Advertisement

ಆಹ್ವಾನಿತ ಹಾಕಿ ಟೂರ್ನಿ: ಶೂಟೌಟ್‌ನಲ್ಲಿ ಭಾರತಕ್ಕೆ ಸೋಲು

06:20 AM Jan 29, 2018 | Team Udayavani |

ಹ್ಯಾಮಿಲ್ಟನ್‌: ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ 2ನೇ ಹಂತದ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಬೆಲ್ಜಿಯಂ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಆಘಾತ ಅನುಭವಿಸಿದೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಅವಧಿಯಲ್ಲಿ ತಲಾ 4 ಗೋಲು ಬಾರಿಸಿ ಸಮಬಲ ಸಾಧಿಸಿದ್ದವು. ಹೀಗಾಗಿ ಪಂದ್ಯದ ಫ‌ಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಈ ಹಂತದಲ್ಲಿ ಭಾರತ ಎಡವಿತು.

Advertisement

ನಿಗದಿತ ಅವಧಿಯಲ್ಲಿ ಭಾರತದ ಪರ ರಮಣ್‌ದೀಪ್‌ ಸಿಂಗ್‌ (29 ಮತ್ತು 53ನೇ ನಿಮಿಷ) ಎರಡು ಗೋಲು ಬಾರಿಸಿದರೆ, ನೀಲಕಂಠ ಶರ್ಮ (42ನೇ ನಿಮಿಷ) ಮತ್ತು ಮನ್‌ದೀಪ್‌ ಸಿಂಗ್‌ (49ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು. ಬೆಲ್ಜಿಯಂ ಪರವೂ 4 ಗೋಲು ದಾಖಲಾಗಿದ್ದವು. ವಿಶ್ವ ನಂ.3ನೇ ಶ್ರೇಯಾಂಕಿತ ಬೆಲ್ಜಿಯಂ ವಿರುದ್ಧ ಭಾರತ ಭರ್ಜರಿ ಪ್ರದರ್ಶನ ನೀಡಿತು. ದುರಾದೃಷ್ಟವಶಾತ್‌ ಪೆನಾಲ್ಟಿ ಶೂಟೌಟ್‌ನಲ್ಲಿ ಅದೃಷ್ಟ ಕೈಕೊಟ್ಟಿದೆ. ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾರ್ಕಿ ಟೂರ್ನಿಯ ಮೊದಲನೇ ಹಂತದ ಫೈನಲ್‌ ಪಂದ್ಯದಲ್ಲಿಯೂ ಭಾರತ ತಂಡ ಬೆಲ್ಜಿಯಂ ವಿರುದ್ಧ ಸೋಲುಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next