Advertisement

ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ

11:05 PM Jun 18, 2019 | Lakshmi GovindaRaj |

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ 2018ನೇ ಸಾಲಿನ “ಪುಸ್ತಕ ಬಹುಮಾನ’ ಕ್ಕಾಗಿ ಆಸಕ್ತರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. 2018ರ ಜನವರಿ 1ರಿಂದ ಡಿಸೆಂಬರ್‌ 31ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳು ಮಾತ್ರ ಪುಸ್ತಕ ಬಹುಮಾನಕ್ಕೆ ಅರ್ಹವಾಗಿವೆ.

Advertisement

ಕಾವ್ಯ, ಕಾದಂಬರಿ, ಸಣ್ಣಕಥೆ, ನಾಟಕ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ, ಗ್ರಂಥ ಸಂಪಾದನೆ, ಭಾಷಾ ಶಾಸ್ತ್ರ, ವಿಜ್ಞಾನ ಸಾಹಿತ್ಯ, ಸಂಶೋಧನೆ, ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಕುರಿತ ಸಾಹಿತ್ಯ ಕೃತಿಗಳನ್ನು ಕಳುಹಿಸಿಕೊಡಬಹುದಾಗಿದೆ. ಮರು ಮುದ್ರಣವಾದ ಪುಸ್ತಕಗಳು, ಪಿ.ಎಚ್‌.ಡಿ ಪದವಿಗಾಗಿ ಸಿದ್ಧಪಡಿಸಿರುವ ಸಂಶೋಧನಾ ಗ್ರಂಥಗಳು ಹಾಗೂ ಈಗಾಗಲೇ ಅಕಾಡೆಮಿ ಗೌರವ ಪ್ರಶಸ್ತಿಗೆ ಪಾತ್ರವಾಗಿರುವ ಕೃತಿಗಳನ್ನು ಪರಿಗಣಿಸಲಾಗದು.

ಆಸಕ್ತರು ಜುಲೈ 10ರ ಒಳಗಾಗಿ ಪುಸ್ತಕದ ತಲಾ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್‌, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು -02 ಇಲ್ಲಿಗೆ ಕಳುಹಿಸಿ ಕೊಡುವಂತೆ ಅಕಾಡೆಮಿ ರಿಜಿಸ್ಟ್ರಾರ್‌ ಪ್ರಕಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 080-22211730 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next