Advertisement

2022ರಲ್ಲಿ “ಇನ್ವೆಸ್ಟ್‌  ಕರ್ನಾಟಕ’: ನಿರಾಣಿ

10:48 PM Aug 21, 2021 | Team Udayavani |

ಬಾಗಲಕೋಟೆ: 2010-12ರ ಅವಧಿಯಲ್ಲಿ ಎರಡು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ಜಗತ್ತಿನ ಹಲವು ಪ್ರಮುಖ ಕೈಗಾರಿಕೆಗಳು ರಾಜ್ಯಕ್ಕೆ ಬರುವಂತೆ ಮಾಡಿದ್ದೆವು. ಅದೇ ರೀತಿ 2022ರ ನವೆಂಬರ್‌ನಲ್ಲೂ “ಇನ್ವೆಸ್ಟ್‌ ಕರ್ನಾಟಕ’ ಸಮಾವೇಶ ನಡೆಸಿ ಮತ್ತೆ ಜಾಗತಿಕ ಮಟ್ಟದ ಕೈಗಾರಿಕೆಗಳನ್ನು ಸೆಳೆಯಲು ಚಿಂತಿಸಲಾಗುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೈಗಾರಿಕೆ ಸಚಿವನಾಗಿದ್ದಾಗ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗಿತ್ತು. ಎರಡು ಸಮಾವೇಶಗಳಿಂದ 11.8 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬರುವ ಜತೆಗೆ ಸುಮಾರು 15 ಲಕ್ಷ ಮಂದಿಗೆ ಉದ್ಯೋಗ ದೊರೆತಿತ್ತು. ರಾಜ್ಯದಲ್ಲಿ ಕೃಷಿಗೆ ಯೋಗ್ಯವಲ್ಲದ ಖುಷ್ಕಿ ಭೂಮಿಯನ್ನು ಲ್ಯಾಂಡ್‌ ಬ್ಯಾಂಕ್‌ನಡಿ ಸ್ವಾಧೀನಪಡಿಸಿಕೊಂಡು, ಉದ್ಯಮ ಸ್ಥಾಪನೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ಸರಕಾರದ ಬಳಿಕ ಕೈಗಾರಿಕೆ ಸ್ಥಾಪನೆ ಕುರಿತು ಗಂಭೀರ ಪ್ರಯತ್ನ ನಡೆದಿರಲಿಲ್ಲ ಎಂದರು.

ಬಾಗಲಕೋಟೆ ಜಿಲ್ಲೆಯಲ್ಲೂ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂಬ ಕನಸಿದೆ. ಈ ಹಿಂದೆಯೇ ಇದಕ್ಕಾಗಿ ಭೂಮಿ ಪರಿಶೀಲನೆ ನಡೆಸಲಾಗಿತ್ತು. ವಿವಿಧ ಕಾರಣಗಳಿಂದ ಅದು ನನೆಗುದಿಗೆ ಬಿದ್ದಿದೆ.  ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗಂಭೀರ ಪ್ರಯತ್ನ ನಡೆದಿದೆ.ಮುರುಗೇಶ್‌ ನಿರಾಣಿ

Advertisement

Udayavani is now on Telegram. Click here to join our channel and stay updated with the latest news.

Next