Advertisement
ಪ್ರೇಕ್ಷಕರ ಅನುಕೂಲ ಹಾಗೂ ನಿಧಾನ ಗತಿಯ ಓವರ್‌ಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶುಕ್ಲಾ ಸ್ಪಷ್ಟಪಡಿಸಿದರು. “ಕೆಲವು ತಂಡಗಳು ಓವರ್ ಗತಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾದ್ದರಿಂದ ಪಂದ್ಯಗಳು ರಾತ್ರಿ 12ರ ಬಳಿಕವೂ ಮುಂದುವರಿದದ್ದಿದೆ. ಇದರಿಂದ ವೀಕ್ಷಕರಿಗೆ ಮನೆ ಮುಟ್ಟಲು ಸಮಸ್ಯೆ ಎದುರಾಗಿತ್ತು. ಅಲ್ಲದೇ ಮರುದಿನ ಶಾಲೆ, ಕಾಲೇಜು, ಕಚೇರಿಗೆ ಹೋಗಲೂ ತೊಂದರೆ ಆಗುತ್ತಿತ್ತು. ಟಿವಿ ವೀಕ್ಷಕರಿಗೂ ಸಮಸ್ಯೆ ಎದುರಾಗುವುದು ಸಾಮಾನ್ಯವಾಗಿತ್ತು. ಇದನ್ನೆಲ್ಲ ಪರಿಗಣಿಸಿ ಪ್ಲೇ-ಆಫ್ ಹಾಗೂ ಫೈನಲ್ ಸ್ಪರ್ಧೆಗಳನ್ನು ಒಂದು ಗಂಟೆ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಶುಕ್ಲಾ ಹೇಳಿದರು.
Advertisement
ಐಪಿಎಲ್ ಪ್ಲೇ-ಆಫ್, ಫೈನಲ್ ಒಂದು ಗಂಟೆ ಬೇಗ ಆರಂಭ
07:45 AM May 10, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.