Advertisement

ವಿದ್ಯಾರ್ಥಿನಿ ಪ್ರಿಯಂಕಾ ಸಾವಿನ ತನಿಖೆ ಆರಂಭ

09:03 AM Jul 19, 2019 | Suhan S |

ಜಮಖಂಡಿ: ನಗರದ ರಾಯಲ್ ಪ್ಯಾಲೇಸ್‌ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಂಕಾ ಮೇತ್ರಿ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಸಾವನ್ನು ಆತ್ಮಹತ್ಯೆ ಎಂದು ದಾಖಲಿಸಿಕೊಂಡಿದ್ದ ಜಮಖಂಡಿ ಗ್ರಾಮೀಣ ಪೊಲೀಸರು ಪಾಲಕರ ಒತ್ತಾಯದಂತ್ತೆ ಕೊಲೆ ಪ್ರಕರಣವೆಂದು ಮರು ದಾಖಲಿಸಿ ತನಿಖೆಗೆ ಕೈಗೆತ್ತಿಕೊಂಡಿದ್ದಾರೆ.

Advertisement

ರಾಯಲ್ ಪ್ಯಾಲೇಸ್‌ ಕಾಲೇಜಿಗೆ ಗುರುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್‌ ಭೇಟಿ ನೀಡಿ, ಕಾಲೇಜಿನ ಆಡಳಿತ ಮಂಡಳಿಯ 10 ಜನ ಅಧ್ಯಾಪಕರನ್ನು, ಮೃತಳ ಸಹಪಾಠಿಗಳು, ಅಲ್ಲದೇ ಹಾಸ್ಟೇಲ್ ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್‌ಗಳನ್ನು ಪ್ರತ್ಯೇಕವಾಗಿ ಕರೆಯಿಸಿ ವಿಚಾರಣೆ ನಡೆಸಿದರು.

ಕಾಲೇಜಿನ ಅಧ್ಯಾಪಕರನ್ನು ಸಿಪಿಐ ಕಚೇರಿಗೆ ಕರೆಯಿಸಿ ಕುಲಂಕುಶವಾಗಿ ವಿಚಾರಣೆ ನಡೆಸಿದ ನಂತರ ಮಾತನಾಡಿದ ಅವರು, ಪ್ರಿಯಾಂಕಾ ವಾಸಿಸುವ ಕೊಠಡಿ, ಮಹಡಿ ಮೇಲೆ ಹೋಗಲು ಕಾರಣ, ಮಹಡಿ ಮೇಲಿಂದ ಬಿದ್ದಸ್ಥಳ ಕೂಲಂಕುಶವಾಗಿ ಪರಿಶೀಲಿಸಲಾಗಿದೆ. ಪಾಲಕರು ನೀಡಿದ್ದ ದೂರಿನಂತೆ ಆತ್ಮಹತ್ಯೆ ಕೇಸ್‌ ಬದಲಿಸಿ, ಈಗ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾಲೇಜಿನ ಪ್ರತಿ ಸಿಸಿಟಿವಿ ಕ್ಯಾಮೆರಾ ಪರೀಕ್ಷಿಸಿ, ವರದಿ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ನಂತರ ತನಿಖೆ ತೀವ್ರಗೊಳಿಸಲಾಗುವುದು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು ಎಂದರು.

ಡಿವೈಎಸ್ಪಿ ಆರ್‌.ಕೆ.ಪಾಟೀಲ, ಸಿಪಿಐ ಮಹಾಂತೇಶ ಹೊಸಪೇಟ, ಗ್ರಾಮೀಣ ಠಾಣೆ ಪಿಎಸ್‌ಐ ಎಚ್.ವೈ.ಬಾಲದಂಡಿ, ಕಾಲೇಜಿನ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ನ್ಯಾಮಗೌಡ, ಪ್ರಾಚಾರ್ಯೆ ರೀತಾ ಜೈನರ್‌, ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ಶಾಮರಾವ್‌ ಘಾಟಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next