Advertisement

Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ

03:44 PM May 05, 2024 | Team Udayavani |

ಟೊರಾಂಟೊ : ಭಾರತ ಗೊತ್ತುಪಡಿಸಿದ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯು ಮೂವರು ಭಾರತೀಯ ಪ್ರಜೆಗಳ ಬಂಧನಕ್ಕೆ ಸೀಮಿತವಾಗಿರದೆ ಮುಂದುವರೆದಿದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭಾನುವಾರ ಹೇಳಿಕೆ ನೀಡಿದ್ದಾರೆ. “ಕೆನಡಾ ಕಾನೂನು-ನಿಯಮ ದೇಶವಾಗಿರುವುದರಿಂದ ಉನ್ನತ ತನಿಖೆ ಮುಖ್ಯವಾಗಿದೆ ಎಂದು ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ರಾಯಲ್ ಒಂಟಾರಿಯೊ ಮ್ಯೂಸಿಯಂನಲ್ಲಿ ನಡೆದ ಸಿಖ್ ಫೌಂಡೇಶನ್ ಆಫ್ ಕೆನಡಾದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ ಬಂಧನಗಳನ್ನು ಅಂಗೀಕರಿಸಿ ತನಿಖೆ ಇನ್ನಷ್ಟು ಮುಂದುವರೆದಿದೆ ಎಂದು ಒತ್ತಿ ಹೇಳಿದರು.

“ನಾನು ಸ್ವಲ್ಪ ವಿಚಿತ್ರವಾಗಿ ಬಹುಶಃ ಪ್ರಾರಂಭಿಸಬೇಕಾಗಿದೆ, ಆದರೆ ಮುಖ್ಯವಾಗಿ, ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಮಾಡಲಾದ ಬಂಧನಗಳನ್ನು ಒಪ್ಪಿಕೊಳ್ಳಲು. ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್(RCMP) ಹೇಳಿದಂತೆ, ಪ್ರತ್ಯೇಕ ಮತ್ತು ವಿಭಿನ್ನವಾದಂತೆ ತನಿಖೆಯು ನಡೆಯುತ್ತಿದೆ. ತನಿಖೆ, ನಿನ್ನೆ ಬಂಧಿತ ಮೂವರ ಭಾಗಿತ್ವಕ್ಕೆ ಸೀಮಿತವಾಗಿಲ್ಲ, ”ಎಂದು ಹೇಳಿದ್ದಾರೆ.

ಮಾಹಿತಿ ಪಡೆಯಲು ಭಾರತ ಕಾಯುತ್ತಿದೆ

ಉಗ್ರ ನಿಜ್ಜರ್ ನನ್ನು ಹತ್ಯೆಗೈದ ಆರೋಪದಲ್ಲಿ ಬಂಧಿಸಿರುವ ಮತ್ತು ಆರೋಪಿಸಿದ ಮೂವರು ಭಾರತೀಯರ ಮಾಹಿತಿಯನ್ನು ಕೆನಡಾದ ಪೊಲೀಸರು ಹಂಚಿಕೊಳ್ಳಲು ಭಾರತ ಕಾಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ಹೇಳಿದ್ದಾರೆ.

Advertisement

ಹತ್ಯೆಗೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಶಂಕಿತರು ಭಾರತ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಕೆನಡಾ ಪೊಲೀಸರು ಹೇಳಿದ್ದರು.

‘ಬಂಧನದ ಸುದ್ದಿ ಕೇಳಿದ್ದೇನೆ, ಶಂಕಿತರು ಸ್ಪಷ್ಟವಾಗಿ ಕೆಲವು ರೀತಿಯ ಗ್ಯಾಂಗ್ ಹಿನ್ನೆಲೆಯ ಭಾರತೀಯರೇ ಎನ್ನುವುದನ್ನು ಅಲ್ಲಿಯ ಪೊಲೀಸರು ನಮಗೆ ತಿಳಿಸುವುದನ್ನು ನಾವು ಕಾಯಬೇಕಾಗಿದೆ” ಎಂದು ಜೈಶಂಕರ್ ಹೇಳಿದ್ದಾರೆ.

ಹರ್ದೀಪ್ ಸಿಂಗ್ ನಿಜ್ಜಾರ್ ನನ್ನು 2023ರ ಜೂನ್ 18 ರಂದು ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು ಅಲ್ಲದೆ ಈ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪವನ್ನು ಮಾಡಿದ್ದರು.

ಹತ್ಯೆ ಪ್ರಕರಣದಲ್ಲಿ ಬಂಧಿತ ಮೂವರು ಭಾರತೀಯರು ಕರಣ್ ಬ್ರಾರ್ (22), ಕಮಲ್‌ಪ್ರೀತ್ ಸಿಂಗ್ (22) ಹಾಗೂ ಕರಣ್‌ಪ್ರೀತ್ ಸಿಂಗ್ (28) ಎಂದು ಹೇಳಲಾಗಿದ್ದು ಈ ಮೂವರು ಕೆನಡಾದ ಆಲ್ಬರ್ಟಾದಲ್ಲಿ ಐದು ವರ್ಷಗಳಿಂದ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next