Advertisement

ವಿಶ್ವಕಪ್‌ ಕ್ರಿಕೆಟ್‌ ವಿಜೇತರಿಗೆ ಫಿಫಾ ವಿಶ್ವಕಪ್‌ಗೆ ಆಹ್ವಾನ

12:45 AM Feb 18, 2019 | Team Udayavani |

 ಹೊಸದಿಲ್ಲಿ: ಕತಾರ್‌ನಲ್ಲಿ 2022ರಲ್ಲಿ ನಡೆಯಲಿರುವ ಫ‌ುಟ್‌ಬಾಲ್‌ ವಿಶ್ವಕಪ್‌ಗೆ 1983 ಹಾಗೂ 2011ರ ಏಕದಿನ ವಿಶ್ವಕಪ್‌ ವಿಜೇತ ಭಾರತ ಕ್ರಿಕೆಟ್‌ ಸದಸ್ಯರಿಗೆ ಫಿಫಾ ಆಹ್ವಾನ ನೀಡಿದೆ. ಸಿಇಒ ನಾಸೀರ್‌ ಅಲ್‌ ಖಾತರ್‌ ಈ ವಿಷಯ ತಿಳಿಸಿದ್ದಾರೆ.

Advertisement

“ಭಾರತದಲ್ಲಿ ಕ್ರಿಕೆಟ್‌ ಎಷ್ಟು ಜನಪ್ರಿಯ ಎನ್ನುವುದು ನನಗೆ ತಿಳಿದಿರಲಿಲ್ಲ. ಹೀಗಾಗಿ 1983 ಹಾಗೂ 2011 ವಿಶ್ವಕಪ್‌ ವಿಜೇತರನ್ನು ಕತಾರ್‌ಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಿದ್ದೇನೆ. ಅದರಲ್ಲೂ ತಂಡವನ್ನು ಗೆಲ್ಲಿಸಿದ ಅಂದಿನ ನಾಯಕರುಗಳಾದ ಕಪಿಲ್‌ದೇವ್‌ ಹಾಗೂ ಧೋನಿ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next