Advertisement
1. ಒಮರ್ ಖಯ್ನಾಮ್ ಪರ್ಷಿಯಾದ ಹೆಸರಾಂತ ಕವಿ, ಗಣಿತಜ್ಞ, ಖಗೋಳ ಶಾಸ್ತ್ರಜ್ಞ ಮತ್ತು ತತ್ವಜ್ಞಾನಿ.2. ಆತ, 1048 ಇಸವಿಯಲ್ಲಿ ಪರ್ಷಿಯಾದ ನಿಶಾಪುರ್ ಎಂಬಲ್ಲಿ ಜನಿಸಿದ್ದ. ಆ ಪ್ರದೇಶ ಈಗ ಇರಾನ್‌ನಲ್ಲಿದೆ.
3. ಗಣಿತ ಮತ್ತು ಖಗೋಳಶಾಸ್ತ್ರದ ಶಿಕ್ಷಕನಾಗಿ ಹಾಗೂ ಜ್ಯೋತಿಷಿಯಾಗಿಯೂ ಆತ ಕೆಲಸ ಮಾಡಿದ್ದರು.
4. ಒಮರ್‌ನ ತಂದೆ ಇಬ್ರಾಹಿಂ ಖಯಾಮಿ, ವೈದ್ಯರಾಗಿದ್ದರು. ಒಮರ್ ಕೆಲ ಸಮಯ, ತಂದೆಯ ಕೆಲಸದಲ್ಲಿ ಸಹಾಯಕನಾಗಿದ್ದ.
5. ಖಗೋಳಶಾಸ್ತ್ರಜ್ಞನಾಗಿ ಆತ ಜಲಾಲಿ ಕ್ಯಾಲೆಂಡರ್ ಅನ್ನು ವಿನ್ಯಾಸಗೊಳಿಸಿದ.
6. ಆ ಕ್ಯಾಲೆಂಡರ್‌ನಲ್ಲಿ ಪ್ರತಿ 33 ವರ್ಷಗಳಿಗೊಮ್ಮೆ 8 ಅಧಿಕ ವರ್ಷಗಳನ್ನು ಗುರುತಿಸಲಾಗಿತ್ತು.
7. ಜಲಾಲಿ ಕ್ಯಾಲೆಂಡರ್‌ನಲ್ಲಿ ವರ್ಷಕ್ಕೆ 365.2424 ದಿನಗಳಿದ್ದವು. ಆಧುನಿಕ ಇರಾನಿನ ಕ್ಯಾಲೆಂಡರ್ ಕೂಡಾ ಒಮರ್‌ನ ಲೆಕ್ಕಾಚಾರಗಳನ್ನೇ ಆಧರಿಸಿದ್ದಾಗಿದೆ.
8. ಈಗ ಬಹುತೇಕ ಕಡೆ ಬಳಕೆಯಲ್ಲಿರುವ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತಲೂ ಒಮರ್‌ನ ಕ್ಯಾಲೆಂಡರ್ ಹೆಚ್ಚು ನಿಖರವಾಗಿತ್ತು.
9. ಒಮರ್‌ಖಯಾಮ್‌ನ ರುಬಾಯತ್ (ಪರ್ಷಿಯನ್ ಕವಿತೆಗಳು)ಗಳನ್ನು ಎಡ್ವರ್ಡ್ ಫಿಟ್ಜೆರಾಲ್ಡ್ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
10. 1970ರಲ್ಲಿ ಚಂದ್ರನ ಮೇಲಿನ ಕುಳಿಯೊಂದಕ್ಕೆ ಒಮರ್‌ನ ಹೆಸರು ಇಡಲಾಗಿದೆ.