Advertisement
1. ಡಾ. ವಿಕ್ರಮ್ ಸಾರಾಭಾಯಿ ಅವರನ್ನು, ಭಾರತ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ಎನ್ನುತ್ತಾರೆ.2. ಸಾರಾಭಾಯಿ ಅವರು 1919ರ ಆಗಸ್ಟ್ 12ರಂದು, ಗುಜರಾತ್‌ನ ಶ್ರೀಮಂತ ಉದ್ಯಮಿಗಳ ಕುಟುಂಬದಲ್ಲಿ ಜನಿಸಿದರು.
3. ವಿಕ್ರಮ್‌ರ ಇಡೀ ಕುಟುಂಬ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು.
4. ವಿಕ್ರಮ್ ಮದುವೆಯಾಗಿದ್ದು, ಹೆಸರಾಂತ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ಅವರನ್ನು.
5. ಅಚ್ಚರಿಯೆಂದರೆ, ಸಾರಾಭಾಯಿ ಕುಟುಂಬದವರೇ ಆ ಮದುವೆಗೆ ಹಾಜರಿರಲಿಲ್ಲ. ಯಾಕಂದ್ರೆ, ಅವರೆಲ್ಲ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತೊಡಗಿಕೊಂಡಿದ್ದರು.
6. ಸ್ವಾತಂತ್ರ್ಯಾ ನಂತರ, ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವಿಕ್ರಮ್ ಸಾರಾಭಾಯಿ, ಅಹಮದಾಬಾದ್‌ನಲ್ಲಿ ಚಾರಿಟಬಲ್ ಟ್ರಸ್ಟ್ ಒಂದನ್ನು ಪ್ರಾರಂಭಿಸಿದರು.
7. ಇಸ್ರೋದ ಸ್ಥಾಪಕರು ಕೂಡಾ ಅವರೇ.
8. ಕೇಬಲ್ ಟಿ.ವಿ.ಗಳು ಭಾರತಕ್ಕೆ ಕಾಲಿಟ್ಟಿದ್ದು ವಿಕ್ರಮ್ ಸಾರಾಭಾಯಿಯವರ ಪರಿಶ್ರಮದಿಂದ.
9. ಭಾರತದ ಮೊದಲ ಉಪಗ್ರಹ ಆರ್ಯಭಟ, ಸಾರಾಭಾಯಿಯ ಕನಸಿನ ಕೂಸು.
10. ಅಹಮದಾಬಾದ್‌ನ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸ್ಥಾಪಕ ಸದಸ್ಯರಲ್ಲೊಬ್ಬರು.
11. ವಿಕ್ರಮ್ ಸಾರಾಭಾಯಿ ಅವರು ಪಿಎಚ್.ಡಿ ಪದವಿ ಪಡೆದದ್ದು, ಸಿ.ವಿ. ರಾಮನ್‌ರ ಮಾರ್ಗದರ್ಶನದಲ್ಲಿ.
12. ತಿರುವನಂತಪುರಂನ ಥುಂಬಾ ರಾಕೆಟ್ ಉಡಾವಣಾ ಕೇಂದ್ರದ ಶಂಕುಸ್ಥಾಪನೆಗೆಂದು ಕೇರಳಕ್ಕೆ ಬಂದಿದ್ದಾಗ ವಿಕ್ರಮ್, ತೀವ್ರ ಹೃದಯಾಘಾತದಿಂದ ತೀರಿಕೊಂಡರು. ಆಗ ಅವರಿಗೆ ಕೇವಲ 52 ವರ್ಷ.
13. ಸಾರಾಭಾಯಿ ಅವರಿಗೆ ಶಾಂತಿ ಸ್ವರೂಪ ಭಟ್ನಾಗರ್ ಪುರಸ್ಕಾರ, ಪದ್ಮಭೂಷಣ, ಪದ್ಮವಿಭೂಷಣ (ಮರಣೋತ್ತರ) ಸಿಕ್ಕಿದೆ.
ಮಗ ಕಾರ್ತಿಕೇಯ ಸಾರಾಭಾಯಿ ಪರಿಸರ ತಜ್ಞರಾದರೆ, ಮಗಳು ಮಲ್ಲಿಕಾ ಸಾರಾಭಾಯಿ ನೃತ್ಯ ಕಲಾವಿದೆ.