Advertisement
ರವಿವಾರ ರಾತ್ರಿ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ಕೇನ್ ವಿಲಿಯಮ್ಸನ್ ನೇತೃತ್ವದ ತಂಡಗಳಿಂದ ದೊಡ್ಡ ಹೋರಾಟವನ್ನು ನಿರೀಕ್ಷಿಸಲಾಗಿದೆ. ಇದು ಇತ್ತಂಡಗಳ ನಡುವೆ ಈ ವರ್ಷ ನಡೆಯುತ್ತಿರುವ 4ನೇ ಮುಖಾಮುಖೀ. ಹಿಂದಿನ ಮೂರೂ ಪಂದ್ಯಗಳಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ ಧೋನಿ ಪಡೆ ಹೈದರಾಬಾದ್‌ಗೆ ಸೋಲುಣಿಸಿ ಮೆರೆದಿತ್ತು.
ಎರಡು ವರ್ಷಗಳ ನಿಷೇಧ ಪೂರೈಸಿಕೊಂಡು ಬಂದ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದೇ ಹಳೆಯ ಚಾರ್ಮ್ ಉಳಿಸಿಕೊಂಡು ಬಂದದ್ದೊಂದು ಹೆಚ್ಚುಗಾರಿಕೆ. ಹೈದರಾಬಾದ್‌ನಂತೆ 9 ಜಯ ಸಾಧಿಸಿದ ಚೆನ್ನೈ ರನ್‌ರೇಟ್‌ನಲ್ಲಿ ಹಿಂದುಳಿದು ಲೀಗ್ ಹಂತದಲ್ಲಿ ದ್ವಿತೀಯ ಸ್ಥಾನದಲ್ಲಿ ಉಳಿಯಬೇಕಾಯಿತು. ಆದರೆ ಧೋನಿ ಪಡೆಯ ಸಾಧನೆಯೆಲ್ಲ ಟಾಪ್ ಕ್ಲಾಸ್‌ನಲ್ಲೇ ಇತ್ತು ಎಂಬುದು ಗಮನಾರ್ಹ. ಫೈನಲಿಸ್ಟ್ ಹೈದರಾಬಾದ್ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳನ್ನು ಗೆದ್ದದ್ದೇ ಇದಕ್ಕೆ ಸಾಕ್ಷಿ.
Related Articles
Advertisement
2016ರ ಚಾಂಪಿಯನ್ ತಂಡ2016ರ ಚಾಂಪಿಯನ್ ಸನ್‌ರೈಸರ್ ಹೈದರಾಬಾದ್ ಕಾಣುತ್ತಿರುವ 2ನೇ ಐಪಿಎಲ್ ಫೈನಲ್ ಇದಾಗಿದೆ. ಅಂದು ಆರ್‌ಸಿಬಿಯನ್ನು 8 ರನ್ನುಗಳಿಂದ ಮಣಿಸಿದ ಡೇವಿಡ್ ವಾರ್ನರ್ ಬಳಗ ಮೊದಲ ಅವಕಾಶದಲ್ಲೇ ಚಾಂಪಿಯನ್ ಆಗಿ ಮೆರೆದಿತ್ತು. ಈ ಬಾರಿ ವಾರ್ನರ್ ಗೈರಲ್ಲಿ ನ್ಯೂಜಿಲ್ಯಾಂಡಿನ ಕೇನ್ ವಿಲಿಯಮ್ಸನ್ ಉತ್ತಮ ರೀತಿಯಲ್ಲೇ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಆದರೆ ಈ ವರ್ಷ ಚೆನ್ನೈ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳಲ್ಲಿ ಎಡವಿದ್ದು ಹೈದರಾಬಾದ್ ಪಾಲಿಗೆ ಭಾರೀ ಹಿನ್ನಡೆಯೇ ಆಗಿದೆ.ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಇನ್ನೇನು ಹೈದರಾಬಾದ್‌ಗೆ ಒಲಿಯುವುದಿತ್ತು, ಆದರೆ ಆರಂಭಕಾರ ಫಾ ಡು ಪ್ಲೆಸಿಸ್ ಇದಕ್ಕೆ ಅಡ್ಡಿಯಾಗಿ ಪರಿಣಮಿಸಿದರು. 4 ದಿನಗಳ ಹಿಂದೆ ವಾಂಖೇಡೆಯಲ್ಲಿ ಕೈತಪ್ಪಿದ ಜಯ ರವಿವಾರ ರಾತ್ರಿ ಸನ್‌ರೈಸರ್ ಕೈ ಹಿಡಿದೀತೇ ಎಂಬುದೊಂದು ದೊಡ್ಡ ಪ್ರಶ್ನೆ. ಚೆನ್ನೈ ಬ್ಯಾಟಿಂಗ್ ವರ್ಸಸ್ ಹೈದರಾಬಾದ್ ಬೌಲಿಂಗ್
ರವಿವಾರದ ಫೈನಲ್ ಚೆನ್ನೈ ಬ್ಯಾಟಿಂಗ್ ಹಾಗೂ ಹೈದರಾಬಾದ್ ತಂಡದ ಬೌಲಿಂಗ್ ಮೇಲಾಟವಾಗಿ ಪರಿಣಮಿಸುವ ಸಾಧ್ಯತೆ ಇದೆ. ಹೈದರಾಬಾದ್‌ಗೆ ಹೋಲಿಸಿದರೆ ಚೆನ್ನೈ ತಂಡದ ಬ್ಯಾಟಿಂಗ್ ಹೆಚ್ಚು ಬಲಿಷ್ಠ. ಡು ಪ್ಲೆಸಿಸ್, ವಾಟ್ಸನ್, ರೈನಾ, ಧೋನಿ, ರಾಯುಡು, ಬ್ರಾವೊ ಅವರೆಲ್ಲ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬುತ್ತಲೇ ಬಂದಿದ್ದಾರೆ. ಬೌಲಿಂಗಿನಲ್ಲಿ ಎನ್‌ಗಿಡಿಯಷ್ಟೇ ಹೆಚ್ಚು ಅಪಾಯಕಾರಿ. ಆದರೆ ಹೈದರಾಬಾದ್ ಬ್ಯಾಟಿಂಗ್ ಧವನ್, ವಿಲಿಯಮ್ಸನ್ ಅವರಿಬ್ಬರನ್ನೇ ಹೆಚ್ಚು ಅವಲಂಬಿಸಿದೆ. ಈ 2 ವಿಕೆಟ್ ಬೇಗ ಬಿದ್ದರೆ ತಂಡಕ್ಕೆ ಗಂಡಾಂತರ ತಪ್ಪಿದ್ದಲ್ಲ. ಕೆಕೆಆರ್ ವಿರುದ್ಧ ರಶೀದ್ ಖಾನ್ ಸಿಡಿಯದೇ ಹೋಗಿದ್ದರೆ ಹೈದರಾಬಾದ್ ಈ ಹಂತಕ್ಕೆ ಬರುವುದು ಅನುಮಾನವಿತ್ತು. ಹೀಗಾಗಿ ಹೈದರಾಬಾದ್ ಮತ್ತೂಮ್ಮೆ ಬೌಲಿಂಗ್ ಬಲವನ್ನೇ ಹೆಚ್ಚು ನಂಬಿಕೊಳ್ಳಬೇಕಿದೆ. ಭುವಿ, ರಶೀದ್, ಕೌಲ್, ಶಕಿಬ್, ಬ್ರಾತ್‌ವೇಟ್ ಅವರೆಲ್ಲ ಹೆಚ್ಚು ಘಾತಕವಾಗಬಲ್ಲರು. ಖಲೀಲ್ ಅಹ್ಮದ್ ಬದಲು ಮತ್ತೆ ಸಂದೀಪ್ ಶರ್ಮ ಅವಕಾಶ ಪಡೆಯುವ ಸಾಧ್ಯತೆ ಇದೆ. ಇಂದು ಫೈನಲ್
ಚೆನ್ನೈ-ಹೈದರಾಬಾದ್
ಸ್ಥಳ: ಮುಂಬಯಿ
ಆರಂಭ: 7.00
ಪ್ರಸಾರ: ಸ್ಟಾರ್ ನ್ಪೋರ್ಟ್ಸ್, ಸ್ಟಾರ್ ಸುವರ್ಣ ಪ್ಲಸ್ ಐಪಿಎಲ್ ಚಾಂಪಿಯನ್ಸ್
ವರ್ಷ ಚಾಂಪಿಯನ್ ರನ್ನರ್ ಅಪ್ ಅಂತರ
2008 ರಾಜಸ್ಥಾನ್ ಚೆನ್ನೈ 3 ವಿಕೆಟ್
2009 ಡೆಕ್ಕನ್ ಆರ್‌ಸಿಬಿ 6 ರನ್
2010 ಚೆನ್ನೈ ಮುಂಬೈ 22 ರನ್
2011 ಚೆನ್ನೈ ಆರ್‌ಸಿಬಿ 58 ರನ್
2012 ಕೆಕೆಆರ್ ಚೆನ್ನೈ 5 ವಿಕೆಟ್
2013 ಮುಂಬೈ ಚೆನ್ನೈ 23 ರನ್
2014 ಕೆಕೆಆರ್ ಪಂಜಾಬ್ 3 ವಿಕೆಟ್
2015 ಮುಂಬೈ ಚೆನ್ನೈ 41 ರನ್
2016 ಹೈದರಾಬಾದ್ ಆರ್‌ಸಿಬಿ 8 ರನ್
2017 ಮುಂಬೈ ಪುಣೆ 1 ರನ್ ಚೆನ್ನೈ ಸಾಗಿ ಬಂದ ಹಾದಿ
ಎದುರಾಳಿ ಸ್ಥಳ ಫಲಿತಾಂಶ
1. ಮುಂಬೈ ಮುಂಬಯಿ 1 ವಿಕೆಟ್ ಜಯ
2. ಕೆಕೆಆರ್ ಚೆನ್ನೈ 5 ವಿಕೆಟ್ ಜಯ
3. ಪಂಜಾಬ್ ಮೊಹಾಲಿ 4 ರನ್ ಸೋಲು
4. ರಾಜಸ್ಥಾನ್ ಪುಣೆ 64 ರನ್ ಜಯ
5. ಹೈದರಾಬಾದ್ ಹೈದರಾಬಾದ್ 4 ರನ್ ಜಯ
6. ಆರ್‌ಸಿಬಿ ಬೆಂಗಳೂರು 5 ವಿಕೆಟ್ ಜಯ
7. ಮುಂಬೈ ಪುಣೆ 8 ವಿಕೆಟ್ ಸೋಲು
8. ಡೆಲ್ಲಿ ಪುಣೆ 13 ರನ್ ಜಯ
9. ಕೆಕೆಆರ್ ಕೋಲ್ಕತಾ 6 ವಿಕೆಟ್ ಸೋಲು
10. ಆರ್‌ಸಿಬಿ ಪುಣೆ 6 ವಿಕೆಟ್ ಜಯ
11. ರಾಜಸ್ಥಾನ್ ಜೈಪುರ 4 ವಿಕೆಟ್ ಸೋಲು
12. ಹೈದರಾಬಾದ್ ಪುಣೆ 8 ವಿಕೆಟ್ ಜಯ
13. ಡೆಲ್ಲಿ ಹೊಸದಿಲ್ಲಿ 34 ರನ್ ಸೋಲು
14. ಪಂಜಾಬ್ ಪುಣೆ 5 ವಿಕೆಟ್ ಜಯ
15. ಹೈದರಾಬಾದ್ ಮುಂಬೈ 2 ವಿಕೆಟ್ ಜಯ ಹೈದರಾಬಾದ್ ಸಾಗಿ ಬಂದ ಹಾದಿ
ಎದುರಾಳಿ ಸ್ಥಳ ಫಲಿತಾಂಶ
1. ರಾಜಸ್ಥಾನ್ ಹೈದರಾಬಾದ್ 9 ವಿಕೆಟ್ ಜಯ
2. ಮುಂಬೈ ಹೈದರಾಬಾದ್ 1 ವಿಕೆಟ್ ಜಯ
3. ಕೆಕೆಆರ್ ಕೋಲ್ಕತಾ 6 ವಿಕೆಟ್ ಜಯ
4. ಪಂಜಾಬ್ ಮೊಹಾಲಿ 15 ರನ್ ಸೋಲು
5. ಚೆನ್ನೈ ಹೈದರಾಬಾದ್ 4 ರನ್ ಸೋಲು
6. ಮುಂಬೈ ಮುಂಬಯಿ 31 ರನ್ ಜಯ
7. ಪಂಜಾಬ್ ಹೈದರಾಬಾದ್ 13 ರನ್ ಜಯ
8. ರಾಜಸ್ಥಾನ್ ಜೈಪುರ 11 ರನ್ ಜಯ
9. ಡೆಲ್ಲಿ ಹೈದರಾಬಾದ್ 7 ವಿಕೆಟ್ ಜಯ
10. ಆರ್‌ಸಿಬಿ ಹೈದರಾಬಾದ್ 5 ವಿಕೆಟ್ ಜಯ
11. ಡೆಲ್ಲಿ ಹೊಸದಿಲ್ಲಿ 9 ವಿಕೆಟ್ ಜಯ
12. ಚೆನ್ನೈ ಪುಣೆ 8 ವಿಕೆಟ್ ಸೋಲು
13. ಆರ್‌ಸಿಬಿ ಬೆಂಗಳೂರು 14 ರನ್ ಸೋಲು
14. ಕೆಕೆಆರ್ ಹೈದರಾಬಾದ್ 5 ವಿಕೆಟ್ ಸೋಲು
15. ಚೆನ್ನೈ ಮುಂಬಯಿ 2 ವಿಕೆಟ್ ಸೋಲು
16. ಕೆಕೆಆರ್ ಕೋಲ್ಕತಾ 14 ರನ್ ಜಯ