ನವದೆಹಲಿ: ಜಗತ್ತಿನಾದ್ಯಂತ ಇಂದು ಐಫೋನ್-12 ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೇ ಆ್ಯಪಲ್ ಸಂಸ್ಥೆ 5ಜಿ ತಂತ್ರಜ್ಞಾನ ಆಧಾರಿತ 4 ಸುಧಾರಿತ ಆವೃತ್ತಿಗಳಲ್ಲಿ ಐಫೋನ್ ಸೀರಿಸ್ ಗಳನ್ನು ಬಿಡುಗಡೆ ಮಾಡಿತ್ತು. ಐಫೋನ್ 11 ಮಾದರಿಯಂತೆಯೇ ಇರುವ ಈ ಪೋನ್ ಹಗುರ ಮತ್ತು ತೆಳುವಾಗಿ ಆಕರ್ಷಕವಾಗಿದ್ದರಿಂದ ಹಲವರು ಮನಸೋತಿದ್ದರು.
ಆದರೇ ಈ ಬಾರಿ ದುಬಾರಿ ಐಫೋನ್ ಖರೀದಿಸಬೇಕೆಂದು ನೀವೇನಾದರೂ ಪ್ಲ್ಯಾನ್ ಮಾಡಿದ್ದರೇ ಸ್ವಲ್ಪ ಯೋಚಿಸುವುದು ಒಳಿತು. ಯಾಕೇಂದರೇ ಐಫೋನ್-12 ಸೀರಿಸ್ ಗೆ ಕ್ರಮವಾಗಿ 70 ಸಾವಿರ, 79 ಸಾವಿರ, 84 ಸಾವಿರ, 94 ಸಾವಿರ ಬೆಲೆ ನಿಗದಿಪಡಿಸಲಾಗಿದೆ. ಇದಕ್ಕಿಂತ ಕಡಿಮೆ ಬೆಲೆಗೆ ಐಫೋನ್ ಕೊಳ್ಳಬೇಕೆಂದು ಆಲೋಚಿಸುತ್ತಿದ್ದರೇ ಐಫೋನ್ 11 ಕಡೆ ಗಮನಹರಿಸುವುದು ಒಳಿತು. ಯಾಕೆಂದರೇ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಐಫೋನ್ -11 ಅಗ್ಗದ ಬೆಲೆಗೆ ದೊರಕುತ್ತಿದೆ.
ಹೌದು ! ಐಫೋನ್-11 ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಆ್ಯಪಲ್ ಐಫೋನ್ 11 64 ಜಿಬಿ ಕೇವಲ 47,999ಕ್ಕೆ ಲಭ್ಯವಿದ್ದು, HDFC debit/creadit ಕಾರ್ಡ್ ಹೊಂದಿದ್ದರೇ ಇನ್ನೂ ಕಡಿಮೆ ಬೆಲೆಗೆ ಐಫೊನ್ ನಿಮ್ಮದಾಗುತ್ತದೆ. ಬ್ಯಾಂಕ್ ಆಫರ್ ಮೂಲಕ 2000 ಡಿಸ್ಕೌಂಟ್ ದೊರೆಯುತ್ತಿದ್ದು 45,999ಕ್ಕೆ ಸಿಗಲಿದೆ. ಮತ್ತೊಂದು ಗಮನಾರ್ಹ ಅಂಶವೆಂದರೇ ಎಕ್ಸ್ ಚೆಂಜ್ ಆಫರ್ ಕೂಡ ಇದ್ದು, ಗ್ರಾಹಕರು ಹಳೆಯ ಸ್ಮಾರ್ಟ್ ಪೋನ್ ನೀಡಿ ಹೊಸ ಐಫೋನ್ ಖರೀದಿಸಬಹುದು.
ಅಮೇಜಾನ್ ಸೇಲ್ ಇಂದಿನಿಂದ ( ಅಕ್ಟೋಬರ್ 16, 2020) ಆರಂಭವಾಗಲಿದ್ದು, ಐಪೋನ್ ಕೊಳ್ಳಬೇಕೆಂದು ಬಹುಕಾಲದಿಂದ ಕನಸು ಕಾಣುತ್ತಿದ್ದರೇ ಇದೊಳ್ಳೆಯ ಸಮಯ ಎಂದೇ ಹೇಳಬಹುದು. ಆ್ಯಪಲ್ 12 ಸೀರಿಸ್ ಫೋನ್ ಗಳು ಲೋಕಾರ್ಪಣೆ ಗೊಂಡಾಗಲೇ ಐಪೋನ್ -11ಗೆ ಡಿಸ್ಕೌಂಟ್ ಘೋಷಣೆ ಮಾಡಲಾಗಿತ್ತು. ಪ್ರಸ್ತುತ ಭಾರತದಲ್ಲಿ ಐಪೋನ್ -11 64 ಜಿಬಿ ದರ 54,900 ರೂ. ಇದೆ.
ಮತ್ತೊಂದೆಡೆ ಫ್ಲಿಫ್ ಕಾರ್ಟ್ ಬಿಗ್ ಬಿಲಿಯನ್ ಡೇ ಕೂಡ ಆರಂಭವಾಗುತ್ತಿದ್ದು, ಇಲ್ಲೂ ಕೂಡ ಐಪೋನ್ ಕಡಿಮೆ ದರಕ್ಕೆ ದೊರಕುವ ಸಾಧ್ಯತೆಗಳಿವೆ.
ಐಪೋನ್ -11 ನಲ್ಲಿ 6.1 ಇಂಚಿನ ಲಿಕ್ವಿಡ್ ರೆಟಿನಾ HD LCD ಡಿಸ್ ಪ್ಲೇ ಇದ್ದು, A13 ಬಯೋನಿಕ್ ಚಿಪ್ ಹಾಗೂ ಥರ್ಡ್ ಜನರೇಷನ್ ನ್ಯೂರಲ್ ಇಂಜಿನ್ ಹೊಂದಿದೆ. ಮಾತ್ರವಲ್ಲದೆ ಡ್ಯುಯೆಲ್ ಕ್ಯಾಮಾರ ಹೊಂದಿದ್ದು, ಅಲ್ಟ್ರಾ ವೈಡ್ ಮತ್ತು ವೈಡ್ ಕ್ಯಾಮಾರಗಳ ಮುಖಾಂತರ 4ಕೆ ವಿಡಿಯೋ ಚಿತ್ರಿಸಬಹುದು. ಇದರ ಬ್ಯಾಟರಿ ಸಾಮಾರ್ಥ್ಯ 3,110 mAh ಇದ್ದು ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ.