Advertisement

ಉದಯವಾಣಿ ಯಶೋದಾ ಕೃಷ್ಣ ಫೋಟೋ ಸ್ಪರ್ಧೆಗೆ ಆಹ್ವಾನ

11:14 PM Sep 10, 2020 | mahesh |

ಮಣಿಪಾಲ: ಉದಯವಾಣಿಯು ಮಣಿಪಾಲ ಆವೃತ್ತಿಯ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಓದುಗರಿಗಾಗಿ ಈ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ “ಯಶೋದಾ ಕೃಷ್ಣ’ ಫೋಟೋ ಸ್ಪರ್ಧೆಯನ್ನು ಏರ್ಪಡಿಸಿದೆ. ಸಾಮಾನ್ಯವಾಗಿ ಮುದ್ದು ಕೃಷ್ಣ ಎನ್ನುವುದು ಇದ್ದದ್ದೇ. ಆದರೆ ತಾಯಿ ಮತ್ತು ಮಗುವಿನ ಪ್ರೀತಿಯನ್ನು ಎತ್ತಿ ತೋರುವುದು ವಿಶಿಷ್ಟ. ಹಾಗಾಗಿ ಯಶೋದಾ ಕೃಷ್ಣ ಫೋಟೋ ಸ್ಪರ್ಧೆ.

Advertisement

ನಿಯಮಗಳು: ಫೋಟೋಗಳು ಸ್ವಾಭಾವಿಕವಾಗಿರಬೇಕು. ಕೃಷ್ಣ 7 ವರ್ಷ ವಯಸ್ಸಿನೊಳಗಿನವರಾಗಿರಬೇಕು, ಯಶೋದೆಗೆ ವಯಸ್ಸಿನ ನಿರ್ಬಂಧವಿಲ್ಲ. ಇಮೇಲ್‌ನಲ್ಲಿ ಕಳುಹಿಸುವುದಾದರೆ ಕನಿಷ್ಠ 1 ಎಂಬಿ ಗಾತ್ರದಲ್ಲಿರಬೇಕು. ವ್ಯಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುವವರು ಡಾಕ್ಯುಮೆಂಟ್‌ ಫಾರ್ಮ್ಯಾಟ್‌ನಲ್ಲಿ ಕಳುಹಿಸಬೇಕು. ಒಬ್ಬರು ಎರಡು ಭಂಗಿಯ ಚಿತ್ರಗಳನ್ನು ಕಳುಹಿಸಬಹುದು. ಗುಣಮಟ್ಟದ ಛಾಯಾಚಿತ್ರಗಳನ್ನು ಮಾತ್ರ ಪರಿಗಣಿಸಲಾಗುವುದು. ತೀರ್ಪುಗಾರರ ಮೆಚ್ಚುಗೆ ಪಡೆದ ಚಿತ್ರಗಳನ್ನೂ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ಪ್ರಥಮ, ದ್ವಿತೀಯ (3), ತೃತೀಯ (6) ಹಾಗೂ 12 ಪ್ರೋತ್ಸಾಹಕರ ಬಹುಮಾನಗಳಿರಲಿವೆ. ಪ್ರಥಮಕ್ಕೆ 10 ಸಾವಿರ, ದ್ವಿತೀಯಕ್ಕೆ 5 ಸಾವಿರ, ತೃತೀಯಕ್ಕೆ 3,500 ಸಾವಿರ ಹಾಗೂ ಪ್ರೋತ್ಸಾಹಕರ ವಿಭಾಗಕ್ಕೆ 2,000 ರೂ. ಮೌಲ್ಯದ ಬಹುಮಾನ ನೀಡಲಾಗುವುದು.

ಸೆಪ್ಟಂಬರ್‌ 13, 2020 ಫೋಟೋಗಳನ್ನು ಕಳುಹಿಸಲು ಕಡೇ ದಿನ. ಅಂದು ಸಂಜೆ 6ರ ಅನಂತರ ತಲುಪುವ ಚಿತ್ರಗಳು ಸ್ಪರ್ಧೆಗೆ ಪರಿಗಣಿತವಾಗುವುದಿಲ್ಲ. ಯಶೋದಾ ಕೃಷ್ಣರ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸದ ಫೊಟೋಗಳನ್ನು ಪರಿಗಣಿಸಲಾಗುವುದಿಲ್ಲ.

ನಮ್ಮ ಇಮೇಲ್‌ ವಿಳಾಸ ri@udayavani.com, ವಾಟ್ಸ್‌ ಆ್ಯಪ್‌ ನಂಬರ್‌ 9148594259. ಅಂಚೆ ಮೂಲಕ ಕಳುಹಿಸುವವರು (ಛಾಯಾಚಿತ್ರ ಗಾತ್ರ ಕನಿಷ್ಠ 16 ಸೆಂ.ಮೀ. x 12 ಸೆಂ.ಮೀ.) ಯಶೋದಾ ಕೃಷ್ಣಾ ಸ್ಪರ್ಧೆ ವಿಭಾಗ, ಉದಯವಾಣಿ ಕಟ್ಟಡ, ಮಣಿಪಾಲ-576104 ಇಲ್ಲಿಗೆ ಕಳುಹಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next