ಬೆಂಗಳೂರು: ತವರು ನೆಲದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಮುಂಬೈ ಇಂಡಿಯನ್ಸ್ ನಡುವಿನ ಹಣಾಹಣಿಯ ಐಪಿಎಲ್ 10ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಬಲಿಷ್ಠ ಮುಂಬೈ ತಂಡ 4 ವಿಕೆಟ್ ಗಳ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 3 ವಿಕೆಟ್ ಗಳ ನಷ್ಟಕ್ಕೆ 142 ರನ್ ಗಳಿಸಿತ್ತು. ಸಾಮಾನ್ಯ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲೇ ಮುಗ್ಗರಿಸಿತ್ತು. ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್ 10 ಓವರ್ ನೊಳಗೆ ತನ್ನ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 42 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಮುಂಬೈಗೆ ಕಿರಾನ್ ಪೊಲ್ಲಾರ್ಡ್ 70 ರನ್ ಗಳಿಸಿ ಆಸರೆಯಾದರು. ಆದರೆ ಬಿರುಸಿನ ಹೊಡೆತಕ್ಕೆ ಮುಂದಾಗಿ ಡಿವಿಲಿಯರ್ಸ್ ಗೆ ಕ್ಯಾಚ್ ನೀಡಿ ನಿರಾಸೆಮೂಡಿಸಿದರು.
ಆದರೆ ಕುನಾಲ್ ಪಾಂಡೆ ಭರ್ಜರಿ ಆಟವಾಡಿ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಮುಂಬೈ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಭುಜನೋವಿನಿಂದ ಐಪಿಎಲ್ ನಿಂದ ದೂರ ಉಳಿದಿದ್ದ ಕೊಹ್ಲಿ ಈ ಪಂದ್ಯದಲ್ಲಿ ಕಾಮ್ ಬ್ಯಾಕ್ ಮಾಡಿದ್ದು ಆರ್ ಸಿಬಿ ನಾಯಕನಾಗಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧ ಶತಕದ ಮೂಲಕ ತಮ್ಮ ನೈಜ ಆಟ ಪ್ರದರ್ಶಿಸಿದರು.