Advertisement

ಐಪಿಎಲ್‌ 2020 ರವಿವಾರವಷ್ಟೇ 2 ಪಂದ್ಯ

09:57 AM Feb 18, 2020 | sudhir |

ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಇದನ್ನು ಅಧಿಕೃತವಾಗಿ ಪ್ರಕಟಿಸಲಿದೆ.

Advertisement

ಮಾ. 29ರಂದು ಆರಂಭವಾಗಲಿರುವ ಈ ಕೂಟದ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು “ವಾಂಖೇಡೆ ಸ್ಟೇಡಿಯಂ’ನಲ್ಲಿ ಸೆಣಸಲಿವೆ.

ಕಳೆದ ವರ್ಷ 8ನೇ ಸ್ಥಾನಕ್ಕೆ ಕುಸಿದಿದ್ದ ರಾಯಲ್‌ ಚಾಲೆಂಜರ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನು ಮಾ. 31ರಂದು ಆಡಲಿದೆ. ಎದುರಾಳಿ ಕೋಲ್ಕತಾ ನೈಟ್‌ರೈಡರ್. ಈ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಮೇ 17ರ ತನಕ ಲೀಗ್‌ ಸ್ಪರ್ಧೆ
ಮಾ. 29ರಂದು ಮೊದಲ್ಗೊಳ್ಳುವ ಪಂದ್ಯಾವಳಿ ಮೇ 24ರಂದು ಕೊನೆಗೊಳ್ಳಲಿದೆ. ಮೇ 17ರ ತನಕ, ಒಟ್ಟು 50 ದಿನಗಳ ಕಾಲ ಲೀಗ್‌ ಪಂದ್ಯಗಳು ಸಾಗುತ್ತವೆ. ನಾಕೌಟ್‌ ಪಂದ್ಯಗಳ ವೇಳಾಪಟ್ಟಿಯನ್ನು ಇನ್ನಷ್ಟೇ ರೂಪಿಸಬೇಕಿದೆ.

ಈ ಬಾರಿ ರವಿವಾರ ಹೊರತುಪಡಿಸಿ ಉಳಿದ ದಿನಗಳಂದು ಒಂದೊಂದೇ ಪಂದ್ಯವನ್ನು ಆಡಲಾಗುವುದು. 6 ರವಿವಾರದಂದು 2 ಮುಖಾಮುಖೀ ಏರ್ಪಡಲಿದೆ. ಶನಿವಾರ ಎರಡರ ಬದಲು ಒಂದೇ ಪಂದ್ಯ ನಡೆಯುತ್ತದೆ. ಇದನ್ನು ಸರಿದೂಗಿಸಲು ಐಪಿಎಲ್‌ ಕೂಟದ ಒಟ್ಟು ಅವಧಿಯನ್ನು ಒಂದು ವಾರ ವಿಸ್ತರಿಸಲಾಗಿದೆ.

Advertisement

ಪಂದ್ಯದ ವೇಳೆಯಲ್ಲಿ ಬದಲಾವಣೆ ಇಲ್ಲ
ಪಂದ್ಯಗಳ ವೇಳೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ರಾತ್ರಿಯ ಪಂದ್ಯಗಳೆಲ್ಲ 8 ಗಂಟೆಗೆ ಆರಂಭವಾಗಲಿವೆ. ಹಗಲು ಪಂದ್ಯ ಸಂಜೆ 4 ಗಂಟೆಗೆ ಮೊದಲ್ಗೊಳ್ಳುತ್ತದೆ.

ರಾಜಸ್ಥಾನ್‌ ರಾಯಲ್ಸ್‌ ತನ್ನ 2 “ತವರು ಪಂದ್ಯ’ಗಳನ್ನು ಗುವಾಹಟಿಯಲ್ಲಿ ಆಡುವ ಸಾಧ್ಯತೆ ಇದೆ. ಉಳಿದ ಫ್ರಾಂಚೈಸಿಗಳ ತವರು ತಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next