Advertisement
1. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು 1857ರಲ್ಲಿ. ಆ ಸಂಗ್ರಾಮವನ್ನು “ಸಿಪಾಯಿ ದಂಗೆ’ ಅಂತಲೂ ಗುರುತಿಸುತ್ತಾರೆ.2. ಸಿಪಾಯಿ ದಂಗೆಯ ಮುಖ್ಯ ರೂವಾರಿ ಮಂಗಲ್ ಪಾಂಡೆ.
3. ಹಸು ಮತ್ತು ಹಂದಿಯ ಮೈಯ ಕೊಬ್ಬಿನಿಂದ ಲೇಪಿಸಿದ ಬಾಂಬುಗಳನ್ನು ಕಚ್ಚಿ ಎಸೆಯಬೇಕಿತ್ತು. ಆದರೆ ಇದನ್ನು ವಿರೋಧಿಸಿದ ಮಂಗಲ್ ಪಾಂಡೆ ಮತ್ತು ತಂಡದವರು ಆಂಗ್ಲರ ಮೇಲೆ ದಂಗೆ ಎದ್ದರು.
4. 1857ರ ಮಾರ್ಚ್‌ನಲ್ಲಿ ಮಂಗಲ್ ಪಾಂಡೆ ಇಂಗ್ಲಿಷ್ ಅಧಿಕಾರಿಯೊಬ್ಬನ ಮೇಲೆ ಆಕ್ರಮಣ ಮಾಡುವ ಮೂಲಕ, ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯ್ತು.
5. ಅಧಿಕಾರಿಯ ಮೇಲೆ ಆಕ್ರಮಣ ಮಾಡಿ ತಲೆಮರೆಸಿಕೊಂಡ ಮಂಗಲ್ ಪಾಂಡೆಯನ್ನು ಹುಡುಕಿ, ಗಲ್ಲಿಗೇರಿಸಲು ಬ್ರಿಟಿಷ್ ಸರ್ಕಾರ ಆದೇಶಿಸಿತ್ತು.
6. ಇದರಿಂದ ಸಿಟ್ಟಿಗೆದ್ದ, ಭಾರತೀಯ ಸಿಪಾಯಿಗಳು ದೆಹಲಿ, ಲಕ್ನೊ, ಕಾನ್ಪುರ ಮುಂತಾದ ಕಡೆಗಳಲ್ಲಿ ದಂಗೆಯೆದ್ದರು.
7. ಮಂಗಲ್‌ಪಾಂಡೆಯನ್ನು ಸೆರೆ ಹಿಡಿದು, ಏಪ್ರಿಲ್ 18ರಂದು ಗಲ್ಲಿಗೇರಿಸಲು ಬ್ರಿಟಿಷ್ ಸರ್ಕಾರ ನಿರ್ಧರಿಸಿತು.
8. ಸಿಪಾಯಿಗಳ ದಂಗೆ ಕಾಡ್ಗಿಚ್ಚಿನಂತೆ ವ್ಯಾಪಿಸಿದಾಗ ಹೆದರಿದ ಬ್ರಿಟಿಷರು, ಹತ್ತು ದಿನ ಮುಂಚಿತವಾಗಿ; ಅಂದರೆ, ಏಪ್ರಿಲ್ 8ರಂದು ನೇಣಿಗೇರಿಸಿದರು.
9. ನೇಣುಗಂಬಕ್ಕೆ ಏರಿದಾಗ ಮಂಗಲ್ ಪಾಂಡೆಗೆ 29 ವರ್ಷ ವಯಸ್ಸು.
10. ಮಂಗಲ್ ಪಾಂಡೆಯ ಜೀವನವನ್ನಾಧರಿಸಿ, “ಮಂಗಲ್ ಪಾಂಡೆ: ದ ರೈಸಿಂಗ್’ ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಗಿದೆ.