ದುಬೈ: ಐಪಿಎಲ್ ಚೆನ್ನೈ – ಆರ್ ಸಿಬಿಯ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
ಆತ್ಮವಿಶ್ವಾಸದಲ್ಲಿ ಆರ್ಸಿಬಿ :
ಹತ್ತರಲ್ಲಿ 7 ಪಂದ್ಯ ಗೆದ್ದಿರುವ ಆರ್ ಸಿಬಿ ಈಗ ತುಂಬು ಆತ್ಮವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಗುಚಿದ ರೀತಿಯೊಂದೇ ಸಾಕು, ಆರ್‌ಸಿಬಿ ಎಷ್ಟು ಪ್ರಬಲವಾಗಿ ಸಂಘಟಿಗೊಂಡಿದೆ ಎಂಬುದು ತಿಳಿಯುತ್ತದೆ. ಕೋಲ್ಕತಾ ಎದುರು ಸಿರಾಜ್ ಘಾತಕ ಬೌಲಿಂಗ್, ರಾಜಸ್ಥಾನ್ ವಿರುದ್ಧ “ಮಿಸ್ಟರ್ 360 ಡಿಗ್ರಿ’ ಖ್ಯಾತಿಯ ಎಬಿಡಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಆಸೀಸ್ ಬಿಗ್ ಹಿಟ್ಟರ್ ಫಿಂಚ್ ವೈಫಲ್ಯದಿಂದ ಹೊರಬರಬೇಕಿದೆ. ಪಡಿಕ್ಕಲ್ ಆರಂಭಿಕ ಸಾಹಸವನ್ನು ಪುನರಾವರ್ತಿಸಬೇಕಿದೆ. ಇವರಿಬ್ಬರು ಸಿಡಿದು ನಿಂತರೆ ಆರ್ ಸಿಬಿ ಹೆಚ್ಚು ಆಕ್ರಮಣಕಾರಿಯಾಗಿ ಗೋಚರಿಸುವುದು ಖಚಿತ. ಶಿವಂ ದುಬೆ ಈ ಪಂದ್ಯದಲ್ಲಿ ಮತ್ತೆ ಆಡುವ ಬಳಗದಲ್ಲಿ ಕಾಣಿಸುವ ಸಾಧ್ಯತೆ ಇದೆ.
ಘಾತಕ ಬೌಲಿಂಗ್ ಲೈನ್ಅಪ್ :
ಸಾಮಾನ್ಯವಾಗಿ ಆರ್‌ಸಿಬಿ ಪ್ರತೀ ಸಲವೂ ಬೌಲಿಂಗ್ ಬಗ್ಗೆ ಚಿಂತಿಸುತ್ತಿತ್ತು. ಆದರೆ ಈ ವರ್ಷ ಬೌಲಿಂಗ್ ವಿಭಾಗ ಹೈಚ್ಚು ವೈವಿಧ್ಯಮಯವಾಗಿದ್ದು, ಘಾತಕವಾಗಿ ಗೋಚರಿಸಿದೆ. ಚಹಲ್, ವಾಷಿಂಗ್ಟನ್ ಸುಂದರ್ ಸ್ಪಿನ್ ವಿಭಾಗದಲ್ಲಿ ಮಿಂಚುತಿದ್ದಾರೆ. ಮಾರಿಸ್, ಸಿರಾಜ್, ಸೈನಿ ವೇಗದ ಬೌಲಿಂಗ್‌ವಿಭಾಗವನ್ನು ಸಮರ್ಥ ರೀಯಲ್ಲಿ ನಿಭಾಯಿಸುತ್ತಿದ್ದಾರೆ.
ಚೆನ್ನೈಗೆ ಪ್ರತಿಷ್ಠೆಯ ಪಂದ್ಯ :
ಪವಾಡ ಸಂಭವಿಸಿದರೂ ಚೆನ್ನೈ ಪ್ಲೇ ಆಫ್ಗೆ ತೇರ್ಗಡೆಯಾಗದು ಎಂಬುದು ಸದ್ಯದ ಸ್ಥಿತಿ. ಧೋನಿ ಪಡೆ ಮೊದಲ ಸಲ ಮುಂದಿನ ಸುತ್ತನ್ನು ಕಾಣದೆ ಹೊರಬೀಳುವ ಸಂಕಟದಲ್ಲಿದೆ. ಜತೆಗೆ ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಕಳಂಕವೂ ತಟ್ಟಲಿದೆ. ಹೀಗಾಗಿ ಧೋನಿ ಪಡೆ ಪಾಲಿಗೆ ಇದೊಂದು ಪ್ರತಿಷ್ಠೆಯ ಪಂದ್ಯ. ಗೆದ್ದರೆ ತನ್ನ ನಿರ್ಗಮನವನ್ನು ಒಂದಿಷ್ಟು ಮುಂದೂಡಿದ ಸಮಾಧಾನ ಲಭಿಸಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಇಲೆವೆನ್ ಪ್ಲೇಯಿಂಗ್): ದೇವದುತ್ ಪಡಿಕ್ಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ಕೀಪರ್), ಮೊಯೀನ್ ಅಲಿ, ಗುರ್ಕೀರತ್ ಸಿಂಗ್ ಮನ್, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್
ಚೆನ್ನೈ ಸೂಪರ್ ಕಿಂಗ್ಸ್ : ರುತುರಾಜ್ ಗಾಯಕ್ ವಾಡ್, ಫಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎನ್ ಜಗದೀಸನ್, ಎಂ.ಎಸ್.ಧೋನಿ (ಕೀಪರ್ / ನಾಯಕ), ಸ್ಯಾಮ್ ಕುರ್ರನ್, ರವೀಂದ್ರ ಜಡೇಜಾ, ಮಿಚೆಲ್ ಸಾಂಟ್ನರ್, ದೀಪಕ್ ಚಹರ್, ಇಮ್ರಾನ್ ತಾಹಿರ್, ಮೋನು ಕುಮಾರ್