Advertisement

ಕ್ರೀಡಾಕ್ಷೇತ್ರದಲ್ಲಿ ಹೂಡಿಕೆಗೆ ಉದ್ಯಮಿಗಳು ಸಿದ್ಧರಿದ್ದಾರೆ: ರಾಥೋಡ್‌

06:00 AM Mar 05, 2018 | Team Udayavani |

ಹೊಸದಿಲ್ಲಿ: ಉದ್ಯಮ ವಲಯ ಭಾರತದ ಕ್ರೀಡಾರಂಗದ ಬೆಳವಣಿಗೆಗೆ ಸಹಕಾರ ನೀಡಲು ಸಂಪೂರ್ಣ ತಯಾರಿದೆ. ಆದರೆ ವ್ಯಯಿಸಲಾಗುವ ಹಣ ಸದ್ಬಳಕೆ ಆಗುವುದರ ಬಗ್ಗೆ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಭರವಸೆ ನೀಡಬೇಕಿದೆ ಎಂದು ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಹೇಳಿದ್ದಾರೆ.

Advertisement

ದೇಶಿ ಕ್ರೀಡಾರಂಗದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿ ಸಚಿವ ರಾಥೋಡ್‌, “ಉದ್ಯಮ ರಂಗ ಕ್ರೀಡೆಗೆ ಪ್ರೋತ್ಸಾಹ ನೀಡಲು ತಯಾರಿದೆ. ಆದರೆ ನ್ಯಾಶನಲ್‌ ನ್ಪೋರ್ಟ್ಸ್ ಫೆಡರೇಶನ್‌ (ಎನ್‌ಎಸ್‌ಎಫ್) ಇದನ್ನು ಪಾರದರ್ಶಕವಾಗಿ ಕಾರ್ಯಗತ ಗೊಳಿಸಬೇಕಿದೆ’ ಎಂದಿದ್ದಾರೆ.

“ಹಣ ಹೊಂದಿಸುವುದು ಕಷ್ಟದ ಕೆಲಸವಲ್ಲ. ಬೇರೆ ಬೇರೆ ಕ್ರೀಡಾ ಕ್ಷೇತ್ರಗಳಲ್ಲಿ ಯಾರಿಗೆಲ್ಲ ಅನಿವಾರ್ಯ ಬೀಳುತ್ತದೆಯೋ ಅವರಿಗೆಲ್ಲ ನಾವು ಸಹಾಯ ನೀಡಲು ತಯಾರಿದ್ದೇವೆ. ಆದರೆ ಸಹಾಯ ಪಡೆದುಕೊಂಡವರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದನ್ನು ನಾವು ಬಯಸುತ್ತೇವೆ’ ಎಂದು ರಾಥೋಡ್‌ ತಿಳಿಸಿದ್ದಾರೆ.

ಒಂದು ವೇಳೆ ಕ್ರೀಡಾವಲಯವೊಂದು ಸಹಾಯವನ್ನು ಸಮರ್ಪಕವಾಗಿ ಬಳಸುತ್ತಿಲ್ಲವೆಂದು ಅನ್ನಿಸಿದರೆ ಅನುದಾನಗಳನ್ನು ಕಡಿತಗೊಳಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಾಥೋಡ್‌, “ಹಾಗೇನಿಲ್ಲ. ಸರಕಾರ ಅನುದಾನ ಬಿಡುಗಡೆ ಮಾಡದಿದ್ದರೂ ಉದ್ಯಮಿಗಳ ಮೂಲಕ ಅನುದಾನ ನೀಡಬಹುದು. ಅನುದಾನದ ಉಪಯೋಗ ಪಡೆದುಕೊಂಡವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸ್ವಲ್ಪ ಸಮಯ ಬೇಕಾಗಬಹುದು. ಇದಕ್ಕೆ ಕಾಲಾವಕಾಶವಿದೆ. ರೆಸ್ಲಿಂಗ್‌, ಹಾಕಿ, ಬ್ಯಾಡ್ಮಿಂಟನ್‌ನಂಥ ವಿಭಾಗಗಳು ಬೇರೆ ಬೇರೆ ಲೀಗ್‌ಗಳನ್ನು ಆಯೋಜಿಸುವ ಮೂಲಕ ಹಣ ಸಂಪಾದಿಸುತ್ತಾರೆ. ಅವರಿಗೆಲ್ಲ ನಾವು ಹಣ ಒದಗಿಸುತ್ತೇವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next