Advertisement

Semiconductor sector ಬೆಂಗಳೂರು, ದಿಲ್ಲಿ ಸಂಸ್ಥೆಗಳಿಂದ ಹೂಡಿಕೆ ಶೀಘ್ರ

12:31 AM Dec 31, 2023 | Team Udayavani |

ಅಹ್ಮದಾಬಾದ್‌: ಭಾರತದ ಸೆಮಿಕಂಡಕ್ಟರ್‌ ತಯಾರಿಕೆ ಯೋಜನೆಗೆ ಪೂರಕವಾಗಿ ಗುಜರಾತ್‌ ಸರ ಕಾರ 2022ರಲ್ಲಿ ಜಾರಿಗೆ ತಂದ ಸೆಮಿ ಕಂಡಕ್ಟರ್‌ ನೀತಿ ಬಗ್ಗೆ ಬೆಂಗಳೂರು, ದಿಲ್ಲಿ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳೂ ಕೂಡ ಆಕರ್ಷಿತವಾಗಿದ್ದು, ಗುಜರಾತ್‌ನಲ್ಲಿ ಈ ಸಂಸ್ಥೆಗಳು ಹೂಡಿಕೆ ಮಾಡಲು ಯೋಜಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್‌ ಗುಜರಾತ್‌ ಗ್ಲೋಬಲ್‌ ಶೃಂಗಸಭೆ 2024ಕ್ಕೂ ಮುನ್ನ ಗುಜರಾತ್‌ ಸರ ಕಾರದ ಅಧಿಕಾರಿಗಳು ಸಭೆಯೊಂದನ್ನು ಆಯೋಜಿಸಿದ್ದರು. ಆ ಸಭೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ಎಂದು ರಾಜ್ಯ ಸರ ಕಾರ ತಿಳಿಸಿದೆ.

ಮಾಹಿತಿಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್‌ ಪೂರೈಕೆ ಸರಪಳಿಯನ್ನು ಸಮ ರ್ಪಕವಾಗಿ ನಿರ್ವಯಹಿಸುವಲ್ಲಿ ಗುಜರಾತ್‌ನ ಸೆಮಿಕಂಡಕ್ಟರ್‌ ನೀತಿಯು ಪರಿಣಾಮಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೈಕ್ರಾನ್‌ ಟಕ್ನಾಲಜಿಸ್‌ ಸಂಸ್ಥೆ 2.75 ಶತಕೋಟಿ ಡಾಲರ್‌ ಮೌಲ್ಯದ ಘಟಕವನ್ನು ಅಹ್ಮದಾಬಾದ್‌ನಲ್ಲಿ ತೆರೆಯುವ ನಿರ್ಧಾರ ಕೈಗೊಂಡಿದೆ. ಇದೇ ಕಾರಣದಿಂದ ಬೆಂಗಳೂರು, ದಿಲ್ಲಿ, ಜಪಾನ್‌, ದಕ್ಷಿಣ ಕೊರಿಯಾದ ಕೆಲವು ಸೆಮಿಕಂಡಕ್ಟರ್‌ ಸಂಸ್ಥೆಗಳೂ ಕೂಡ ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಯೋಜಿಸಿವೆ ಎನ್ನಲಾಗಿದೆ.

ಇನ್ನು ಈ ಕುರಿತಂತೆ ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌ ಕೂಡ ಪ್ರತಿಕ್ರಿಯಿ, ಜಾಗತಿಕ ಮಟ್ಟದ ಹಲವು ಕಂಪೆನಿಗಳಿಗೆ ರಾಜ್ಯ ಪ್ರಮುಖ ಆಯ್ಕೆಯಾಗಿದ್ದು, ಮುಂಬರಲಿರುವ ಶೃಂಗಸಭೆ ದೇಶದಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next