Advertisement

ಐಎನ್‌ಎಕ್ಸ್‌ ಕೇಸ್‌: ಇಂದ್ರಾಣಿ ವಿಚಾರಣೆ

09:16 AM Sep 12, 2019 | Team Udayavani |

ಮುಂಬಯಿ: ಐಎನ್‌ಎಕ್ಸ್‌ ಕೇಸ್‌ನಲ್ಲಿ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿರುವ ಇಂದ್ರಾಣಿ ಮುಖರ್ಜಿಯ ವಿಚಾರಣೆಯನ್ನು ಸಿಬಿಐ ನಡೆಸಿದೆ. ಮಂಗಳವಾರ ಬೈಕುಲಾ ಕಾರಾಗೃಹದಲ್ಲಿರುವ ಮುಖರ್ಜಿ ಜತೆಗೆ ಐದು ರಾಷ್ಟ್ರಗಳಿಗೆ ಕಳುಹಿಸಲಾಗಿರುವ ಅಧಿಕಾರ ಪತ್ರ (ಲೆಟರ್ಸ್‌ ಆಫ್ ರೊಗೇಟರಿ)ದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಐದು ರಾಷ್ಟ್ರಗಳ ಪೈಕಿ ಒಂದು ಅಧಿಕಾರ ಪತ್ರದ ಬಗ್ಗೆ ಎತ್ತಿದ್ದ ಆಕ್ಷೇಪದ ಬಗ್ಗೆ ವಿಚಾರಣೆ ವೇಳೆ ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ಸೋಮವಾರ ವಿಶೇಷ ಕೋರ್ಟ್‌ ಸಿಬಿಐ ತಂಡಕ್ಕೆ ಅನುಮತಿ ನೀಡಿತ್ತು. ಇಂದ್ರಾಣಿ ಮತ್ತು ಪತಿ ಪೀಟರ್‌ ಮುಖರ್ಜಿ ಕಾರಾಗೃಹದಲ್ಲಿ ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next