Advertisement

ಐಟಿಐ ಕಾಲೇಜು ದತ್ತು ಪಡೆಯಲು ಆಹ್ವಾನ

06:20 AM Jun 22, 2018 | |

ಬೆಂಗಳೂರು: ಗುಣಮಟ್ಟದ ಕೌಶಲ್ಯಾಭಿವೃದ್ಧಿ ಜತೆಗೆ ನಿರುದ್ಯೋಗ ನಿವಾರಣೆಗಾಗಿ ಐಟಿಐ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳನ್ನು ದತ್ತು ಪಡೆಯುವಂತೆ ಉದ್ಯಮಿಗಳಿಗೆ ಕೌಶಲ್ಯಾಭಿವೃದ್ಧಿ ಸಚಿವ ಆರ್‌.ವಿ. ದೇಶಪಾಂಡೆ ಆಹ್ವಾನ ನೀಡಿದ್ದಾರೆ.

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್ಕೆಸಿಸಿಐ) ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಿಎಸ್‌ಆರ್‌ (ಕಾರ್ಪೋ ರೇಟ್‌ ಸಾಮಾಜಿಕ ಹೊಣೆಗಾರಿಕೆ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ,
ಹಾಗೊಂದು ವೇಳೆ ಈ ನಿಟ್ಟಿನಲ್ಲಿ ಕೈಗಾರಿಕೋದ್ಯಮಿಗಳು ಮುಂದೆ ಬಂದರೆ, ಸರ್ಕಾರ ಕೂಡ ಇದಕ್ಕೆ ಮುಕ್ತಮನಸ್ಸು ಹೊಂದಿದೆ ಎಂದರು.

ಎಫ್ಕೆಸಿಸಿಐನಂತಹ ಸಂಸ್ಥೆಗಳು ರಾಜ್ಯದಲ್ಲಿರುವ ಐಟಿಐ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳನ್ನು ದತ್ತು ಪಡೆಯಬೇಕು.
ಇದರಿಂದ ಕೌಶಲ್ಯದ ಗುಣಮಟ್ಟ ಹೆಚ್ಚಲಿದೆ. ಕೈಗಾರಿಕೆಗಳಿಗೆ ಅಗತ್ಯ ಇರುವ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲವೂ ದೊರೆಯುತ್ತದೆ. ಆ ಮೂಲಕ ನಿರುದ್ಯೋಗ ಸಮಸ್ಯೆ ಕೂಡ ತಕ್ಕಮಟ್ಟಿಗೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ಪ್ರಸ್ತುತ ಕೈಗಾರಿಕೆ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ , ಕಾರ್ಮಿಕ ಸೇರಿದಂತೆ ವಿವಿಧ ವಿಭಾಗಗಳಿಂದಕೌಶಲ್ಯ ತರಬೇತಿ ನಡೆಯುತ್ತಿದೆ. ಇದಕ್ಕಾಗಿ ಹಣವೂ ವ್ಯಯ ಆಗುತ್ತಿದೆ.ಆದರೆ, ಫ‌ಲಿತಾಂಶ ತೃಪ್ತಿಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯಮಿಗಳು ದತ್ತು ಪಡೆಯಲು ಮುಂದೆ ಬಂದರೆ, ಸರ್ಕಾರ ಕೂಡ ಇದಕ್ಕೆ ಪೂರಕವಾಗಿ ಸ್ಪಂದಿಸಲಿದೆ. ಆಯಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯ ಬೋಧಿಸಬಹುದು ಎಂದು ಹೇಳೀದರು.

ಶಿಕ್ಷಣ ನೀತಿಯಲ್ಲಿ ಲೋಪ
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ನಾಲ್ಕು ಲಕ್ಷಕ್ಕೂ ಅಧಿಕ ನಿರುದ್ಯೋಗಿ ಪದವೀಧರರು
ನಮ್ಮಲ್ಲಿದ್ದಾರೆ. ಮತ್ತೂಂದೆಡೆ ಪ್ರತಿಯೊಬ್ಬರನ್ನೂ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸುತ್ತಿದ್ದೇವೆ. ಈ ದೃಷ್ಟಿಯಿಂದ
ನಮ್ಮ ಶಿಕ್ಷಣ ನೀತಿಯಲ್ಲಿ ಲೋಪ ಇದ್ದಂತೆ ಕಾಣಿಸುತ್ತಿದೆ. ಇದನ್ನು ಸರಿಪಡಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

Advertisement

ನಮ್ಮಲ್ಲಿ ಶಿಕ್ಷಣ ಸಂಸ್ಥೆಗಳು ಸಾಕಷ್ಟಿವೆ. ಆದರೆ, ಗುಣಮಟ್ಟದ ಶಿಕ್ಷಣದ ಕೊರತೆ ಇದೆ. ಶಿಕ್ಷಣ ಮತ್ತು ಕೈಗಾರಿಕೋದ್ಯಮದ ನಡುವಿನ ಕಂದಕ ನಿವಾರಣೆ ಮಾಡಬೇಕು. ಅಂದಾಗ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗಬಲ್ಲದು ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next