Advertisement

ತನಿಖಾ ವರದಿ ಸರಳವಾಗಿರಲಿ

06:27 AM Jan 13, 2019 | |

ಬೆಂಗಳೂರು: ನ್ಯಾಯಾಲಯಗಳು ಆರೋಪಿಗಳಿಗೆ ಶಿಕ್ಷೆ ವಿಧಿಸಲು ತನಿಖಾಧಿಕಾರಿಗಳ ವರದಿ ಪ್ರಮುಖ ಪಾತ್ರವಹಿಸಲಿದ್ದು ಆ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ವರದಿ ಮಂಡನೆ ಯಾವಾಗಲೂ ಸರಳ ಮತ್ತು ಅಷ್ಟೇ ಪರಿಣಾಮಕಾರಿಯಾಗಿರಬೇಕು ಎಂದು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅಭಿಪ್ರಾಯಪಟ್ಟರು.

Advertisement

 ನಗರದ ನಿಮ್ಹಾನ್ಸ್‌ ಸಭಾಂಗಣದಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ ಹಮ್ಮಿಕೊಂಡಿದ್ದ “ನ್ಯಾಯ ವಿಜ್ಞಾನದಲ್ಲಿ ಉದಯೋನ್ಮುಖ ಬೆಳವಣಿಗೆಗಳ’ ಕುರಿತ ರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ತನಿಖಾಧಿಕಾರಿಗಳ ವರದಿಗಳು ಯಾವುದೇ ರೀತಿಯ ಸಂಶಯಗಳಿಗೆ ಎಡೆ ಮಾಡಿಕೊಡದ ರೀತಿಯಲ್ಲಿ ಸಿದ್ಧವಾಗಿರಬೇಕು ಎಂದು ಹೇಳಿದರು.

ನ್ಯಾಯಾಲದಲ್ಲಿ ಕ್ರಿಮಿನಲ್‌ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ವರದಿ ಮಂಡಿಸುವ ಮುನ್ನ ಅವರಿಗೆ ಆ ವರದಿಯ ಬಗ್ಗೆ ಖಚಿತತೆ ಇರಬೇಕು. ತನಿಖಾ ವರದಿ ಮಂಡನೆ ಮಾಡುವಾಗ ನಾನೇನು ಪ್ರಸ್ತುತ ಪಡಿಸುತ್ತಿದ್ದೇನೆ ಎಂಬುದರ ಅರಿವು ಇರಬೇಕು.

ವರದಿ ಮಂಡನೆ ಯಾವಾಗಲೂ ಚಿಕ್ಕದಾಗಿ, ಚೊಕ್ಕವಾಗಿ, ಸಮಗ್ರ ವಿಷಯವನ್ನು ಒಳಗೊಂಡು ಹೆಚ್ಚು ಪರಿಣಾಮಕಾರಿಯಾಗಿರಬೇಕು. ಹೀಗಿದ್ದರೆ ಶೀಘ್ರವಾಗಿ ತೀಫ‌ುì ನೀಡಲು ಸಾಧ್ಯ ಎಂದು ತಿಳಿಸಿದರು. ಇದೇ ವೇಳೆ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ “ನ್ಯಾಯ ವಿಜ್ಞಾನ’ದ ಬಗ್ಗೆ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಡಾ.ಎಸ್‌.ಕೆ.ಜೈನ್‌ ಮಾತನಾಡಿ, ತಂತ್ರಜ್ಞಾನ ಕ್ಷೇತ್ರ ಇಂದು ಹೆಚ್ಚು ಬೆಳವಣಿಗೆ ಸಾಧಿಸಿದ್ದು, ಅಪರಾಧಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಲು ಇದರ ಸದುಪಯೋಗ ಮಾಡಿಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮೊಬೈಲ್‌, ಟ್ವಿಟರ್‌ ಸೇರಿದಂತೆ ಅನೇಕ ಸಾಮಾಜಿಕ ಜಾಲ ತಾಣಗಳಿಂದಲೂ ಇಂದು ಸಮಾಜ ಘಾತುಕ ಶಕ್ತಿಗಳನ್ನು ಪತ್ತೆಹಚ್ಚಬಹುದಾಗಿದ್ದು, ಗುಣಮಟ್ಟದ ಸಾಕ್ಷÂ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಿ ಎಂದು ಸಲಹೆ ನೀಡಿದರು. ಕೆಲವು ಪ್ರಕರಣಗಳ್ಳಲ್ಲಿ ಫ‌ಲಿತಾಂಶ ಇರುವುದಿಲ್ಲ.ಆದರೆ ಸರ್ಕಾರದ ಹಣ ಸಾಕಷ್ಟು ವೆಚ್ಚವಾಗುತ್ತದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಹೆಚ್ಚು ಗಮನ ಹರಿಸುವಂತೆ ಸೂಚಿಸಿದರು.

ಡಿಜಿ ಐಜಿಪಿ ನೀಲಮಣಿ ಎನ್‌ ರಾಜು ಮಾತನಾಡಿ, ಎರಡು ದಿನಗಳ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಯುವ ವಿಜ್ಞಾನಿಗಳು ಮತ್ತು ತನಿಖಾಧಿಕಾರಿಗಳು ಸೇರಿದಂತೆ 120 ಮಂದಿ ಪಾಲ್ಗೊಂಡು ಅಪರಾಧ ಪತ್ತೆ ಕುರಿತ ಹಲವು ವಿಷಯಗಳ ಕುರಿತು ಬೆಳಕು ಚೆಲ್ಲಿದರು ಎಂದರು.

 ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ ಕಳೆದ ಐವತ್ತು ವರ್ಷಗಳಿಂದಲೂ ಉತ್ತಮ ಸೇವೆ ನೀಡುತ್ತಿದ್ದು, ಭವಿಷ್ಯತ್ತಿನ ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡಲಿ ಎಂದು ಆಶಿಸಿದರು. ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯದ ನಿರ್ದೇಶಕಿ ಇಶಾ ಪಂಥ್‌, ಸಿಐಡಿಯ ಎಡಿಜಿಪಿ ಪ್ರವೀಣ್‌ ಸೂಧ್‌, ಹಿರಿಯ ಪೋಲಿಸ್‌ ಅಧಿಕಾರಿ ಸಲೀಂ, ಎ.ಎಂ.ಪ್ರಸಾದ್‌ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next