Advertisement

K. S. Eshwarappa ಬಿಜೆಪಿಯಿಂದ ಆಹ್ವಾನ ಬಂದಿದೆ, ಸೇರುವ ಬಗ್ಗೆ ಶೀಘ್ರ ನಿರ್ಧಾರ

12:22 AM Jul 02, 2024 | Shreeram Nayak |

ಶಿವಮೊಗ್ಗ: ಬಿಜೆಪಿ ಸೇರುವಂತೆ ಆಹ್ವಾನ ಬಂದಿದೆ. ನನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದ್ದೇನೆ. ಪಕ್ಷದ ವರಿಷ್ಠರು, ನನ್ನ ಬೆಂಬಲಿಗರ ಜತೆ ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಈಗಾಗಲೇ ನಾನು ಬಿಜೆಪಿಯಲ್ಲೇ ಇದ್ದೇನೆ. ರಾಷ್ಟ್ರಭಕ್ತ ಬಳಗ ಬಿಜೆಪಿಯ ಒಂದು ಭಾಗವೇ ಆಗಿದೆ. ಚುನಾವಣೆಯ ಒಂದು ವಿಷಯದಲ್ಲಿ ಮಾತ್ರ ಒಂದಿಷ್ಟು ಭಿನ್ನಾಭಿಪ್ರಾಯಗಳಾಗಿದ್ದವು. ಈಗ ಬಿಜೆಪಿ ಕಡೆಯಿಂದ ನನಗೆ ಕರೆ ಬಂದಿದ್ದು, ಪಕ್ಷಕ್ಕೆ ವಾಪಸಾಗುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುತ್ತೇನೆ. ಹಾವೇರಿ ಜಿಲ್ಲೆಯ ಉಪ ಚುನಾವಣೆಯಲ್ಲಿ ಪುತ್ರ ಕಾಂತೇಶ್‌ ಸ್ಪರ್ಧೆ ಬಗ್ಗೆ ಪ್ರಸ್ತಾವ ಆಗಿಲ್ಲ ಎಂದರು.

ಮಠಾಧೀಶರ ಸ್ಥಾನ ದುರುಪಯೋಗ: ಕಾಂಗ್ರೆಸ್‌ ನಾಯಕರು ಎಷ್ಟರ ಮಟ್ಟಿಗೆ ಜಾತಿವಾದಿಗಳು ಎನ್ನುವುದು ರಾಜ್ಯದ ಮುಂದೆ ಬೆತ್ತಲಾಗಿದೆ. ನಾವು ದೇವರ ಸ್ಥಾನ ಕೊಟ್ಟಿರುವ ಮಠಾಧಿಧೀಶರ ಸ್ಥಾನವನ್ನು ಸಹ ಕಾಂಗ್ರೆಸ್‌ನವರು ದುರುಪಯೋಗ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು. ಇಂಥವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಿಸಿ ಎಂದು ಸ್ವಾಮೀಜಿಗಳಿಂದ ಹೇಳಿಸುತ್ತಿದ್ದಾರೆ. ನಿಮ್ಮ ಅ ಧಿಕಾರಕ್ಕೆ ಜಾತಿಯನ್ನು ಮಧ್ಯ ತರುವುದನ್ನು ಖಂಡಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next