Advertisement

INX ಮೀಡಿಯಾ ಕೇಸ್; ಚಿದಂಬರಂ ಪುತ್ರ ಕಾರ್ತಿ ಸೇರಿ ಇತರ ಆರೋಪಿಗಳಿಗೆ ಕೋರ್ಟ್ ಸಮನ್ಸ್

09:45 AM Oct 22, 2019 | Nagendra Trasi |

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, ಐಎನ್ ಎಕ್ಸ್ ಮೀಡಿಯಾದ ಮಾಜಿ ನಿರ್ದೇಶಕ ಪೀಟರ್ ಮುಖರ್ಜಿ ಮತ್ತು ಇತರರಿಗೆ ವಿಶೇಷ ಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿದೆ.

Advertisement

ಪ್ರಕರಣದ ಕುರಿತಂತೆ ಸಿಬಿಐ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದ ನಂತರ ಕೋರ್ಟ್ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದ್ದು, ಯಾರು ಈಗಾಗಲೇ ತಿಹಾರ್ ಜೈಲಿನಲ್ಲಿದ್ದಾರೆಯೋ ಅವರನ್ನು ಅಕ್ಟೋಬರ್ 24ರಂದು ಕೋರ್ಟ್ ಗೆ ಹಾಜರುಪಡಿಸಬೇಕಿದೆ. ಅಂದು ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಳ್ಳಲಿದೆ.

ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಪಿ.ಚಿದಂಬರಂ, ಕಾರ್ತಿ ಚಿದಂಬರಂ, ಅಕೌಂಟೆಂಟ್ಸ್ ಎಸ್.ಭಾಸ್ಕರನ್, ಐಎನ್ ಎಕ್ಸ್ ನ್ಯೂಸ್, ಐಎನ್ ಎಕ್ಸ್ ಮೀಡಿಯಾ, ಮಾಜಿ ನಿರ್ದೇಶಕ ಪೀಟರ್ ಮುಖರ್ಜಿ, ಚೆಸ್ ಮ್ಯಾನೇಜ್ ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಎಎಸ್ ಕನ್ಸ್ ಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 14 ಮಂದಿ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next