ಹೈದರಾಬಾದ್: ಸಂಜು ಸ್ಯಾಮ್ಸನ್ ಅವರ ಭರ್ಜರಿ ಶತಕದಾಟಕ್ಕೆ ದಿಟ್ಟ ರೀತಿಯಲ್ಲಿ ಜವಾಬು ನೀಡಿದ ಆತಿಥೇಯ ಸನ್‌ರೈಸರ್ ಹೈದರಾಬಾದ್ ಶುಕ್ರವಾರದ ತವರಿನ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ 5 ವಿಕೆಟ್ ಅಂತರದ ಸೋಲುಣಿಸಿದೆ.
ಇದರೊಂದಿಗೆ ಹೈದರಾಬಾದ್ ಗೆಲುವಿನ ಖಾತೆ ತೆರೆದರೆ, ರಾಜಸ್ಥಾನ್ ಸತತ 2ನೇ ಪಂದ್ಯದಲ್ಲೂ ಸೋಲನುಭವಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ಎರಡೇ ವಿಕೆಟಿಗೆ 198 ರನ್ ಸೂರೆಗೈದರೆ, ಹೈದರಾಬಾದ್ 19 ಓವರ್‌ಗಳಲ್ಲಿ 5 ವಿಕೆಟಿಗೆ 201 ರನ್ ಬಾರಿಸಿತು. ಡೇವಿಡ್ ವಾರ್ನರ್-ಜಾನಿ ಬೇರ್‌ಸ್ಟೊ ಮೊದಲ ವಿಕೆಟಿಗೆ 9.4 ಓವರ್‌ಗಳಿಂದ 110 ರನ್ ಬಾರಿಸಿ ಭದ್ರ ಬುನಾದಿ ಹಾಕಿದರು. ಮತ್ತೆ ಸಿಡಿಲಬ್ಬರದ ಆಟವಾಡಿದ ವಾರ್ನರ್ ಗಳಿಕೆ 37 ಎಸೆತಗಳಿಂದ 69 ರನ್ (9 ಬೌಂಡರ, 2 ಸಿಕ್ಸರ್). ಬೇರ್‌ಸ್ಟೊ 28 ಎಸೆತಗಳಿಂದ 45 ರನ್ ಹೊಡೆದರು. ಬಳಿಕ ವಿಲಿಯಮ್ಸನ್-ವಿಜಯ್ ಶಂಕರ್ ತಂಡವನ್ನು ಮುನ್ನಡೆಸಿದರು.
ರಾಜಸ್ಥಾನ್ ತಂಡದ ದೊಡ್ಡ ಮೊತ್ತದಲ್ಲಿ ಸಂಜು ಸ್ಯಾಮ್ಸನ್ ಸ್ಯಾಮ್ಸನ್ ಕೊಡುಗೆ ಅಜೇಯ 102 ರನ್. ಅವರು 54 ಎಸೆತಗಳಲ್ಲಿ ತಮ್ಮ 2ನೇ ಐಪಿಎಲ್ ಶತಕವನ್ನು ಪೂರ್ತಿಗೊಳಿಸಿದರು. 55 ಎಸೆತಗಳ ಈ ರಂಜನೀಯ ಆಟದಲ್ಲಿ 10 ಬೌಂಡರಿ, 4 ಸಿಕ್ಸರ್ ಒಳಗೊಂಡಿತ್ತು.
ಪಂಜಾಬ್ ವಿರುದ್ಧ “ಮಂಕಡ್ ಔಟ್’ ಆಗಿ ನಿರ್ಗಮಿಸಿದ್ದ ಜಾಸ್ ಬಟ್ಲರ್ ಅವರನ್ನು ರಾಜಸ್ಥಾನ್ ಬೇಗನೇ ಕಳೆದುಕೊಂಡಿತು. ಕೇವಲ 5 ರನ್ ಮಾಡಿದ ಅವರನ್ನು ಲೆಗ್‌ಸ್ಪಿನ್ನರ್ ರಶೀದ್ ಖಾನ್ ಕ್ಲೀನ್‌ಬೌಲ್ಡ್ ಮಾಡಿದರು. ಆಗ ಹೈದರಾಬಾದ್ ಬೌಲರ್‌ಗಳು ಮೇಲುಗೈ ಸಾಧಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ನಾಯಕ ಅಜಿಂಕ್ಯ ರಹಾನೆ-ಸಂಜು ಸ್ಯಾಮ್ಸನ್ ಕ್ರೀಸ್ ಆಕ್ರಮಿಸಿಕೊಂಡು 2ನೇ ವಿಕೆಟಿಗೆ 119 ರನ್ ಪೇರಿಸಿ ಹೈದರಾಬಾದ್ ಬೌಲರ್‌ಗಳಿಗೆ ಬೆವರಿಳಿಸಿದರು.
ಸ್ಕೋರ್‌ಪಟ್ಟಿ
ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ ಸಿ ಪಾಂಡೆ ಬಿ ನದೀಂ 70
ಜಾಸ್ ಬಟ್ಲರ್ ಬಿ ರಶೀದ್ 5
ಸಂಜು ಸ್ಯಾಮ್ಸನ್ ಔಟಾಗದೆ 102
ಬೆನ್ ಸ್ಟೋಕ್ಸ್ ಔಟಾಗದೆ 16
ಇತರ 5
ಒಟ್ಟು (20 ಓವರ್‌ಗಳಲ್ಲಿ 2 ವಿಕೆಟಿಗೆ) 198
ವಿಕೆಟ್ ಪತನ: 1-15, 2-134.
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-55-0
ಸಂದೀಪ್ ಶರ್ಮ 4-0-38-0
ರಶೀದ್ ಖಾನ್ 4-0-24-1
ಸಿದ್ಧಾರ್ಥ್ ಕೌಲ್ 4-0-32-0
ಶಾಬಾಜ್ ನದೀಂ 3-0-36-1
ವಿಜಯ್ ಶಂಕರ್ 1-0-13-0
ಸನ್‌ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ಸಿ ಕುಲಕರ್ಣಿ ಬಿ ಸೊÕàಕ್ಸ್ 69
ಜಾನಿ ಬೇರ್‌ಸ್ಟೊ ಸಿ ಕುಲಕರ್ಣಿ ಬಿ ಗೋಪಾಲ್ 45
ಕೇನ್ ವಿಲಿಯಮ್ಸನ್ ಸಿ ತ್ರಿಪಾಠಿ ಬಿ ಉನಾದ್ಕತ್ 14
ವಿಜಯ್ ಶಂಕರ್ ಸಿ ಬದಲಿಗ ಬಿ ಗೋಪಾಲ್ 35
ಮನೀಷ್ ಪಾಂಡೆ ಎಲ್‌ಬಿಡಬ್ಲ್ಯು ಬಿ ಗೋಪಾಲ್ 1
ಯೂಸುಫ್ ಪಠಾಣ್ ಔಟಾಗದೆ 16
ರಶೀದ್ ಖಾನ್ ಔಟಾಗದೆ 15
ಇತರ 6
ಒಟ್ಟು (19 ಓವರ್‌ಗಳಲ್ಲಿ 5ವಿಕೆಟ್‌ಗೆ) 201
ವಿಕೆಟ್ ಪತನ: 1-110, 2-117, 3-164, 4-167, 5-167
ಬೌಲಿಂಗ್:
ಧವಳ್ ಕುಲಕರ್ಣಿ 3-0-40-0
ಕೃಷ್ಣಪ್ಪ ಗೌತಮ್ 2-0-25-0
ಜೋಫÅ ಆರ್ಚರ್ 4-0-42-0
ಬೆನ್ ಸ್ಟೋಕ್ಸ್ 3-0-40-1
ಜೈದೇವ್ ಉನಾದ್ಕತ್ 3-0-26-1
ಶ್ರೇಯಸ್ ಗೋಪಾಲ್ 4-0-27-3