Advertisement

Fraud Case ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿಸಿ ವಂಚನೆ

10:34 PM Sep 25, 2023 | Team Udayavani |

ಮಂಗಳೂರು: ಆನ್‌ಲೈನ್‌ ಮೂಲಕ ಹಣ ಹೂಡಿಕೆ ಮಾಡಿಸಿ ವಂಚಿಸಿದ ಬಗ್ಗೆ ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರರ ವಾಟ್ಸ್‌ ಆ್ಯಪ್‌ ಸಂಖ್ಯೆಗೆ ಜು. 23ರಂದು ಕಂಪೆನಿಯೊಂದರ ಹೆಸರಿನಲ್ಲಿ ಮೆಸೇಜ್‌ ಬಂದಿತ್ತು. ಪಾರ್ಟ್‌ ಟೈಮ್‌ ಟಾಸ್ಕ್ಗಳನ್ನು ಪ್ರತೀದಿನ ಮಾಡಿದರೆ ಶೇ. 30 ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು.

ಅನಂತರ ಟೆಲಿಗ್ರಾಂ ಆ್ಯಪ್‌ನಲ್ಲಿರುವ ವ್ಯಕ್ತಿಯ ಮೂಲಕ ಕಾಶ್ಮೀರ್‌ 2233 ಎಂಬ ವ್ಯಕ್ತಿಯನ್ನು ಪರಿಚಯಿಸಿ ಮಾರ್ಕೆಟಿಂಗ್‌ ಕಂಪೆನಿಯ ಗುಂಪಿನಲ್ಲಿ ಸೇರಿಸಿ ಆಮಿಷವೊಡ್ಡಲಾಗಿತ್ತು. ಇದನ್ನು ನಂಬಿದ ದೂರುದಾರರಿಂದ ಹಂತ ಹಂತವಾಗಿ ಒಟ್ಟು 10,52,000 ರೂ. ಹಣ ಹೂಡಿಕೆ ಮಾಡಿಸಿ ಯಾವುದೇ ಹಣ ವಾಪಸ್‌ ನೀಡದೆ ವಂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next