Advertisement
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 5 ಸಾವಿರ ಕಾಲೇಜುಗಳಲ್ಲಿ ಕೇವಲ 12 ಕಾಲೇಜುಗಳಲ್ಲಿ ಮಾತ್ರ ಈ ರೀತಿಯ ಗಲಾಟೆ ಆಗಿದೆ. ಸರ್ಕಾರ ಎಲ್ಲ ಕಡೆಯೂ ಕ್ರಮ ಕೈಗೊಂಡಿದೆ. ಕೆಲವು ವಿದ್ಯಾರ್ಥಿಗಳು ಕೇವಲ ಹಿಜಾಬ್‌ಗ ಅವಕಾಶ ಕೇಳುತ್ತಿಲ್ಲ. ಐದು ಬಾರಿ ನಮಾಜ್ ಮಾಡಲೂ ಅವಕಾಶ ಕೇಳುತ್ತಿದ್ದಾರೆ. ಸರ್ಕಾರ ಯಾವ ಬೇಡಿಕೆಯನ್ನೂ ಒಪ್ಪಿಕೊಂಡಿಲ್ಲ ಎಂದರು.
ಅದರಿಂದ ಎಲ್ಲ ಕಡೆಗೆ ಹರಡುವಂತಾಯಿತು. ಪಾಕಿಸ್ತಾನದ ಪರ ಎಂದು ಪ್ರಚೋದನಾತ್ಮಕ ವಿಚಾರ ಯಾರೂ ಹೇಳ ಬಾರದು. ಜೊತೆಗೆ ಇಂಥದ್ದು ಸಂವಿಧಾನದಲ್ಲಿ ಇದೆ ಎನ್ನುವುದನ್ನೂ ಕೂಡ ಯಾರೂ ಹೇಳಬಾರದು. ಈ ಘಟನೆಯ ಹಿಂದೆ ಎಸ್.ಡಿ.ಪಿ ಐ ಸಂಘಟನೆ ಇದರ ಹಿಂದೆ ಕೆಲಸ ಮಾಡಿದೆ ಎನ್ನೋದು ಕೆಲ ವರದಿಯಿಂದ ತಿಳಿದಿದೆ. ಆದರೆ, ಇದರ ಬಗ್ಗೆ ತನಿಖೆ ಆಗಬೇಕು. ಇದರ ಹಿಂದೆ ಯಾರು ಯಾರಿದ್ದಾರೆ ಎನ್ನೋ ಬಗ್ಗೆ ತನಿಖೆ ಆಗಲಿ. ತನಿಖೆ ಆಗಬೇಕು ಎನ್ನುವ ಹಂತದಲ್ಲಿದೆ, ಆದೇಶ ಆಗಿಲ್ಲ ಎಂದು ಹೇಳಿದರು.
Related Articles
Advertisement