Advertisement

ಪಂಜಾಬ್‌ಗ 4 ರನ್‌ ರೋಚಕ ಗೆಲುವು 

06:15 AM Apr 16, 2018 | Team Udayavani |

ಮೊಹಾಲಿ: ಅಂಬಾಟಿ ರಾಯುಡು ಮತ್ತು ಧೋನಿ ಅವರ ಸಾಹಸದ ಬ್ಯಾಟಿಂಗ್‌ನ ಹೊರತಾಗಿಯೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದೆದುರು 4 ರನ್ನಿನಿಂದ ಸೋಲನ್ನು ಕಂಡಿದೆ. 

Advertisement

44 ಎಸೆತ ಎದುರಿಸಿದ ಧೋನಿ ಅಜೇಯ 79 ರನ್‌ ಗಳಿಸಿದ್ದರೂ ಚೆನ್ನೈ ತಂಡಕ್ಕೆ ಗೆಲುವು ದೊರಕಿಸಿಕೊಡಲು ಅವರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ ಚೆನ್ನೈ ತಂಡ  5 ವಿಕೆಟಿಗೆ 193 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೊದಲು ಪಂಜಾಬ್‌ 7 ವಿಕೆಟಿಗೆ 197 ರನ್‌ ಪೇರಿಸಿತ್ತು.ಅಂತಿಮ 12 ಎಸೆತಗಳಲ್ಲಿ ಚೆನ್ನೈ ಗೆಲುವಿಗೆ 36 ರನ್‌ ಬೇಕಿತ್ತು. 19ನೇ ಓವರಿನಲ್ಲಿ 19 ರನ್‌ ಬಂದಾಗ ಗೆಲುವಿನ ನಿರೀಕ್ಷೆಯಿತ್ತು. ಆದರೆ ಅಂತಿಮ ಓವರಿನಲ್ಲಿ ತಂಡ 13 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಪ್ರಸಕ್ತ ಐಪಿಎಲ್‌ನಲ್ಲಿ ಇದೇ ಮೊದಲ ಸಲ ಆಡಲಿಳಿದ ಕ್ರಿಸ್‌ ಗೇಲ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾಗಿದ್ದಾರೆ. 33 ಎಸೆತಗಳಿಂದ 63 ರನ್‌ ಬಾರಿಸಿ ಚೆನ್ನೈ ಬೌಲರ್‌ಗಳ ಮೇಲೆರಗಿದರು. ಈ ಸ್ಫೋಟಕ ಆಟದ ವೇಳೆ 7 ಬೌಂಡರಿ, 4 ಸಿಕ್ಸರ್‌ ಸಿಡಿಯಲ್ಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next