Advertisement

ಶ್ರೇಯಸ್‌ ಆಟಕ್ಕೆ ಸಚಿನ್‌ ಪ್ರಶಂಸೆ

12:30 AM May 12, 2017 | Team Udayavani |

ಮುಂಬಯಿ: ಗುಜರಾತ್‌ ಲಯನ್ಸ್‌ ವಿರುದ್ಧ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿ ಡೆಲ್ಲಿ ಗೆಲುವಿನ ಹೀರೋ ಆಗಿ ಮೂಡಿಬಂದ ಶ್ರೇಯಸ್‌ ಅಯ್ಯರ್‌ ಆಟ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಪ್ರಶಂಸೆಗೆ ಪಾತ್ರವಾಗಿದೆ. ಅಯ್ಯರ್‌ ಅವರಿಗೆ ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Advertisement

‘ಕಳೆದ ರಾತ್ರಿ ಶ್ರೇಯಸ್‌ ಅಯ್ಯರ್‌ ಅತ್ಯದ್ಭುತ ಇನ್ನಿಂಗ್ಸ್‌ ಒಂದನ್ನು ಪ್ರದರ್ಶಿಸಿದರು. ಅವರಿಗೆ ಅಭಿನಂದನೆಗಳು. ಈ ಐಪಿಎಲ್‌ನಲ್ಲಿ ಭಾರತದ ಸಾಕಷ್ಟು ಮಂದಿ ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ…’ ಎಂದು ತೆಂಡುಲ್ಕರ್‌ ಟ್ವೀಟ್‌ ಮಾಡಿದ್ದಾರೆ. ಇದಕ್ಕೂ ಮುನ್ನ ರಿಷಬ್‌ ಪಂತ್‌ ಆಟವನ್ನೂ ಪ್ರಶಂಸಿಸಿ ‘ಇದು ನಾನು ಐಪಿಎಲ್‌ನಲ್ಲಿ ಕಂಡ ಸರ್ವಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು…’ ಎಂದು ಸಚಿನ್‌ ಟ್ವೀಟ್‌ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸಚಿನ್‌ ತೆಂಡುಲ್ಕರ್‌ ಐಪಿಎಲ್‌ ಪಂದ್ಯಾವಳಿಯನ್ನು ಎಷ್ಟೊಂದು ಆಸಕ್ತಿಯಿಂದ ಗಮನಿಸುತ್ತಿದ್ದಾರೆ ಎಂಬುದಕ್ಕೆ ಈ ಪ್ರಶಂಸೆಗಳೇ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next