Advertisement

ಬಾಂಬ್ ಸ್ಫೋಟ ಪ್ರಕರಣ ತನಿಖೆಗೆ ಸೂಚನೆ: ಶೆಟ್ಟರ್

09:56 AM Oct 22, 2019 | Sriram |

ಕೊಪ್ಪಳ: ಹುಬ್ಬಳ್ಳಿ – ಧಾರವಾಡದಲ್ಲಿ ಬಾಂಬ್ ಸ್ಪೋಟ ಪ್ರಕರಣ ಕುರಿತು ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹುಬ್ಬಳ್ಳಿ-ಧಾರವಾಡ ಬಾಂಬ್‌ ಸ್ಪೋಟ ಪ್ರಕರಣ ಗಮನಕ್ಕೆ ಬಂದಿದೆ.ಈ ಬಗ್ಗೆ ಪೊಲೀಸರು ತನಿಖೆ ಮಾಡಲಿದ್ದಾರೆ. ಪೊಲೀಸ್ ತನಿಖೆಯಲ್ಲಿ ಈ ಬಗ್ಗೆ ಗೊತ್ತಾಗಲಿದೆ. ಈ ಹಿಂದೆ ಜಿ.ಪರಮೇಶ್ವರ ಗೃಹ ಸಚಿವರಾಗಿದ್ದಾಗ ಬಾಂಗ್ಲಾ ವಲಸಿಗರ ಬಗ್ಗೆ ಮಾಹಿತಿ ನೀಡಿದ್ದೆವು.ವಿಧಾನಸಭೆಯಲ್ಲಿ ಈ ಬಗ್ಗೆ ಮಾತಾಡಿದ್ದೇವೆ. ಆಗಿನ ಗೃಹಮಂತ್ರಿ ಪರಮೇಶ್ವರ ಕ್ರಮ ಕೈಗೊಳ್ಳಲಿಲ್ಲ ಇದರ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ ಎಂದರು.

ಸಾವರ್ಕರ್ ಗೆ ಭಾರತ ರತ್ನ ಕೊಡುವ ವಿಚಾರ ಚರ್ಚೆಯಲ್ಲಿದೆ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಸೇನಾನಿ ವೀರ ಸಾವರ್ಕರ್. ಇವರ ಬಗ್ಗೆ ಹಗುರವಾಗಿ ಮಾತಾಡುವ ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ ?ಎಂದು ಕೈ ನಾಯಕರ ವಿರುದ್ದ ಗುಡುಗಿದರು.

ವೀರ‌ ಸಾವರ್ಕರ್ ರಿಗೆ ಭಾರತ‌ ರತ್ನ ಯಾಕೆ ಕೊಡಬಾರದು ಎಂದು ಪ್ರಶ್ನಿಸಿ ಶೆಟ್ಟರ್.ಪ್ರಚಾರ ಸಿಗುತ್ತೆ ಅಂತಾ ಸಿದ್ದರಾಮಯ್ಯ ಏನೇನೋ ಬೇಕಾಬಿಟ್ಟಿ ಮಾತಾಡಬಾರದು.

ನಾಳೆ ಇವರೆಲ್ಲ ಟಿಪ್ಪು ಸುಲ್ತಾನ್ ಗೆ ಭಾರತ ರತ್ನ ಕೊಡಲಿ ಎನ್ನುವವರು ಇವರು. ಯುಪಿಎ 10 ವರ್ಷ ಅಧಿಕಾರದಲ್ಲಿದ್ದಾಗ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಏಕೆ ಕೊಡಲಿಲ್ಲ ? ಆಗ ಕಾಂಗ್ರೆಸ್ ನಾಯಕರು ಮಲಗಿಕೊಂಡಿದ್ದಿರಾ ಎಂದರು.

Advertisement

ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿಯೇ ವೀರ್ ಸಾವರ್ಕರ್ ಬಗ್ಗೆ ಏನು ಮಾತಾಡಿದ್ದಾರೆ ಅಂತಾ ತಿಳಿದುಕೊಳ್ಳಲಿ.ಸಿದ್ದಗಂಗಾಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಈ ಬಗ್ಗೆ ನಾನೂ ಒತ್ತಾಯ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next