ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಾವಿರಾರು ಎಕ್ರೆ ವಕ್ಫ್ ಭೂಮಿ ಕಬಳಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ತನಿಖೆ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಮಲಾಪುರ ತಾಲೂಕಿನ ಮಹಾಗಾಂವ್ ಗ್ರಾಮದಲ್ಲಿ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಅವರು, ವಕ್ಫ್ ಆಸ್ತಿಗಳನ್ನು ಖುದ್ದು ಕಾಂಗ್ರೆಸ್ ನಾಯಕರೇ ಕಬಳಿಸಿರುವ ಸಾಕಷ್ಟು ಸಾಕ್ಷé ಗಳಿವೆ. ಇವುಗಳ ಬಗ್ಗೆ ಶೀಘ್ರವೇ ತನಿಖೆಗೆ ಆದೇಶಿಸುತ್ತೇನೆ ಎಂದರು.
ಕಾಂಗ್ರೆಸ್ ಅಲ್ಪಸಂಖ್ಯಾಕರನ್ನು ಓಲೈ ಸುವ ಭರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸದಾ ದ್ರೋಹ ಬಗೆಯುತ್ತಲೇ ಬಂದಿದೆ. ಹಿಂದುಳಿದ ವರ್ಗಗಳ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಸಹಕಾರ ನೀಡಿಲ್ಲ. ಔದ್ಯೋ ಗಿಕ ಕ್ಷೇತ್ರಗಳ ಅವಗಣಿಸಿರುವುದು ಸ್ಪಷ್ಟ. ಆದ್ದರಿಂದ ಎಲ್ಲ ವರ್ಗಗಳ ಹಿತ ಬಯಸುವ ನಿಟ್ಟಿನಲ್ಲಿ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದೇವೆ ಎಂದರು.
ಕಲ್ಯಾಣದಲ್ಲಿ
ಅಭಿವೃದ್ಧಿ ಸುನಾಮಿ
ನಮ್ಮ ಸರಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯ ಸುನಾಮಿಯೇ ಉಂಟಾಗಿದೆ. ನಾನು ಕಲ್ಯಾಣ ಕರ್ನಾಟಕದ ಜನರ ಆಶೋತ್ತರ ಗಳಿಗೆ ಸ್ಪಂದಿ ಸುವ ಕೆಲಸ ಮಾಡುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ವೇದಿಕೆ ಒಳಗೆ ಭಾಷಣ ಮಾಡುತ್ತಿದ್ದರೆ ಹೊರ ಗಡೆ ಧಾರಾಕಾರ ಮಳೆ ಸುರಿಯುತ್ತಿತ್ತು. ಆದರೂ ಜನರು ಮಳೆಯನ್ನು ಲೆಕ್ಕಿಸದೆ ಕುರ್ಚಿಯನ್ನು ಆಸರೆಯಾಗಿ ಹಿಡಿದುಕೊಂಡು ಭಾಷಣ ಕೇಳಿದರು.