ಆಟೊಮೊಬೈಲ್ ಸಂಸ್ಥೆ ಟೊಯೋಟಾ ಕಿರ್ಲೋಸ್ಕರ್ ಎಸ್ಸೆಸ್ಸೆಲ್ಸಿ ಪಾಸಾದವರಿಗಾಗಿ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್(ಟಿಟಿಟಿಐ)ನಲ್ಲಿ ತರಬೇತಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಿದೆ. ಮೂರು ವರ್ಷಗಳ ತರಬೇತಿ ಕಾರ್ಯಕ್ರಮ ಇದಾಗಿರಲಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾಹನ ಉತ್ಪಾದನೆ ಮತ್ತು ಘಟಕಗಳ ಆಡಳಿತದಲ್ಲಿ ಕೌಶಲ್ಯಪೂರ್ಣ ತಂತ್ರಜ್ಞರಾಗುವ ಅವಕಾಶವನ್ನು ಒದಗಿಸುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ 30,000 ಕೌಶಲ್ಯಪೂರ್ಣ ತಂತ್ರಜ್ಞರನ್ನು ಸೃಷ್ಟಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಟಿಟಿಟಿಐನಲ್ಲಿ ನೀಡಲಾಗುವ ತರಬೇತಿ ಉತ್ಕಷ್ಟ ಮಟ್ಟದಲ್ಲಿದ್ದು ಜಾಗತಿಕವಾಗಿ ಮನ್ನಣೆ ಪಡೆದ ತಂತ್ರಜ್ಞಾನವನ್ನೇ ಅಭ್ಯರ್ಥಿಗಳಿಗೆ ಕಲಿಸಲಾಗುತ್ತದೆ.
ಟಿಟಿಟಿಐನ 13ನೇ ಬ್ಯಾಚ್‌ಗೆ ಪ್ರವೇಶ ಈಗ ಮುಕ್ತವಾಗಿದ್ದು ಕೇವಲ ಬಾಲಕರು ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. 15ರಿಂದ 17 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿ ಶೇ. 50ರಷ್ಟು ಸರಾಸರಿ ಮತ್ತು ಗಣಿತ ಮತ್ತು ವಿಜ್ಞಾನದಲ್ಲಿ ಶೇ. 50ರಷ್ಟು ಅಂಕ ಪಡೆದಿರಬೇಕು.
ಪ್ರಸಕ್ತ ವರ್ಷದ ಪ್ರವೇಶಕ್ಕಾಗಿ ಅರ್ಜಿಯ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಪ್ರವೇಶ ಪರೀಕ್ಷೆ ಸ್ಥಳಗಳು: ಹುಬ್ಬಳ್ಳಿ, ಶಿವಮೊಗ್ಗ, ಹಾಸನ, ಕುಂದಾಪುರ, ತುಮಕೂರು ಮತ್ತು ಬಿಡದಿ ಪ್ರವೇಶ ಪರೀಕ್ಷೆಯ ದಿನ ತರಬೇಕಾದ ದಾಖಲೆ ಪತ್ರಗಳು:
ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ಕಾರ್ಡ್ ಅಥವಾ ಶಾಲಾ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಲಾದ ತಾತ್ಕಾಲಿಕ ಮಾರ್ಕ್ಸ್ ಕಾರ್ಡ್ (ಒರಿಜಿನಲ್ + 1 ಜೆರಾಕ್ಸ್ ಕಾಪಿ), ಎಸ್‌ಎಸ್‌ಎಲ್‌ಸಿ ಹಾಲ್ ಟಿಕೆಟ್,
4 ಪಾಸ್‌ಪೋರ್ಟ್ ಫೋಟೋಗಳು
ಹೆಚ್ಚಿನ ಮಾಹಿತಿಗೆ: +919606052477