Advertisement
ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಬೆಂಗಳೂರು 4 ವಿಕೆಟಿಗೆ 214 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದರೆ ಕೆಕೆಆರ್ ತಂಡ ನಿತೀಶ್ ರಾಣ ಮತ್ತು ಆ್ಯಂಡ್ರೆ ರಸೆಲ್ ಅವರ ಸ್ಫೋಟಕ ಆಟದಿಂದಾಗಿ ಗೆಲುವಿನ ಸನಿಹಕ್ಕೆ ತಲುಪಿ ಶರಣಾಯಿತು. ಒಂದು ಹಂತದಲ್ಲಿ 79 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್‌ಗೆ ರಾಣ ಮತ್ತು ರಸೆಲ್ ಭರ್ಜರಿ ಆಟದ ಮೂಲಕ ಗೆಲುವಿನ ಆಸೆ ಹುಟ್ಟಿಸಿದರು. ಅಂತಿಮ ಓವರಿನಲ್ಲಿ ರಸೆಲ್ ಔಟಾಗುತ್ತಲೇ ತಂಡದ ಸೋಲು ಖಚಿತವಾಯಿತು. ಅವರಿಬ್ಬರು 5ನೇ ವಿಕೆಟಿಗೆ 118 ರನ್ನುಗಳ ಜತೆಯಾಟ ನಡೆಸಿದ್ದರು. ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ತಮ್ಮ ಐದನೇ ಶತಕ ಬಾರಿಸಿ ಮಿಂಚಿದರು. 2016ರ ಬಳಿಕ ಐಪಿಎಲ್‌ನಲ್ಲಿ ಇದೇ ಅವರ ಮೊದಲ ಶತಕ. ಇದಕ್ಕೂ ಮೊದಲು ನಾಲ್ಕು ಸೆಂಚುರಿ ಬಾರಿಸಿದ್ದರು.
ರಾಯಲ್ ಚಾಲೆಂಜರ್ ಬೆಂಗಳೂರು
ಪಾರ್ಥಿವ್ ಪಟೇಲ್ ಸಿ ರಾಣಾ ಬಿ ನಾರಾಯಣ್ 11
ವಿರಾಟ್ ಕೊಹ್ಲಿ ಸಿ ಶುಭಮನ್ ಗಿಲ್ ಬಿ ಗರ್ನಿ 100
ಆಕಾಶ್ ದೀಪ್ ನಾಥ್ ಸಿ ಉತ್ತಪ್ಪ ಬಿ ರಸೆಲ್ 13
ಮೊಯಿನ್ ಅಲಿ ಸಿ ಪ್ರಸಿದ್ಧ್ ಬಿ ಕುಲದೀಪ್ 66
ಸ್ಟೋಯಿನಿಸ್ ಔಟಾಗದೆ 17 ಇತರ 6
ಒಟ್ಟು (20 ಓವರ್‌ಗಳಲ್ಲಿ 4 ವಿಕೆಟಿಗೆ) 213
ವಿಕೆಟ್ ಪತನ: 1-18, 2-59, 3-149, 4-213
Related Articles
ಸುನಿಲ್ ನಾರಾಯಣ್ 4-0-32-1
ಪ್ರಸಿದ್ಧ ಕೃಷ್ಣ 4-0-52-0
ಆ್ಯಂಡ್ರೆ ರಸಲ್ 3-0-17-1
ಕುಲದೀಪ್ ಯಾದವ್ 4-0-59-1
ಪೀಯೂಷ್ ಚಾವ್ಲಾ 1-0-10-0
Advertisement
ಕೋಲ್ಕತಾ ನೈಟ್ ರೈಡರ್ಕ್ರಿಸ್ ಲಿನ್ ಸಿ ಕೊಹ್ಲಿ ಬಿ ಸ್ಟೇನ್ 1
ಸುನೀಲ್ ನಾರಾಯಣ್ ಸಿ ಪಟೇಲ್ ಬಿ ಸೈನಿ 18
ಶುಭಮನ್ ಗಿಲ್ ಸಿ ಕೊಹ್ಲಿ ಬಿ ಸ್ಟೇನ್ 9
ರಾಬಿನ್ ಉತ್ತಪ್ಪ ಸಿ ನೇಗಿ ಬಿ ಸ್ಟೋಯಿನಿಸ್ 9
ನಿತೀಶ್ ರಾಣ ಔಟಾಗದೆ 79
ಆ್ಯಂಡ್ರೆ ರಸೆಲ್ ರನೌಟ್ 65
ದಿನೇಶ್ ಕಾರ್ತಿಕ್ ಔಟಾಗದೆ 0 ಇತರ 16
ಒಟ್ಟು ( 20 ಓವರ್‌ಗಳಲ್ಲಿ 5 ವಿಕೆಟಿಗೆ) 203
ವಿಕೆಟ್ ಪತನ: 1-6, 2-24, 3-33, 4-79, 5-197 ಬೌಲಿಂಗ್: ಡೇಲ್ ಸ್ಟೇನ್ 4-0-40-2
ನವ್‌ದೀಪ್ ಸೈನಿ 4-0-31-1
ಮೊಹಮ್ಮದ್ ಸಿರಾಜ್ 4-0-38-0
ಮಾರ್ಕಸ್ ಸ್ಟೋಯಿನಿಸ್ 4-0-32-1
ಯಜುವೇಂದ್ರ ಚಾಹಲ್ 3-0-45-0
ಮೊಯಿನ್ ಅಲಿ 1-0-13-0