Advertisement

ಬರ್ತ್‌ಡೇ ಬಾಯ್‌ ರಾಹುಲ್‌ಗೆ ಪ್ರೀತಿಯ ಹಾರೈಕೆ

07:00 AM Apr 20, 2018 | Team Udayavani |

ಮೊಹಾಲಿ: ಕಿಂಗ್ಸ್‌ ಇಲೆವೆನ್‌ ತಂಡದ ಆರಂಭಕಾರ, ಪ್ರಸಕ್ತ ಐಪಿಎಲ್‌ನಲ್ಲಿ ಕೇವಲ 14 ಎಸೆತಗಳಿಂದ ಅರ್ಧ ಶತಕ ಬಾರಿಸಿ ದಾಖಲೆ ನಿರ್ಮಿಸಿದ ಕೆ.ಎಲ್‌. ರಾಹುಲ್‌ ಬುಧವಾರ 26ನೇ ಹುಟ್ಟುಹಬ್ಬವನ್ನು ಪಂಜಾಬ್‌ ತಂಡದ ಸದಸ್ಯರ ಜತೆ ಆಚರಿಸಿದರು. ಈ ಸಂದರ್ಭದಲ್ಲಿ ತಂಡದ ಮಾಲಕಿ, ಬಾಲಿವುಡ್‌ ತಾರೆ ಪ್ರೀತಿ ಜಿಂಟಾ ಕರ್ನಾಟಕದ ಈ ಪ್ರತಿಭಾನ್ವಿತ ಆಟಗಾರನಿಗೆ ಶುಭ ಹಾರೈಸಿದರು.

Advertisement

“ಹ್ಯಾಪ್ಪಿ ಬರ್ತ್‌ಡೇ ಕೆ.ಎಲ್‌. ರಾಹುಲ್‌. ವಿಶ್‌ ಯೂ ಲೋಡ್ಸ್‌ ಆಫ್ ಲವ್‌, ಹ್ಯಾಪ್ಪಿನೆಸ್‌, ಸಕ್ಸೆಸ್‌ ಆಲ್ವೇಸ್‌…’ ಎಂದು ಪ್ರೀತಿ ಜಿಂಟಾ ಶುಭ ಹಾರೈಸಿದ್ದಾರೆ. ಕೇಕ್‌ ಕತ್ತರಿಸುವ ಸಂದರ್ಭದಲ್ಲಿ ಪ್ರೀತಿ ಜಿಂಟಾ ಕೂಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next