ಹೊಸದಿಲ್ಲಿ : ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಓಎ) ನಿನ್ನೆ ಮಂಗಳವಾರ ಅಭಯ್ ಚೌಟಾಲಾ ಮತ್ತು ಸುರೇಶ್ ಕಲ್ಮಾಡಿ ಅವರ ಆಜೀವ ಅಧ್ಯಕ್ಷತೆಯ ನೇಮಕಾತಿಯನ್ನು ರದ್ದುಗೊಳಿಸಿದೆ.
ಚೆನ್ನೈ ನಲ್ಲಿ ನಡೆದಿದ ವಾರ್ಷಿಕ ಮಹಾಸಭೆಯಲ್ಲಿ ಚೌಟಾಲಾ ಮತ್ತು ಕಲ್ಮಾಡಿ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಕ್ಕೆ ಯಾವುದೇ ಠಾರವು ಕೈಗೊಂಡಿರಲಿಲ್ಲ ಎಂದು ಐಓಎ ಅಧ್ಯಕ್ಷ ಎನ್ ರಾಮಚಂದ್ರನ್ ಹೇಳಿರುವುದಾಗಿ ಐಓಎ ವರದಿ ಮಾಡಿದೆ.
ಹಗರಣ ಕಳಂಕಿತ ಕಲ್ಮಾಡಿ ಮತ್ತು ರಾಷ್ಟ್ರೀಯ ಲೋಕದಲ (ಐಎನ್‌ಎಲ್‌ಡಿ) ಇದರ ನಾಯಕ ಚೌಟಾಲಾ ಅವರನ್ನು ಈ ಮೊದಲು ಐಓಎ ಇದರ ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಜಂಟಿ ಕಾರ್ಯದರ್ಶಿ ರಾಕೇಶ್ ಗುಪ್ತಾ ಮತ್ತು ಎಜಿಎನಲ್ಲಿ ಪಾಲ್ಗೊಂಡಿದ್ದವರ ಪೈಕಿ ಸುಮಾರು 150 ಮಂದಿ ಕಲ್ಮಾಡಿ ಮತ್ತು ಚೌಟಾಲಾ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಕ್ಕೆ ಠರಾವನ್ನು ಮಂಡಿಸಿದ್ದರು.
ಕಲ್ಮಾಡಿ ಅವರು ಈ ಹಿಂದೆ 1996ರಿಂದ 2011ರ ವರೆಗಿನ ಅವಧಿಯಲಿಲ ಐಓಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ; ಆದರೆ 2010ರ ದಿಲ್ಲಿ ಕಾಮನ್ವೆಲ್ತ್ ಗೇಮ್ಸ್ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಅವರು ಹತ್ತು ತಿಂಗಳ ಕಾಲ ಜೈಲಿನಲ್ಲಿದ್ದರು; ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಕಲ್ಮಾಡಿ ಮತ್ತು ಚೌಟಾಲಾ ಅವರನ್ನು ಐಓಎ ಇದರ ಆಜೀವ ಅಧ್ಯಕ್ಷರನ್ನಾಗಿ ನೇಮಕ ಮಾಡಲಾದುದಕ್ಕೆ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಆಶ್ಚರ್ಯ, ಆಘಾತ ವ್ಯಕ್ತಪಡಿಸಿದ್ದರು.