Advertisement
ಹೊಸ ಐಫೋನ್ ಸರಣಿಯ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಇಲ್ಲ. 16 ಮತ್ತು ಪ್ಲಸ್ ನಲ್ಲಿ ಎರಡು ಕ್ಯಾಮರಾ ಲೆನ್ಸ್ ಗಳನ್ನು ಡಯಾಗ್ನಲ್ ಬದಲು, ಒಂದರ ಮೇಲೆ ಒಂದರಂತೆ ಲಂಬವಾಗಿ ಇರಿಸಲಾಗಿದೆ. ಪ್ರೊ ಮತ್ತು ಪ್ರೊ ಮ್ಯಾಕ್ಸ್ ನಲ್ಲಿ ಮೂರು ಕ್ಯಾಮರಾ ಲೆನ್ಸ್ ಗಳು ಹಿಂದಿನಂತೆಯೇ ಇವೆ. ಹೀಗಾಗಿ 16 ಪ್ರೊ. ಪ್ರೊ ಮ್ಯಾಕ್ಸ್ ಅನ್ನು ಜೇಬಿನಲ್ಲಿ ಇರಿಸಿಕೊಂಡರೆ ಇದು ಹೊಸ ಸರಣಿಯ ಐಫೋನ್ ಎಂಬುದು ತಿಳಿಯುವುದಿಲ್ಲ! ಭಾರತದಲ್ಲಿ, iPhone 16 ಬೆಲೆ 79,900 ರೂ. ಮತ್ತು iPhone 16 Plus 89,900 ರೂ.ಗಳಲ್ಲಿ ಲಭ್ಯವಾಗಲಿದೆ. iPhone 16 Pro 1,19,900 ರೂ.ಗಳಿಂದ ಆರಂಭವಾಗುತ್ತದೆ. ಈ ಸರಣಿಯಲ್ಲಿ ಅತ್ಯುನ್ನತವಾದ iPhone 16 Pro Max ಬೆಲೆ 1,44900 ರೂ. ನಿಂದ ಆರಂಭ.
Related Articles
Advertisement
iPhone 16 ಮತ್ತು iPhone 16 Plus:Apple ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಅನ್ನು “ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ” ನಿಂದ ತಯಾರಿಸಲಾಗಿದೆ ಆಲ್ಟ್ರಾಮರೀನ್, ಟೀಲ್, ಪಿಂಕ್, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಬರುತ್ತವೆ. ಐಫೋನ್ 16 6.1-ಇಂಚಿನ ಪರದೆ ಹೊಂದಿದೆ, ಆದರೆ ಐಫೋನ್ 16 ಪ್ಲಸ್ 6.7-ಇಂಚಿನ ದೊಡ್ಡ ಪರದೆಯನ್ನು ನೀಡುತ್ತದೆ. ಎರಡೂ ಮಾದರಿಗಳು 2000nits ಗರಿಷ್ಠ ಬ್ರೈಟ್ನೆಸ್ ಹೊಂದಿವೆ. ಬಟನ್ ಮೂಲಕವೇ ಕ್ಯಾಮರಾ ನಿಯಂತ್ರಣ:
ಹೆಚ್ಚುವರಿಯಾಗಿ, ಐಫೋನ್ 16 ಹೊಸ ಕ್ಯಾಮೆರಾ ನಿಯಂತ್ರಣ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಆನ್/ಆಫ್ ಸ್ವಿಚ್ನಿಂದ ಸ್ವಲ್ಪ ಕೆಳಗೆ ಇದೆ. ಇದನ್ನು ಟಚ್ ಮಾಡಿದರೆ ಕ್ಯಾಮರಾ App ಓಪನ್ ಆಗುತ್ತದೆ. ಆಗ ಬಟನ್ ಮೇಲೆ ಬೆರಳನ್ನು ಸ್ಲೈಡ್ ಮಾಡುವ ಮೂಲಕ ಸೆಟ್ಟಿಂಗ್ ಗಳನ್ನು ಹೊಂದಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಈ ಬಟನ್ ಸ್ಯಾಫೈರ್ ಗ್ಲಾಸ್ ನಿಂದ ತಯಾರಾಗಿದೆ. ಒಂದೇ ಕ್ಲಿಕ್ ಕ್ಯಾಮರಾವನ್ನು ತೆರೆಯುತ್ತದೆ, ಎರಡನೇ ಕ್ಲಿಕ್ ಫೋಟೋವನ್ನು ಸೆರೆಹಿಡಿಯುತ್ತದೆ ಮತ್ತು ಆ ಬಟನ್ ಅನ್ನು ಒತ್ತಿ ಹಿಡಿದಾಗ ವೀಡಿಯೊವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸುತ್ತದೆ. ಕ್ಯಾಮರಾ ನಿಯಂತ್ರಣದಲ್ಲಿ ಸುಧಾರಿತ ಟಚ್ ಗೆ ಸ್ಚರ್ಗಳಿಗೆ ಬೆಂಬಲವಿದೆ, ಪೂರ್ಣ ಕ್ಲಿಕ್ ಮತ್ತು ಹಗುರವಾದ ಪ್ರೆಸ್ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ. ಹಗುರವಾದ ಪ್ರೆಸ್ ಕ್ಲೀನ್ ಪೂರ್ವವೀಕ್ಷಣೆಯನ್ನು ನೀಡುತ್ತದೆ. ಶಾಟ್ ಅನ್ನು ಹೆಚ್ಚು ನಿಖರವಾಗಿ ರೂಪಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಹೊಸ ಓವರ್ಲೇ ಜೂಮ್ ನಂತಹ ಅಗತ್ಯ ಕ್ಯಾಮರಾ ಸೆಟ್ಟಿಂಗ್ ಗಳಿಗೆ ಸಹಕರಿಸುತ್ತದೆ.
ಐಫೋನ್ 16, 48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ, ಇದು 48MP ಮತ್ತು 12MP ಫೋಟೋಗಳನ್ನು ಒಂದು ಸ್ಪಷ್ಟವಾದ 24MP ಚಿತ್ರಕ್ಕೆ ಸಂಯೋಜಿಸುತ್ತದೆ. ಇದರಲ್ಲಿ ಡಾಲ್ಬಿ ವಿಷನ್ HDR ನೊಂದಿಗೆ 4K60 ವೀಡಿಯೊವನ್ನು ಶೂಟ್ ಮಾಡಬಹುದು ಮತ್ತು ಹೊಸ 12MP ಅಲ್ಟ್ರಾ-ವೈಡ್ ಕ್ಯಾಮೆರಾವು ದೊಡ್ಡ ಅಪರ್ಚರ್ ಮತ್ತು ಹೆಚ್ಚಿನ ಪಿಕ್ಸೆಲ್ ಗಳನ್ನು ಹೊಂದಿದೆ. ಇದು ಪ್ರಕಾಶಮಾನವಾದ, ತೀಕ್ಷ್ಣವಾದ ಫೋಟೋಗಳಿಗಾಗಿ 2.6x ಹೆಚ್ಚಿನ ಬೆಳಕನ್ನು ನೀಡುತ್ತದೆ. ಐಫೋನ್ 16 ಫೋನಿನ ಕ್ಯಾಮರಾ ಸೆಟಪ್, ನಾಲ್ಕು ಕ್ಯಾಮೆರಾ ಲೆನ್ಸ್ ಗಳಿಗೆ ಸಮನಾಗಿದೆ ಎಂದು ಆಪಲ್ ತಿಳಿಸಿದೆ. ಐಫೋನ್ 16 ಮಾದರಿಗಳಲ್ಲಿ ಆಪಲ್ ಇಂಟೆಲಿಜೆನ್ಸ್ ಸಾಫ್ಟ್ ವೇರ್ ಇರುವುದು ಪ್ರಮುಖ ವೈಶಿಷ್ಟ್ಯ. ಇದರಲ್ಲಿ ಡೇಟಾವನ್ನು ಎಂದಿಗೂ ಸಂಗ್ರಹಿಸಲಾಗುವುದಿಲ್ಲ ಅಥವಾ ಹಂಚಿಕೊಳ್ಳಲಾಗುವುದಿಲ್ಲ ಎಂದು Apple ಭರವಸೆ ನೀಡಿದೆ.
ಪ್ರೊ ಮತ್ತು ಮ್ಯಾಕ್ಸ್ ಆವೃತ್ತಿಗಳು ಟೈಟೇನಿಯಂ ಲೋಹದ ದೇಹ ಹೊಂದಿವೆ. ಇದು ಅತ್ಯಂತ ಬಲಿಷ್ಠ ಲೋಹ. ಆದರೆ ತೂಕದಲ್ಲಿ ಹಗುರ. ಪ್ರೊ 199 ಗ್ರಾಂ ಇದ್ದರೆ, ಪ್ರೊ ಮ್ಯಾಕ್ಸ್ 227 ಗ್ರಾಂ ತೂಕವಿದೆ. ಹಿಂದಿನ ಸರಣಿಯಲ್ಲಿ ಐಫೋನ್ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳು ಕ್ರಮವಾಗಿ 6.1 ಮತ್ತು 6.7 ಇಂಚಿನ ಪರದೆ ಹೊಂದಿರುತ್ತಿದ್ದವು. ಈ ಬಾರಿ iPhone 16 Pro 6.3-ಇಂಚಿನ ಹಾಗೂ iPhone 16 Pro Max 6.9-ಇಂಚಿನ ಓಎಲ್ಇಡಿ 460 ಪಿಪಿಐ ಪರದೆಯನ್ನು ಹೊಂದಿದೆ, ಇದುವರೆಗಿನ ಐಫೋನ್ ಗಳಲ್ಲಿ ಇದು ಅತ್ಯಂತ ದೊಡ್ಡ ಅಳತೆಯ ಪರದೆಯಾಗಿದೆ. ಸುಪರ್ ರೆಟಿನಾ ಎಕ್ಸ್ ಡಿ ಆರ್ ಡಿಸ್ ಪ್ಲೇ ಹೊಂದಿವೆ.
ಈ ನಾಲ್ಕೂ ಮಾದರಿಗಳಲ್ಲಿ ಎರಡು ಸಿಮ್ ಬಳಸಬಹುದು (ಇಸಿಮ್ + ನ್ಯಾನೋ ಸಿಮ್) *ಕೆ.ಎಸ್. ಬನಶಂಕರ ಆರಾಧ್ಯ