆಳವಣಿಗೆ ಸಂಭವಿಸಿತು ಎಂದು ಮಾಧ್ಯಮಕ್ಕೆ ಹೇಳಿಕೆ ನೀಡದಿರುವುದು ಅಚ್ಚರಿಯಾಗಿದೆ.

Advertisement

‘ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ. ಇದಕ್ಕೆ ಕಾರಣ, ದೇಶದಲ್ಲಿ ತೀವ್ರ ಗತಿಯಲ್ಲಿ ವ್ಯಾಪಿಸುತ್ತಿರುವ ಕೋವಿಡ್ 19 ಸೋಂಕು. ಅಂತಾರಾಷ್ಟ್ರೀಯ ಮಟ್ಟದ ಜೈವಿಕ ಸುರಕ್ಷಾ ವಲಯ, ವಿದೇಶಿ ಕ್ರಿಕೆಟಿಗರ ಆಗಮನ, ಅಭ್ಯಾಸ ವ್ಯವಸ್ಥೆಗಳೆಲ್ಲ ಇನ್ನೂ ಕಗ್ಗಂಟಾಗಿರುವ ಕಾರಣ ಯಾವುದೇ ಪಂದ್ಯಾವಳಿ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ’ ಎಂದು ಬಿಸಿಸಿಐ ಮೂಲ ತಿಳಿಸಿದೆ.

‘ಐಪಿಎಲ್‌ ಪಂದ್ಯಾವಳಿ ಭಾರತದಲ್ಲಿ ನಡೆಸುವುದು ಭಾರೀ ಸವಾಲಿನ ಕೆಲಸ. ಇದಕ್ಕಿಂತ ದುಬಾೖಯನ್ನು ಕೇಂದ್ರವಾಗಿರಿಸಿಕೊಂಡು, 60 ಪಂದ್ಯಗಳ ಕೂಟವನ್ನು ಯುಎಇಯಲ್ಲಿ ಆಯೋಜಿಸುವುದೇ ಸೂಕ್ತವೆನಿಸುತ್ತದೆ’ ಎಂದು ಹೇಳಿದ್ದಾಗಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next