Advertisement

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ವಿಚಾರಣೆ ಚುರುಕು

09:10 PM May 27, 2022 | Team Udayavani |

ಬೆಂಗಳೂರು: ನಾಲ್ಕುವರೆ ವರ್ಷಗಳ ಹಿಂದೆ ಗುಂಡೇಟಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಆರೋಪಿಗಳ ವಿಚಾರಣೆಯನ್ನು ಜುಲೈ 4ರಿಂದ 8ರವರೆಗೆ ನಿರಂತರವಾಗಿ ನಡೆಸಲಾಗುತ್ತದೆ ಎಂದು ಸೆಷನ್ಸ್‌ ಕೋರ್ಟ್‌ ಶುಕ್ರವಾರ ಆದೇಶ ನೀಡಿದೆ.

Advertisement

ಪ್ರಕರಣದ ಮೊದಲ ಸಾಕ್ಷಿಯಾಗಿರುವ ಗೌರಿಲಂಕೇಶ್‌ ಸಹೋದರಿ ಕವಿತಾ ಲಂಕೇಶ್‌ಗೆ ಕೋರ್ಟ್‌ಗೆ ಹಾಜರಾಗಲು ಸಮನ್ಸ್‌ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಕೋರ್ಟ್‌ಗೆ ಹಾಜರಾದ ಕವಿತಾ ಲಂಕೇಶ್‌ ಸಾಕ್ಷ್ಯ ದಾಖಲಿಸಿದರು. ಬಳಿಕ ಕೋರ್ಟ್‌ ಈ ಆದೇಶ ಹೊರಡಿಸಿದೆ.

ಇದೇ ವೇಳೆ ಪ್ರಕರಣದ 18 ಆರೋಪಿಗಳ ಪೈಕಿ ಕರ್ನಾಟಕದ ಜೈಲಿನಲ್ಲಿದ್ದ 11 ಮಂದಿಯನ್ನು ಕೂಡ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಬಾಕಿ ಏಳು ಮಂದಿ ಆರೋಪಿಗಳು ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್‌ ಮತ್ತು ಚಿಂತಕ ಗೋವಿಂದ ಪಾನ್ಸರೆ ಅವರ ಕೊಲೆಯಲ್ಲೂ ಈ ಏಳು ಮಂದಿ ಆರೋಪಿಗಳಾಗಿದ್ದು, ಅವರನ್ನು ಮುಂಬೈನ ಅರ್ಥರ್‌ ಜೆಲ್ಲಿನಲ್ಲಿ ಇರಿಸಲಾಗಿದೆ.ಹೀಗಾಗಿ ವಿಚಾರಣೆಗೆ ಗೈರಾಗಿದ್ದರು.

ಹೀಗಾಗಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದ್ದು, ಅಂದಿನಿಂದ ನಾಲ್ಕು ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಯಲಿದೆ. ಈ ವಿಚಾರವನ್ನು ಮಹಾರಾಷ್ಟ್ರದ ಅರ್ಥರ್‌ ಜೈಲಿನಲ್ಲಿರುವ ಆರೋಪಿಗಳಿಗೂ, ಅಲ್ಲಿನ ಜೈಲು ಅಧಿಕಾರಿಗಳಿಗೂ ವಿಚಾರ ತಿಳಿಸಬೇಕು. ಆರೋಪಿಗಳೊಂದಿಗೆ ಮಾತನಾಡಲು ವಕೀಲರಿಗೆ ಅವಕಾಶ ಕಲ್ಪಿಸಬೇಕು ಎಂದು ಕೋರ್ಟ್‌ ನಿರ್ದೇಶ ನೀಡಿದೆ. ಆದರೆ, ಮುಂದಿನ ವಿಚಾರಣೆ ವೇಳೆ ಯಾವುದೇ ಬದಲಾವಣೆ ಇರುವುದಿಲ್ಲ. ವಿಚಾರಣೆಯೂ ಮುಂದೂಡುವದಿಲ್ಲ ಎಂದು ತನಿಖಾಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ಇದರೊಂದಿಗೆ ಯಾವೆಲ್ಲಾ ಸಾಕ್ಷಿಗಳನ್ನು ವಿಚಾರಣೆಗೆ ಕರೆಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಜೂ.6ರಂದು ಎಸ್‌ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಬೇಕು. ಅದನ್ನು ಆಧರಿಸಿ ಯಾರನ್ನು ಪಾಟೀ ಸವಾಲಿಗೆ ಒಳಪಡಿಸಬೇಕು ಎಂಬುದನ್ನು ಆರೋಪಿಗಳ ವಕೀಲರು ತಿಳಿಸಲಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ಪ್ರಕರಣವೇನು?
2017ರ ಸೆ.5ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದ ಗೌರಿಲಂಕೇಶ್‌ ಅವರನ್ನು ಹಂತಕರು ಗುಂಡು ಹಾರಿಸಿ ಕೊಂದಿದ್ದರು. ಬಳಿಕ ತನಿಖೆಗಾಗಿ ಐಪಿಎಸ್‌ ಅಧಿಕಾರಿ ಎಂ.ಎನ್‌.ಅನುಚೇತ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣದ ಮಾಸ್ಟರ್‌ ಮೈಂಡ್‌, ಗುಂಡು ಹಾರಿಸಿದ ಅಮೋಲ್‌ ಕಾಳೆ, ಪರಶುರಾಮ್‌ ವಾಗೊ¾àರೆ ಮತ್ತು ಬೈಕ್‌ ಚಾಲನೆ ಮಾಡುತ್ತಿದ್ದ ಗಣೇಸ್‌ ಮಿಸ್ಕಿನ್‌ಸೇರಿ 18 ಮಂದಿಯನ್ನು ಬಂಧಿಸಿತ್ತು. ಬಳಿಕ ಆರೋಪಿಗಳ ವಿರುದ್ಧ 8500 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು, 527 ಮಂದಿಯನ್ನುಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next