Advertisement

ಸ್ವಾತಂತ್ರ್ಯ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ

07:29 PM Oct 23, 2019 | mahesh |

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

Advertisement

1. ಭಾರತದ ಸಮಾಜ ಸುಧಾರಕರ ಸಾಲಿನಲ್ಲಿ, ಕಮಲಾದೇವಿ ಚಟ್ಟೋಪಾಧ್ಯಾಯರು ಪ್ರಮುಖ ಸ್ಥಾನ ಪಡೆಯುತ್ತಾರೆ.
2. ಅವರು ಮಂಗಳೂರಿನಲ್ಲಿಂ 1903ರ ಏಪ್ರಿಲ್‌ 3ರಂದು ಹುಟ್ಟಿದರು.
3. ಕಮಲಾದೇವಿ, ಹದಿನಾಲ್ಕನೇ ವಯಸ್ಸಿನಲ್ಲಿ ಮದುವೆಯಾಗಿ, ಎರಡೇ ವರ್ಷಗಳಲ್ಲಿ ಗಂಡನನ್ನು ಕಳೆದುಕೊಂಡರು. ಇದರಿಂದ ಧೃತಿಗೆಡದ ಕಮಾಲೇದೇವಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು.
4. ವಿಧವಾ ವಿವಾಹಕ್ಕೆ ಅವಕಾಶವೇ ಇಲ್ಲದ ಆ ಕಾಲದಲ್ಲಿ ಅವರು, ಕವಿ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರನ್ನು ಮರು ಮದುವೆಯಾದರು.
5. 1923ರಲ್ಲಿ ಓದು ಮುಗಿಸಿ ವಿದೇಶದಿಂದ ಪತಿಯೊಂಡನೆ ಭಾರತಕ್ಕೆ ಮರಳಿದ ಅವರು, ಮಹಾತ್ಮಾ ಗಾಂಧಿಯ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು.
6. 1930ರ “ದಂಡಿ’ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಕಮಲಾದೇವಿ ಜೈಲಿಗೂ ತೆರಳಿದರು.
7. ಎರಡನೆಯ ಜಾಗತಿಕ ಯುದ್ಧ ಪ್ರಾರಂಭವಾದಾಗ, ಕಮಲಾದೇವಿ ಜಗತ್ತನ್ನೆಲ್ಲ ಸುತ್ತು ಹಾಕಿ, ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಯತ್ನಪಟ್ಟರು. ಹಾಗೆಯೇ ಯುದ್ಧ ನಿರಾಶ್ರಿತರ ಪುನರ್ವಸತಿಗಾಗಿ ಶ್ರಮಿಸಿದರು.
8. ಕನ್ನಡದ ಮೊದಲ “ಮೂಕಿ ಸಿನಿಮಾ ಮೃಚ್ಛಕಟಿಕ” ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
9. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಅನೇಕ ಕರಕುಶಲ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಿದರು. ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆಯೂ ಆದರು.
10. ಕರಕುಶಲಕರ್ಮಿಗಳಿಗೆ ನೆರವಾಗಲು ಅನೇಕ ಸಂಘ-ಸಂಸ್ಥೆಗಳ ಸ್ಥಾಪನೆಗೆ ಕಮಲಾದೇವಿಯವರೇ ಕಾರಣ.

ಸಂಗ್ರಹ: ಪ್ರಿಯಾಂಕ

Advertisement

Udayavani is now on Telegram. Click here to join our channel and stay updated with the latest news.

Next