Advertisement

ತಾಂಡಾಗಳ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆಗೆ ಪ್ರಧಾನಿ ಮೋದಿಗೆ ಆಹ್ವಾನ

07:49 PM Jan 02, 2023 | Team Udayavani |

ಕಲಬುರಗಿ: ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿದ ಹಕ್ಕು ಪತ್ರಗಳನ್ನು ವಿತರಿಸುವ ಬೃಹತ್ ಸಮಾರಂಭ ಕಲಬುರಗಿ ಯಲ್ಲಿ ಆಯೋಜಿಸಲು ಮುಂದಾಗಿದ್ದು, ಹಕ್ಕು ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಇಲ್ಲವೇ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಂದ ವಿತರಿಸಲು ಉದ್ದೇಶಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ , ಕಲಬುರಗಿ ಜಿಲ್ಲೆಯಲ್ಲೇ ಅತ್ಯಧಿಕ 214 ತಾಂಡಾಗಳ 27 ಸಾವಿರ ಕುಟುಂಬಗಳಿಗೆ, ಯಾದಗಿರಿ ಜಿಲ್ಲೆಯ 7000, ಬೀದರ್ ಜಿಲ್ಲೆಯ ಐದು ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ವಿವರಣೆ‌ ನೀಡಿದರು.

ಎರಡು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ ಕೇಂದ್ರದ ಗೃಹ ಸಚಿವ ಅಮಿತ ಶಾ ಅವರೊಂದಿಗೆ ಈ ಸಂಬಂಧ ಚರ್ಚಿಸಲಾಗಿದೆ. ಪ್ರಸಕ್ತ ಮಾಸಾಂತ್ಯದೊಳಗೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.‌

ಕಲಬುರಗಿಯಲ್ಲಿ ಬರುವ ಫೆಬ್ರವರಿ ತಿಂಗಳಲ್ಲಿ ಕಲಬುರಗಿ ಯಲ್ಲಿ ಸಚಿವ ಸಂಪುಟ ಸಭೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಸಚಿವ ನಿರಾಣಿ, ತೊಗರಿಗೆ ವಿಶೇಷ ಪ್ಯಾಕೇಜ್ ಇಲ್ಲವೇ ಪರಿಹಾರ ನೀಡುವ ನಿಟ್ಟಿನಲ್ಲಿ ಬುಧವಾರ ಜ.‌3ರಂದು ಚಚಿಸಲಾಗುವುದು ಎಂದರು.

ಪ್ರತ್ಯೇಕ ಮೀಸಲಾತಿ ಸರಳವಲ್ಲ
ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ವೀರಶೈವ- ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳನ್ನು ಹೊಸದಾಗಿ ಸೃಷ್ಟಿಸಲಾದ 2ಡಿ ಪ್ರವರ್ಗದಲ್ಲಿ ಸೇರಿಸಲಾಗಿದೆ. ಹೀಗಾಗಿ ಒಂದೇ ತಟ್ಟೆ ಇರುವುದರಿಂದ ಎಲ್ಲರೂ ಅದರಲ್ಲೇ ಹಂಚಿಕೊಂಡು ತಿನ್ನಬೇಕು ಎಂದು ನಿರ್ದಿಷ್ಟವಾಗಿ ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡುವುದಕ್ಕೆ ಸಾಧ್ಯವಿಲ್ಲ‌ ಎಂದು ಪರೋಕ್ಷವಾಗಿ ಹೇಳಿದರು.

Advertisement

‘ಪಂಚಮಸಾಲಿ ಸಮುದಾಯದವರು ದಶಕಗಳಿಂದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಒಕ್ಕಲಿಗ ಸಮುದಾಯದವರೂ ಇದೇ ಬಗೆಯ ಬೇಡಿಕೆ ಇಟ್ಟಿದ್ದರು. ಅದೇ ರೀತಿ ಇತರರೂ ತಮ್ಮ ಸಮುದಾಯದವರು ಪ್ರತ್ಯೇಕ ಪ್ರವರ್ಗದ ಬೇಟಿಕೆಯಿಟ್ಟಿದ್ದರು.‌ ಆದರೆ 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗ ಸಮುದಾಯವನ್ನು 2ಸಿ ಪ್ರವರ್ಗದಲ್ಲಿ ಹಾಗೂ 3ಬಿ ಪ್ರವರ್ಗದಲ್ಲಿದ್ದ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು 2ಡಿಯಲ್ಲಿ ಸೇರಿಸಲಾಗಿದೆ. ಪ್ರಮುಖವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ (ಇಡಬ್ಲುಎಸ್) ಮೀಸಲಿರಿಸಿದ ಶೇ 10ರ ಮೀಸಲಾತಿಯಲ್ಲಿ ಶೇ 5ರಷ್ಟು ಲಿಂಗಾಯತರು, ಒಕ್ಕಲಿಗೆ ಸಮುದಾಯಕ್ಕೆ ಸಿಗಲಿದೆ. ಏಕೆಂದರೆ ಇಡಬ್ಲುಎಸ್‌ನಡಿ ಮೀಸಲಾತಿ ಪಡೆಯುವ ಸಮುದಾಯಗಳಿಗೆ ಶೇ 4ರಿಂದ 5ರಷ್ಟು ಮಾತ್ರ ಮೀಸಲಾತಿ ಸಾಕಾಗುತ್ತದೆ. ಹೀಗಾಗಿ, ಇನ್ನುಳಿದ ಶೇ 5ರಷ್ಟನ್ನು ಎರಡು ಪ್ರಮುಖ ಸಮುದಾಯಗಳಿಗೆ ಹಂಚಿಕೆ ಮಾಡಲಾಗುತ್ತದೆ’ ಪ್ರ ವರ್ಗಕ್ಕೆ ಬೇಡುವುದು ಮೀಸಲಾತಿ ಸಂಬಂಧ.‌ ಅದನ್ನು ಈಗ ಸಾಕಾರಗೊಳಿಸಲಾಗುತ್ತದೆ ಎಂದು ಸಚಿವರು ವಿವರಣೆ ನೀಡಿದರು.‌

‘ಯಾವ ಸಮುದಾಯಕ್ಕೆ ಎಷ್ಟು ಪ್ರಮಾಣದ ಮೀಸಲಾತಿ ನೀಡಬೇಕು ಎಂಬುದನ್ನು ಎಲ್ಲ ಅಯಾಮಗಳಿಂದ ಅಧ್ಯಯಿಸಿ ಪ್ರಮುಖವಾಗಿ 2011ರ ಜನಗಣತಿ ಆಧರಿಸಿ ಮಾರ್ಚ್ ಅಂತ್ಯದ ಒಳಗೆ ಅಧಿಸೂಚನೆ ಪ್ರಕಟಿಸಲಾಗುತ್ತಿದೆ ಎಂದು ಸಚಿವ ನಿರಾಣಿ ಸ್ಪಷ್ಟಪಡಿಸಿದರು.

‘ರಾಜ್ಯ ಸರ್ಕಾರ ಮೂಗಿಗೆ ತುಪ್ಪ ಸವರುವ ಬದಲು ತಲೆಗೆ ತುಪ್ಪ ಹಚ್ಚಿದೆ’ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ನಿರಾಣಿ, ‘ಹಿಂದೆ ಅಧಿಕಾರದಲ್ಲಿ ಅವರೇ ಇದ್ದರು. ಆದರೂ, ಮೀಸಲಾತಿ ಏಕೆ ನೀಡಲಿಲ್ಲ? ನಮ್ಮ ಸರ್ಕಾರ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ. ತಳವಾರ, ಪರಿವಾರ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಿದೆ. ಲಿಂಗಾಯತರು, ಒಕ್ಕಲಿಗರಿಗೂ ಮೀಸಲಾತಿಯನ್ನು ಅವರ ಬೇಡಿಕೆಗೆ ತಕ್ಕಂತೆ ನೀಡಲಾಗಿದೆ. ವಾಸ್ತವವಾಗಿ ಕಾಂಗ್ರೆಸ್‌ನವರು ತಲೆಗೆ ತುಪ್ಪ ಹಚ್ಚಿದ್ದರು. ನಾವು ಮೀಸಲಾತಿ ನೀಡುವ ಮೂಲಕ ಊಟದೊಂದಿಗೇ ತುಪ್ಪ ಕೊಟ್ಟಿದ್ದೇವೆ’ ಎಂದರು.‌

ಕಲಬುರಗಿಯಲ್ಲಿ ಮೆಗಾ ಟೆಕ್ಸಟೈಲ್ ಪಾಕ್೯ ಸ್ಥಾಪನೆಯಾಗಲಿದೆ. ಪಾರ್ಕ ಗಾಗಿ ಬೇಕಾಗುವ ಅಗತ್ಯ ಸಾವಿರ ಎಕರೆ ಭೂಮಿಯನ್ನು ಕ್ರೈಡಲ್ ದಿಂದ ಸರ್ಕಾರಕ್ಕೆ ಹಸ್ತಾಂತರ ವಾಗುತ್ತಿದೆ. ಭೂಮಿ ಹಸ್ತಾಂತರ ನಂತರ ಕೇಂದ್ರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಸಚಿವ ನಿರಾಣಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next