Advertisement
ಹೊಸದಿಲ್ಲಿಯಲ್ಲಿ 3 ದಿನಗಳ ವರ್ಲ್ಡ್ ಫುಡ್ ಇಂಡಿಯಾ 2017 ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮ ಸರಕಾರ ರೂಪಿಸಿರುವ ಹೊಸ ನೀತಿಗಳು ಕಲ್ಪಿಸಿರುವ ಅಗಾಧ ಅವಕಾಶಗಳ ಬಗ್ಗೆ ವಿವರಿಸಿದರು. ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಹಿಂದಿದ್ದ ಅನಗತ್ಯ ಕಾನೂನು ಗೊಂದಲಗಳಿಗೆ ಇತಿಶ್ರೀ ಹಾಡಲಾಗಿದೆ. ಹೀಗಾಗಿ, ಹೂಡಿಕೆ ಹಿಂದೆಂದಿಗಿಂತಲೂ ಸರಳವಾಗಿದೆ ಎಂದರು.
“ಖೀಚಡಿ’ ಖಾದ್ಯಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡುವ ಯಾವುದೇ ಚಿಂತನೆ ಕೇಂದ್ರ ಸರಕಾರಕ್ಕಿಲ್ಲ ಎಂದು ಆಹಾರ ಸಂಸ್ಕರಣಾ ಇಲಾಖೆ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ತೆರೆಬಿದ್ದಿದೆ. ಏತನ್ಮಧ್ಯೆ, ಖೀಚಡಿಯನ್ನು ಪುರಿ ಜಗನ್ನಾಥ ದೇಗುಲಗಳಲ್ಲಿ ಪುರಾತನ ಕಾಲದಿಂದಲೂ ನೈವೇದ್ಯಕ್ಕೆ ಬಳಸಲಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದು, ಇದು ಭಾರತದ ಪುರಾತನ ಆಹಾರವೆಂದು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ, ದಿಲ್ಲಿಯಲ್ಲಿ ಆರಂಭಗೊಂಡ “ವರ್ಲ್ಡ್ ಫುಡ್ ಇಂಡಿಯಾ’ ಸಮ್ಮೇಳನದ ಮೊದಲ ದಿನ ಬಂದ ಅತಿಥಿಗಳಿಗಾಗಿ 800 ಕೆ.ಜಿ. ಖೀಚಡಿ ತಯಾರಿಸಲಾಗಿತ್ತು.