Advertisement

ಬಾಟಲ್ ಹಿಡಿದು ಮಾದಕ ನೋಟ ಬೀರಿದ ಗಡಂಗ್ ರಕ್ಕಮ್ಮಾ  

01:10 PM Jul 31, 2021 | Team Udayavani |

ಬೆಂಗಳೂರು : ಕಿಚ್ಚ ಸುದೀಪ್ ನಟಿಸುತ್ತಿರುವ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅಭಿನಯಿಸಿದ್ದು ಸಿನಿ ರಸಿಕರಿಗೆ ತಿಳಿದ ವಿಚಾರ. ಇದೀಗ ವಿಕ್ರಾಂತ್ ರೋಣ ಸಿನಿಮಾದಲ್ಲಿ ಜಾಕ್ವೆಲಿನ್ ಪಾತ್ರದ ಹೆಸರು ರಿವೀಲ್ ಆಗಿದೆ.

Advertisement

ಇಂದು ಚಿತ್ರತಂಡ ಹೊಸ ಲುಕ್ ಗಳ ಜೊತೆಗೆ ಜಾಕ್ವೆಲಿನ್ ಅವರ ಹೆಸರನ್ನು ಸಹ ರಿವೀಲ್ ಮಾಡಿದೆ. ಅಂದಹಾಗೆ ಈ ಚಿತ್ರದಲ್ಲಿ ಗಡಂಗ್ ರಕ್ಕಮ್ಮಾ ಪಾತ್ರದಲ್ಲಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದಾರೆ.

ಇನ್ನು ಕೋವಿಡ್-19 ಕಾರಣದಿಂದ ‘ವಿಕ್ರಾಂತ್ ರೋಣ’ ಸಿನಿಮಾ ಶೂಟಿಂಗ್ ಕೆಲದಿನ ಸ್ಥಗಿತವಾಗಿತ್ತು. ಕೇವಲ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇತ್ತು. ಇತ್ತೀಚೆಗೆ ಅದನ್ನೂ ಕೂಡ ಚಿತ್ರತಂಡ ಪೂರ್ಣಗೊಳಿಸಿದ್ದು, ಮುಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಕಿಚ್ಚ ಸುದೀಪ್ ಜೊತೆ ಖ್ಯಾತ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕುವ ಮೂಲಕ ಅಧಿಕೃತವಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.

ಬಹುವೆಚ್ಚದ ಸಿನಿಮಾ ಕುರಿತು ಚಿತ್ರತಂಡ ಆಗಾಗ ಮಾಹಿತಿ ನೀಡುತ್ತಿತ್ತು. ಜಾಕ್ವೆಲಿನ್ ಪಾತ್ರದ ಕುರಿತು ಶೀಘ್ರವೇ ತಿಳಿಸುವುದಾಗಿ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಈ ಹಿಂದೆ ತಿಳಿಸಿದ್ದರು. ಅದರಂತೆ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಕರ್ಷಕ ಪೋಸ್ಟರ್ ವೊಂದನ್ನು ಶೇರ್ ಮಾಡಿಕೊಂಡಿರುವ ಅವರು ‘ವಿಕ್ರಾಂತ್ ರೋಣ’ದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಗಡಂಗ್ ರಕ್ಕಮ್ಮ ಆಗಿ ಕಾಣಿಸಿಕೊಂಡಿದ್ದಾರೆ ಅಂತಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next