Advertisement
ಈ ಪಂದ್ಯದ 16ನೇ ಓವರ್ ವೇಳೆ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡುತ್ತಿತ್ತು. ಈ ವೇಳೆ ಕೋಲ್ಕತಾ ತಂಡದ ಟಾಮ್ ಕರನ್ ಬೌಲಿಂಗ್ ಮಾಡುತ್ತಿದ್ದರು. ಅವರು ಕ್ರಮಬದ್ಧವಾಗಿಯೇ ಚೆಂಡು ಎಸೆದಿದ್ದರು. ಹೀಗಿದ್ದರೂ ಅಂಪಾಯರ್ ಅನಂತಪದ್ಮನಾಭ ನೋ ಬಾಲ್ ಎಂದು ತೀರ್ಪು ನೀಡಿದ್ದು ಅಪಹಾಸ್ಯಕ್ಕೆ ಗುರಿಯಾಯಿತು.ಇದೇ ವೇಳೆ ಕೆಕೆಆರ್ ತಂಡದ ಆಟಗಾರರು ತೀರ್ಪನ್ನು ಕ್ರೀಡಾಂಗಣದಲ್ಲೇ ಪ್ರಶ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಹಲವಾರು ಬಾರಿ ಅಂಪಾಯರ್ಗಳು ಈ ಬಾರಿಯ ಐಪಿಎಲ್ನಲ್ಲಿ ತಪ್ಪು ತೀರ್ಮಾನ ನೀಡಿದ್ದರಿಂದ ಸೋಲುವವರು ಗೆದ್ದು ಗೆಲ್ಲುವವರು ಸೋತ ಘಟನೆಗಳು ನಡೆದಿವೆ. ಅಂಪಾಯರಿಂಗ್ ಗುಣಮಟ್ಟದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.