ವಿಟ್ಲ: ಹಿಂದೂ ಧರ್ಮದ ಶ್ರೇಷ್ಠತೆಗೆ ಕುಂಡಡ್ಕ ಸಾಕ್ಷಿಯಾಗಿದೆ. ಹಿಂದೂಗಳಲ್ಲಿ ಈ ರೀತಿಯ ಒಗ್ಗಟ್ಟಿದ್ದರೆ ಧರ್ಮದ ಮೇಲೆ ಅನ್ಯರ ಆಕ್ರಮಣ ಸಾಧ್ಯವಿಲ್ಲ. ಕುಂಡಡ್ಕ ಭಾರತಕ್ಕೆ ಮಾದರಿಯಾಗಿದೆ ಎಂದು ಭಾರ್ಗವ ಬೀಡು ಬಾಕೂìರು ಮಹಾಸಂಸ್ಥಾನದ ಡಾ| ವಿಶ್ವಸಂತೋಷ ಭಾರತಿ ಶ್ರೀಪಾದರು ಹೇಳಿದರು.
ಅವರು ಗುರುವಾರ ಕುಳ-ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ದೇವರು ಮತ್ತು ಆರೋಗ್ಯ ಎಂಬ ವಿಚಾರದ ಬಗ್ಗೆ ಆಶೀರ್ವಚನ ನೀಡಿದರು.
ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾ ನಂದತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮುಗ್ಧ ಮತ್ತು ನಿಸ್ವಾರ್ಥ ಸೇವೆಗೆ ಭಗವಂತನ ಅನುಗ್ರಹವಿರುತ್ತದೆ. ದೇವರಿಗೆ ಶರಣಾದಾಗ ಸಾಕ್ಷಾತ್ಕಾರ ಆಗುತ್ತದೆ ಎಂದರು.
ಬಂಗಾಡಿ ಅರಮನೆಯ ರವಿರಾಜ ಬಲ್ಲಾಳರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕೆ. ಅನಂತಪದ್ಮನಾಭ ಅಸ್ರಣ್ಣ, ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಗಣ್ಯರಾದ ಕಿಶೋರ್ ಡಿ. ಶೆಟ್ಟಿ, ಸುಬ್ರಾಯ ಪೈ ವಿಟ್ಲ, ಜಯಂತ ನಡುಬೈಲು, ಎಂ. ಜಯರಾಮ ಶೆಟ್ಟಿಗಾರ್, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಕುಳಾಲು, ಸತೀಶ್ ಪೂಜಾರಿ ನೇರೋಳ್ತಡ್ಕ, ಯಶೋಧರ ಬಲ್ಲಾಳ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ. ಟಿ. ವೆಂಕಟೇಶ್ವರ ಕರ್ಗಲ್ಲು ನೂಜಿ, ಯೋಗೀಶ್ ಕುಡ್ವ ಕುಂಡಡ್ಕ ಉಪಸ್ಥಿತರಿದ್ದರು.
ಸಮ್ಮಾನ
ನಿವೃತ್ತ ಸೈನಿಕರಾದ ದಯಾನಂದ ಗೌಡ, ಕೊರಗಪ್ಪ ಶೆಟ್ಟಿ ಜೇಡರಕೋಡಿ, ಬೋಳಿಗದ್ದೆ ಕೂಸಪ್ಪ ಶೆಟ್ಟಿ, ಕ್ರೀಡಾ ಪಟು ದೀಕ್ಷಿತ್ ಶೆಟ್ಟಿ ಅಬೀರಿ ಅವರನ್ನು ಸಮ್ಮಾನಿಸಲಾಯಿತು. ಶ್ರೀಮಂಧರ ಜೈನ್ ವಿಟ್ಲ ಸ್ವಾಗತಿಸಿದರು. ಜಿನ್ನಪ್ಪ ಗೌಡ ಪೆಲತ್ತಿಂಜ ಪ್ರಸ್ತಾವಿಸಿದರು. ಪದ್ಮನಾಭ ಚಪ್ಪುಡಿಯಡ್ಕ ವಂದಿಸಿದರು. ಕೃಷ್ಣಕಿಶೋರ್ ಭಟ್ ನಿರೂಪಿಸಿದರು. ಚಿದಾನಂದ ಪೆಲತ್ತಿಂಜ, ಶ್ರೀಪತಿ ನಾಯಕ್, ಅಶ್ವಿನಿ ಕುಂಡಡ್ಕ ಗೌರವಾರ್ಪಣೆ ನಡೆಸಿದರು.