Advertisement

iPhone: ಐಫೋನ್‌ 15 ಆಯ್ತು, 15 ಪ್ಲಸ್‌ ಕೂಡ ಭಾರತದಲ್ಲೇ ಉತ್ಪಾದನೆ

09:10 PM Sep 14, 2023 | Team Udayavani |

ನವದೆಹಲಿ: ಆ್ಯಪಲ್‌ ಕಂಪನಿ ಭಾರತೀಯ ಐಫೋನ್‌ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಆ ಕಂಪನಿಯ ಐಫೋನ್‌ 15 ಆವೃತ್ತಿಯ ಉತ್ಪಾದನೆ ಈಗಾಗಲೇ ಚೆನ್ನೈನ ಫಾಕ್ಸ್‌ಕಾನ್‌ ಘಟಕದಲ್ಲಿ ಆರಂಭವಾಗಿದೆ. ಅದರ ಜೊತೆಗೆ 15 ಪ್ಲಸ್‌ ಆವೃತ್ತಿಯನ್ನೂ ಭಾರತದಲ್ಲೇ ಉತ್ಪಾದಿಸಲು ನಿರ್ಧರಿಸಲಾಗಿದೆ.

Advertisement

15 ಪ್ಲಸ್‌ ಭಾರತದಲ್ಲೇ ಲಭ್ಯವಾಗುವವರೆಗೆ, ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಇಲ್ಲಿ ಸಂತೋಷ ಪಡಬೇಕಾದ ಸಂಗತಿಯೆಂದರೆ, 15 ಪ್ಲಸ್‌ ಅನ್ನು ಆರಂಭದಲ್ಲಿ ಹೊರಗಿನಿಂದ ತರಿಸಿಕೊಳ್ಳಲಾಗುತ್ತದೆಯಾದರೂ, 15ನೇ ಆವೃತ್ತಿಯನ್ನು ಪೂರ್ಣವಾಗಿ ಭಾರತದಲ್ಲೇ ಪಡೆಯಬಹುದು. ಈಗಾಗಲೇ ಇದರ ಉತ್ಪಾದನೆ ಆರಂಭವಾಗಿರುವುದರಿಂದ ಸದ್ಯದಲ್ಲೇ ಅದು, ಸ್ಥಳೀಯವಾಗಿಯೇ ಲಭ್ಯವಾಗುತ್ತದೆ. ಇದರಿಂದ ಬೆಲೆ ಕಡಿಮೆಯಾಗುವ ಭರವಸೆಯೊಂದು ಶುರುವಾಗಿದೆ. ಆ್ಯಪಲ್‌ ಕಂಪನಿ ಮಂಗಳವಾರ ಆ್ಯಪಲ್‌ 15ನೇ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ವೇಗದ ಚಿಪ್‌, ಅತ್ಯುತ್ಕೃಷ್ಟ ಹೊಳಪು ಇದೆ.

Advertisement

Udayavani is now on Telegram. Click here to join our channel and stay updated with the latest news.

Next