Advertisement

LVM3 ರಾಕೆಟ್‌ ತಯಾರಿಸಲು ಖಾಸಗಿ ವಲಯಕ್ಕೆ ಆಹ್ವಾನ

01:01 AM May 14, 2024 | Team Udayavani |

ಹೊಸದಿಲ್ಲಿ: 72 ವಾಣಿಜ್ಯಾತ್ಮಕ ಉಪ ಗ್ರಹಗಳ ಉಡ್ಡಯನ ಮೂಲಕ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದ್ದ ಭಾರತದ ಅತೀ ದೊಡ್ಡ ರಾಕೆಟ್‌ ಎಲ್‌ವಿಎಂ3 ಉತ್ಪಾದಿಸಲು ಖಾಸಗಿ ವಲಯಕ್ಕೆ ಆಹ್ವಾ ನಿಸಲಾಗಿದೆ. ವಾರ್ಷಿಕ ಈಗಿರುವ 2ರಿಂದ 4 ಅಥವಾ 6 ರಾಕೆಟ್‌ ಉತ್ಪಾ ದನೆಗಾಗಿ ಭಾರತದ ಸಾರ್ವಜನಿಕ ವಲಯದ ಬಾಹ್ಯಾಕಾಶ ಕಂಪೆನಿ ನ್ಯೂಸ್‌ಸ್ಪೇಸ್‌ ಇಂಡಿಯಾ (ಎನ್‌ಎಸ್‌ಐಎಲ್‌) ಈ ಆಹ್ವಾನ ಮಾಡಿದೆ.

Advertisement

ಈ ವರೆಗೆ 7 ರಾಕೆಟ್‌ ಉಡಾವಣೆ ಗಳನ್ನು ಎಲ್‌ವಿಎಂ3 ಪೂರ್ತಿಗೊಳಿಸಿದೆ. 2020ರಲ್ಲಿ ಘೋಷಿಸಲಾದ ಬಾಹ್ಯಾ ಕಾಶ ವಲಯ ಸುಧಾರಣೆಯ ಭಾಗ ವಾಗಿ ಖಾಸಗಿ ವಲಯಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಎಲ್‌ವಿಎಂ3 ಉತ್ಪಾದನೆಗಾಗಿ ತಮ್ಮ ತಜ್ಞತೆಯನ್ನು ಭಾರತದ ಖಾಸಗಿ ಉದ್ಯಮಕ್ಕೂ ವಿಸ್ತರಿಸಲು ಜಂಟಿಸಹ ಭಾಗಿತ್ವ ಹೊಂದಲಾಗುವುದು ಎಂದು ಎನ್‌ಎಸ್‌ಐಎಲ್‌ ಹೇಳಿದೆ. ಜಾಗತಿಕ ಬೇಡಿಕೆಗೆ ಅನುಗುಣವಾಗಿ ಎಲ್‌ವಿಎಂ3 ರಾಕೆಟ್‌ ಉತ್ಪಾದನೆಯನ್ನು ವಾರ್ಷಿಕ 4ರಿಂದ 6ವರೆಗೆ ಹೆಚ್ಚಿಸುವ ಅಗತ್ಯವಿದೆ ಎಂದು ಎನ್‌ಎಸ್‌ಐಎಲ್‌ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next