Advertisement

ಐಪಿಎಲ್‌ ತೊರೆಯುವ ಇಂಗ್ಲೆಂಡ್‌ ಕ್ರಿಕೆಟಿಗರು

06:00 AM May 08, 2018 | Team Udayavani |

ಹೊಸದಿಲ್ಲಿ: ಹನ್ನೊಂದನೇ ಐಪಿಎಲ್‌ ಪಂದ್ಯಾವಳಿ ಈಗಾಗಲೇ ಅರ್ಧ ಹಾದಿ ಕ್ರಮಿಸಿ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡಿನ ನಾಲ್ವರು ಕ್ರಿಕೆಟಿಗರು ಬೇಗನೇ ಐಪಿಎಲ್‌ ತೊರೆಯಲಿದ್ದಾರೆ ಎಂದು “ಟೈಮ್ಸ್‌ ನೌ’ ವರದಿ ಮಾಡಿದೆ. ಇವರೆಂದರೆ ಕ್ರಿಸ್‌ ವೋಕ್ಸ್‌, ಮಾರ್ಕ್‌ ವುಡ್‌, ಮೊಯಿನ್‌ ಅಲಿ ಮತ್ತು ಬೆನ್‌ ಸ್ಟೋಕ್ಸ್‌.

Advertisement

ಇವರೆಲ್ಲರರಿಗೂ ಮೇ 17ರ ಒಳಗಾಗಿ ವಾಪಸಾಗುವಂತೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಸೂಚಿಸಿದೆ. ಮೇ 24ರಿಂದ ಪ್ರವಾಸಿ ಪಾಕಿಸ್ಥಾನ ವಿರುದ್ಧದ ಟೆಸ್ಟ್‌ ಸರಣಿ ಆರಂಭವಾಗುವುದೇ ಇದಕ್ಕೆ ಕಾರಣ.  ವೋಕ್ಸ್‌ ಮತ್ತು ಅಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದರೆ, ಮಾರ್ಕ್‌ ವುಡ್‌ ಚೆನ್ನೈ ಹಾಗೂ ಬೆನ್‌ ಸ್ಟೋಕ್ಸ್‌ ರಾಜಸ್ಥಾನ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next